Monday, December 23, 2024

Latest Posts

ಇಂದು ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ‘ಚಿನ್ನಾರಿ ಮುತ್ತ’.!

- Advertisement -

ಕನ್ನಡ ಚಿತ್ರರಂಗದಲ್ಲಿನ ಜನಪ್ರಿಯ ನಟರಲ್ಲಿ ವಿಜಯ ರಾಘವೇಂದ್ರ ಕೂಡ ಒಬ್ಬರು. ಇವರು ‘ಚಿನ್ನಾರಿ ಮುತ್ತ’ ಚಿತ್ರದಲ್ಲಿ ಬಾಲನಟನಾಗಿ ನಟಿಸಿ ಮನೆ ಮಾತಾದರು. ಹಾಗೂ ಈ ಸಿನಿಮಾಕ್ಕೆ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

ಇಂದು ಕನ್ನಡ ಚಿತ್ರರಂಗದ ‘ಚಿನ್ನಾರಿ ಮುತ್ತ’ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಶಾಲೆಗೆ ಹೋಗುವ ಸಮಯದಲ್ಲಿ ಮೇಕಪ್ ಹಚ್ಚಿ ಸಿನಿಮಾಗಳಲ್ಲಿ ಮಿಂಚಿ, ವಿಭಿನ್ನವಾದ ಪಾತ್ರಗಳ ಮೂಲಕ ಗಮನಸೆಳೆದಿದ್ದಾರೆ.

ಚಿಕ್ಕ ವಯಸ್ಸಿನಲ್ಲೇ ಬಾಲನಟನಾಗಿ ‘ಕೊಟ್ರೇಶಿ ಕನಸು’ ಸಿನಿಮಾಕ್ಕೆ ರಾಷ್ಟ್ರ ಪ್ರಶಸ್ತಿ ಪಡೆದ ವಿಜಯ್ ರಾಘವೇಂದ್ರ ಇಂದು ಚಿತ್ರರಂಗದಲ್ಲಿ ಗಾಯಕ ಹಾಗೂ ನಟರಾಗಿ ಗುರುತಿಸಿಕೊಂಡಿದ್ದಾರೆ. ‘ಕಿಸ್ಮತ್’ ಸಿನಿಮಾ ಮೂಲಕ ನಿರ್ದೇಶಕರಾಗಿಯೂ ಕೂಡ ವಿಜಯ್ ಕೆಲಸ ಮಾಡಿದ್ದಾರೆ. ನಟನೆ, ಗಾಯನ ಮತ್ತು ಡ್ಯಾನ್ಸ್‌ ಮೂಲಕ ವಿಜಯ್ ರಾಘವೇಂದ್ರ ಅವರು ಪ್ರೇಕ್ಷಕರಿಂದ ಬಹಳ ಮೆಚ್ಚುಗೆ ಪಡೆದಿದ್ದಾರೆ.

ಅಷ್ಟೇ ಅಲ್ಲದೆ ಸದ್ಯ ರಿಯಾಲಿಟಿ ಶೋಗಳ ಜಡ್ಜ್ ಆಗಿಯೂ, ಅನೇಕ ಕಾರ್ಯಕ್ರಮಗಳ ನಿರೂಪಕರಾಗಿಯೂ ಕಾಣಿಸಿಕೊಳ್ಳುತ್ತಿದ್ದು, ಚಿತ್ರರಂಗದಲ್ಲಿ ಸಕ್ರಿಯವಾಗಿದ್ದಾರೆ. ಇನ್ನು ವಿಜಯ್ ರಾಘವೇಂದ್ರ ಅವರಿಗೆ ಸಿನಿ ಕಲಾವಿದರು ಮತ್ತು ಅವರ ಅಭಿಮಾನಿಗಳು, ಹುಟ್ಟು ಹಬ್ಬಕ್ಕೆ ಶುಭಾಶಯ ಕೋರಿದ್ದಾರೆ.

ಪ್ರಕೃತಿ ಪ್ರಭಾಕರ್, ಕರ್ನಾಟಕ ಟಿವಿ, ಸಿನಿಮಾ ಬ್ಯುರೋ

 

- Advertisement -

Latest Posts

Don't Miss