Cow : ಕೆಸರಿನಲ್ಲಿ ಹೂತುಹೋಗಿದ್ದ ಹಸುವನ್ನು ರಕ್ಷಿಸಿದ ಬೈಕ್ ಸವಾರರು..!

Karkala News : ಅಮಾಸೆಬೈಲಿನ ಕಡೆಗೆ ಹೊರಟಿದ್ದ ಬೈಕ್ ಸವಾರರಿಗೆ ಕೆಸರಿನಲ್ಲಿ ಹೂತುಹೋಗಿದ್ದ ದನ ಕಂಡಿದ್ದು, ತಕ್ಷಣ ಬೈಕ್ ನಿಲ್ಲಿಸಿದ ಸವಾರರು ದನವನ್ನು ರಕ್ಷಿಸಿರುವ ಘಟನೆ ನಡೆದಿದೆ. ರಕ್ಷಿಸುವ ವೀಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿಅಪ್​ಲೋಡ್ ಮಾಡಲಾಗಿದೆ.

ಬೈಕರ್ ಆ್ಯನಿ ಅರುಣ್ ದಂಪತಿ ಮತ್ತು ಸಾಯಿಕಿರಣ್ ಶೆಟ್ಟಿ ಎನ್ನುವವರು ಬೈಕ್ ನಲ್ಲಿ ಹೋಗುತ್ತಿದ್ದಾಗ ಕೆಸರಿನಲ್ಲಿ ಹೂತುಹೋಗಿದ್ದ ದನವನ್ನು ಕಂಡು ಸಹಾಯಕ್ಕೆ ಮುಂದಾಗಿದ್ದಾರೆ.

ಅಮವಾಸೆಬೈಲು ರಸ್ತೆಯಲ್ಲಿ ಸಂಚರಿಸುತ್ತಿದ್ದಾಗ ಕೆಸರಿನಲ್ಲಿ ಹೂತುಹೋಗಿದ್ದ ದನವನ್ನು ಕಂಡು ಸಹಾಯ ಮಾಡಿದ್ದೇವೆ. ಹತ್ತಿರದಲ್ಲಿದ್ದ ಮಹಿಳೆಯೊಬ್ಬರು ನಮಗೆ ಕೈಗಳನ್ನು ಸ್ವಚ್ಛಗೊಳಿಸಲು ಸಹಾಯ ಮಾಡಿದರು ಎಂದು ಬರೆದು ತಮ್ಮ ಇನ್ಟಾಗ್ರಾಮ್ ನಲ್ಲಿ ಆ್ಯನಿ ಅರುಣ್ ಅವರು ಪೋಸ್ಟ್ ಮಾಡಿದ್ದಾರೆ. ಇವರ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

Congress Leader : ಕಾಂಗ್ರೆಸ್ ಮುಖಂಡನ ಸಾವು, ಹತ್ಯೆ ಶಂಕೆ..?!

Digital India : ಡಿಜಿಟಲ್ ಸುರಕ್ಷತೆಯೆಡೆಗೆ ವೈಯುಕ್ತಿಕ ದತ್ತಾಂಶ ಸುರಕ್ಷತಾ ಕಾನೂನು : ಸಂಸದ ತೇಜಸ್ವೀ ಸೂರ್ಯ

Lakshmi Hebbalkar : ಭಾನುವಾರವೂ ನಿಲ್ಲದ ಜನಪ್ರವಾಹ : ತಾಳ್ಮೆಯಿಂದಲೇ ಅಹವಾಲು ಆಲಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

About The Author