ದೇಶದಲ್ಲಿ ಶೀತಗಾಳಿ ದಿನೇ ದಿನೇ ಹೆಚ್ಚಾಗ್ತಿದೆ. ಈಗಾಗಲೇ ಉತ್ತರದ ಜನರು ಈ ಚಳಿಯಿಂದಾಗಿ ತತ್ತರಿಸಿ ಹೋಗಿದ್ದಾರೆ. ಇದೀಗ ದಕ್ಷಿಣದಲ್ಲೂ ಈ ಚಳಿ ಆರಂಭವಾಗಿದ್ದು ಕನಿಷ್ಠ ಮಟ್ಟಕ್ಕೆ ತಾಪಮಾನ ಕುಸಿಯುತ್ತಿದೆ.
ಅಂದಹಾಗೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸೋಮವಾರ ಕನಿಷ್ಠ ತಾಪಮಾನ 4.5 ಡಿಗ್ರಿ ಗಿಂತ ಕಡಿಮೆಯಾಗಿದೆ. ಅಲ್ಲದೇ ಈ ರೀತಿ ಆಗಿರೋದು ಇದು 4ನೇ ಬಾರಿ ಅಂತ ಹವಾಮಾನ ಇಲಾಖೆ ಹೇಳಿದೆ. ಇನ್ನು ವಾಯು ಗುಣಮಟ್ಟ ತೀವ್ರ ಕುಸಿತ ಕಾಣುತ್ತಿದ್ದು, ಹೀಗಾಗಿನೇ ನಿರ್ಬಂಧಗಳನ್ನು ಮತ್ತೆ ಜಾರಿಗೊಳಿಸಲಾಗ್ತಿದೆ.
ಜಮ್ಮು ಮತ್ತು ಕಾಶ್ಮೀರದ ಶ್ರೀ ನಗರದಲ್ಲಿ ತಾಪಮಾನ 3.4 ಡಿಗ್ರಿ ಇದ್ದು, ಹಲವು ಭಾಗಗಳಲ್ಲಿ ಮೈನಸ್ ತಾಪಮಾನ ದಾಖಲಾಗಿದೆ. ಇನ್ನು ರಾಜಸ್ಥಾನದ ಸಿಕಾರ್ ಜಿಲ್ಲೆಯಲ್ಲಿ ಸೋಮವಾರ ಮೈನಸ್ 0.4 ಡಿಗ್ರಿ ತಾಪಮಾನ ಇತ್ತು. ಅಲ್ಲದೇ ರಾಜಸ್ಥಾನದ ಹಲವಾರು ಪ್ರದೇಶಗಳಲ್ಲಿ 5 ಡಿಗ್ರಿಗಿಂತ ಕಡಿಮೆ ತಾಪಮಾನವಿದೆ. ಹರಿಯಾಣದಲ್ಲಿ ಕೂಡ ತಾಪಮಾನ ಶೂನ್ಯ ಡಿ.ಸೆ. ಗೆ ತಲುಪಿದ್ದು ಆತಂಕ ಸೃಷ್ಟಿಯಾಗಿದೆ.
ಹಿಮಾಚಲ ಪ್ರದೇಶದ ಹಲವೆಡೆ ಮೈನಸ್ 10 ಡಿಗ್ರಿ ಸೆಲ್ಸಿಯಸ್ ಇದ್ದು, ತೀವ್ರಮಟ್ಟದಲ್ಲಿ ಚಳಿ ಹೆಚ್ಚುತ್ತಿದೆ. ಅಲ್ಲದೆ ಇತ್ತ ಹರಿಯಾಣ , ಪಂಜಾಬ್ ನಲ್ಲೂ ತಾಪಮಾನ ಮಟ್ಟ ತೀರ ಕುಸಿಯುತ್ತಿದೆ.