ಭಾರತ ಕ್ರಿಕೆಟ್ ತಂಡದ ಮಾಜಿ ಆಲ್ ರೌಂಡರ್ ಯುವರಾಜ್ ಸಿಂಗ್ ಅವರ ಜೀವನಗಾಥೆ ಚಲನಚಿತ್ರ ಆಗಿ ತೆರೆ ಮೇಲೆ ಬರುತ್ತಿದೆ. ಟೀಂ ಇಂಡಿಯಾದಲ್ಲಿ ಬ್ಯಾಟಿಂಗ್ ಇರಲಿ, ಫೀಲ್ಡಿಂಗ್ ಇರಲಿ, ಅಲ್ಲಿ ಯುವಿ ಆಟ ಮಾತ್ರ ಅಭಿಮಾನಿಗಳಿಗೆ ರಸದೌತಣ ಕೊಡುತ್ತಿತ್ತು. ಯುವರಾಜ್ ಸಿಂಗ್ ಕ್ರಿಕೆಟ್ನಿಂದ ದೂರವಾಗಿ ತುಂಬಾ ವರ್ಷಗಳಾಯ್ತು. ಅಭಿಮಾನಿಗಳು ಯುವರಾಜ್ ಸಿಂಗ್ ಅವ್ರನ್ನ ತುಂಬಾನೇ ಮಿಸ್ ಮಾಡಿಕೊಂಡಿದ್ದಾರೆ. ಆದ್ರೆ ಯುವಿ ಅಭಿಮಾನಿಗಳಿಗೆ ಖುಷಿ ಕೊಡುವಂಥ ಸುದ್ದಿಯೊಂದು ಹೊರಬಿದ್ದಿದೆ. ಅದು ಏನಂದ್ರೆ ಯುವರಾಜ್ ಸಿಂಗ್ ಅವ್ರ ಬಯೋಪಿಕ್ ಈಗ ತೆರೆಗೆ ಬರ್ತಿದೆ. ಭೂಷಣ್ ಕುಮಾರ್ ಅವರ ಟಿ ಸಿರೀಸ್ ಸಂಸ್ಥೆ ಮತ್ತು ರವಿ ಭಾಗಚಂದಕಾ ಅವರ ಸಹನಿರ್ಮಾಣದಲ್ಲಿ ಯುವಿ ಬಯೋಪಿಕ್ ರೆಡಿಯಾಗ್ತಿದೆ. ಇದೇ ಸಂಸ್ಥೆ ಈ ಹಿಂದೆ ಕ್ರಿಕೆಟ್ನ ದೇವರು ಸಚಿನ್ ತೆಂಡೂಲ್ಕರ್ ಅವ್ರ ಬಯೋಪಿಕ್ ‘ಸಚಿನ್; ಎ ಬಿಲಿಯನ್ ಡ್ರೀಮ್ಸ್’ ರೆಡಿ ಮಾಡಿತ್ತು.
ಯುವರಾಜ್ ಸಿಂಗ್ ತಮ್ಮ 13ನೇ ವಯಸ್ಸಿನಲ್ಲೇ ಕ್ರಿಕೆಟ್ ಆಡೋಕೆ ಶುರು ಮಾಡಿದ್ರು. ಪಂಜಾಬ್ ರಾಜ್ಯದ ಎಡಗೈ ಬ್ಯಾಟ್ಸ್ ಮನ್, ಆಲ್‌ರೌಂಡರ್ ಯುವಿ, 2007ರ ಟಿ20 ವಿಶ್ವಕಪ್ ಮತ್ತು 2011ರ ಏಕದಿನ ವಿಶ್ವಕಪ್ ಟೂರ್ನಿಗಳಲ್ಲಿ ಭಾರತ ಪ್ರಶಸ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇದಾದ ಬಳಿ ಯುವಿಗೆ ಕ್ಯಾನ್ಸರ್ ಕಾಡಿತ್ತು. ಆದರೂ ಛಲಬಿಡದೇ ಹೋರಾಡಿ ಗುಣಮುಖರಾಗಿದ್ದ ಅವರು 2012ರಲ್ಲಿ ಮತ್ತೆ ಕ್ರಿಕೆಟ್‌ಗೆ ಮರಳಿದ್ದರು. 2019ರ ಜೂನ್ 10ರಂದು ಯುವಿ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರು. ಲಕ್ಷಾಂತರ ಜನರಿಗೆ ನನ್ನ ಬಯೋಪಿಕ್ ತಲುಪಿಸುತ್ತಿರೋದು ಖುಷಿ ಕೊಟ್ಟಿದೆ ಅಂತ ಯುವರಾಜ್ ಸಿಂಗ್ ಹೇಳಿಕೊಂಡಿದ್ದಾರೆ. ಈ ಬಯೋಪಿಕ್ನಲ್ಲಿ ಯುವಿ ಪಾತ್ರವನ್ನು ರಣವೀರ್ ಸಿಂಗ್ ಅಥವಾ ವಿಕ್ಕಿ ಕೌಶಾಲ್ ಮಾಡುವ ಸಾಧ್ಯತೆ ಇದೆ. ಸಿನಿಮಾದಲ್ಲಿ ಇನ್ನೂ ಯಾರೆಲ್ಲಾ ಆಕ್ಟ್ ಮಾಡ್ತಾರೆ ಹಾಗೇ ಯಾವಾಗ ರಿಲೀಸ್ ಆಗುತ್ತೆ ಅನ್ನೋ ಕುತೂಹಲ ಮೂಡಿದೆ.