Saturday, July 5, 2025

Latest Posts

ಹಕ್ಕಿ ಗೂಡಿನಿಂದಾಗಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಸ್ಥಗಿತ…!

- Advertisement -

Kasaragod News:

ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಯೋಜನೆಯ ಅನ್ವಯ ತಲಪಾಡಿಯಿಂದ ಚೆರ್ಕಳವರೆಗಿನ ಮೊದಲ ರೀಚ್‍ನ ಕಾಮಗಾರಿ ಭರದಿಂದ ಸಾಗುತ್ತಿತ್ತು.  ಆದರೆ ಈ ಮಧ್ಯೆ ಹಾವಿನ ಮೊಟ್ಟೆ ದೊರೆತಿದೆ ಎಂದು ಹೆದ್ದಾರಿ ದುರಸ್ತಿ ಸ್ವಲ್ಪ ಸಮಯ ನಿಲ್ಲಿಸಲಾಗಿತ್ತು. ಇದೀಗ ಮತ್ತೆ ಅಂತಹುದ್ದೇ ಮತ್ತೊಂದು ವಿಚಾರಕ್ಕೆ ಈ ಹೆದ್ದಾರಿ ಕಾರ್ಯ ಸ್ಥಗಿತಗೊಂಡಿದೆ. ಚೆರ್ಕಳ ಜಂಕ್ಷನ್‍ನಲ್ಲಿರುವ ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ ಬೃಹತ್ ಮರವೊಂದರಲ್ಲಿ ಸುಮಾರು 100ಕ್ಕೂ ಅಧಿಕ ನೀರು ಕಾಗೆಗಳು ಮತ್ತು  ಕೊಕ್ಕರೆಗಳು ಗೂಡು ಕಟ್ಟಿರುವುದು ಕಂಡುಬಂದ ಕಾರಣ  ಇವುಗಳ ಸಂರಕ್ಷಣೆಗೆ 25 ದಿನ ರಸ್ತೆ ಕಾಮಗಾರಿಯನ್ನು ಸ್ಥಗಿತಗೊಳಿಸಲು ಗುತ್ತಿಗೆದಾರರ ಸೊಸೈಟಿ, ಅರಣ್ಯ ಇಲಾಖೆ ಮತ್ತು  ಪಕ್ಷಿ ತಜ್ಞರು ಸಮಾಲೋಚಿಸಿ ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ.

ರಸ್ತೆ ಮಧ್ಯೆ ಆನೆಗೆ ಕಾರಿನಲ್ಲಿ ಕೂರವಾಸೆ..! ಮುಂದೆ ನಡೆದದ್ದೇ ಬೇರೆ..!

ಎಣ್ಣೆ ಏಟಿನಲ್ಲೇ ಟೀಚರ್ ಪಾಠ…!

ಮನೆ ಖಾಲಿ ಮಾಡುವಂತೆ ಪಟ್ಟಣ ಪಂಚಾಯತ್ ಸೂಚನೆ..!

- Advertisement -

Latest Posts

Don't Miss