- Advertisement -
www.karnatakatv.net :ಏರ್ ಇಂಡಿಯಾ ವಿಮಾನ ಟೇಕ್ ಆಫ್ ವೇಳೆ ಹಕ್ಕಿಯೊಂದು ಡಿಕ್ಕಿಯಾದ ಪರಿಣಾಮ ವಿಮಾನ ಹಾರಾಟ ಸ್ಥಗಿತಗೊಂಡ ಘಟನೆ ರಾಯ್ಪುರ್ ಏರ್ಪೋರ್ಟ್ ನಲ್ಲಿ ಸಂಭವಿಸಿದೆ.
ರಾಯ್ಬುರ್ ನಿಂದ ದೆಹಲಿಗೆ ತೆರಳಬೇಕಾಗಿದ್ದ 179 ಪ್ರಯಾಣಿಕರನ್ನು ಹೊತ್ತಿದ್ದ ವಿಮಾನಕ್ಕೆ ಏಕಾಏಕಿ ಪಕ್ಷಿಯೊಂದು ಡಿಕ್ಕಿ ಹೊಡೆದಿದೆ. ಕೂಡಲೆ ಎಚ್ಚೆತ್ತ ಪೈಲಟ್ ವಿಮಾನವನ್ನು ನಿಯಂತ್ರಣಕ್ಕೆ ತಂದಿದ್ದಾರೆ. ವಿಮಾನದೊಳಗೆ ಕೇಂದ್ರ ಬುಡಕಟ್ಟು ಖಾತೆಯ ರಾಜ್ಯ ಸಚಿವೆ ರೇಣುಕಾ ಸಿಂಗ್ ಕೂಡ ಪ್ರಯಾಣಿಸುತ್ತಿದ್ದರು ಅಂತ ತಿಳಿದುಬಂದಿದೆ. ಇನ್ನು ಘಟನೆಯಲ್ಲಿ ವಿಮಾನಕ್ಕೂ ಹಾನಿಯಾಗಿದೆ ಅಂತ ಏರ್ಪೋರ್ಟ್ ಅಧಿಕಾರಿಗಳು ತಿಳಿಸಿದ್ದಾರೆ.
- Advertisement -