Bison : ರಸ್ತೆ ಮಧ್ಯೆ ಕಾಡುಕೋಣ ಪ್ರತ್ಯಕ್ಷ…!

Karkala News : ಬೆಳ್ಮಣ್ : ಕಾರ್ಕಳ ದ ಶಿರ್ವ ಪಿಲಾರುಖಾನ ರಸ್ತೆಯಲ್ಲಿ ಕಾಡುಕೋಣವೊಂದು ಪ್ರತ್ಯಕ್ಷವಾದ ಘಟನೆ ನಡೆದಿದೆ. ಕಾಡುಕೋಣವೊಂದು ರಸ್ತೆಗೆ ಬಂದು ವಾಹನ ಸವಾರರು ಆತಂಕಗೊಂಡ ಘಟನೆ ಪಿಲಾರುಖಾನ ಕಾಡು ಪ್ರದೇಶದಲ್ಲಿ ನಡೆದಿದೆ.

ಪಿಲಾರುಖಾನ ಅರಣ್ಯ ಪ್ರದೇಶದ ಸುತ್ತ ತಂತಿ ಬೇಲಿಯನ್ನು ಅಳವಡಿಸಿದ್ದು ಇದರಿಂದ ಒಂದು ಬದಿಯ ತಂತಿ ಬೇಲಿಯನ್ನು ದಾಟಿಕೊಂಡ ಬಂದ ದೊಡ್ಡ ಕಾಡುಕೋಣವೊಂದು ಮತ್ತೊಂದು ಬದಿಯ ಕಾಡಿಗೆ ಹೋಗಲು ಪರದಾಡಿತು.

ಈ ಸಂದರ್ಭದಲ್ಲಿ ಬೆಳ್ಮಣ್ ಶಿರ್ವ ಸಾಗುವ ವಾಹನ ಸವಾರರು ಕೆಲ ಕಾಲ ರಸ್ತೆಯಲ್ಲಿ ವಾಹನವನ್ನು ನಿಲ್ಲಿಸುವಂತಾಗಿತ್ತು. ಸುಮಾರು 15 ನಿಮಿಷಗಳ ಬಳಿಕ ಕಾಡುಕೋಣ ತಂತಿ ಬೇಲಿಯನ್ನು ದಾಟಿಕೊಂಡು ಮತ್ತೊಂದು ಬದಿಯ ಕಾಡಿಗೆ ತೆರಳಿದೆ.

Egg Supply : ಕರಾವಳಿಯಲ್ಲೂ ಕೊಳೆತ ಮೊಟ್ಟೆ ಪೂರೈಕೆ

Dog and Chicken: ಸಾಕಿದ ಕೋಳಿಯನ್ನು ತಿಂದಿದ್ದಕ್ಕೆ ನಾಯಿಯನ್ನು ದಾರುಣವಾಗಿ ಸಾಯಿಸಿದ ಪಾಪಿ

Basavaraj Bommai : ಬೆಂಗಳೂರು ಕಾನೂನು ಸುವ್ಯವಸ್ಥೆ ಕೈ ತಪ್ಪುತ್ತಿದೆ : ಬೊಮ್ಮಾಯಿ

About The Author