ಧಾರವಾಡ: ಗುತ್ತಿಗೆದಾರರಿಂದ ಕಮೀಷನ್ ಆರೋಪ ಮಾಡಿದ್ದಾರೆ ಆದರೆ ನಾವಿನ್ನೂ ಯಾವುದೇ ಹೊಸ ಟೆಂಡರ್ ಕರೆದಿಲ್ಲ.ಹೊಸ ಕಾಮಗಾರಿ ಆರಂಭಿಸಿದ್ದರೆ ಈ ಪ್ರಶ್ನೆ ಉದ್ಭವಿಸುತ್ತಿತ್ತು ಇದರಲ್ಲಿ ಸತ್ಯ ಇದೆ ಅನ್ನಬಹುದಿತ್ತು.
ಹಳೆಯ ಬಿಲ್‌ಗಳೇ ಪೆಂಡಿಂಗ್ ಇವೆ ಯಾರು ಕೆಲಸ ಮಾಡಿದ್ದಾರೆ, ಯಾರು ಮಾಡಿಲ್ಲ ಅನ್ನೋದನ್ನು ನೋಡಬೇಕಿದೆ ಮುಂಚಿತ ಟೆಂಡರ್ ಕರೆದು ದುಡ್ಡಿಲ್ಲದೇ ಹಿಂದಿನ ಸರಕಾರ ಬಿಟ್ಟು ಹೋಗಿದೆ ಆಯಾ ಇಲಾಖಾವಾರು ಕೆಲಸ ನೋಡಿ ಬಿಲ್ ಬಿಡುಗಡೆ ಮಾಡಲಾಗುತ್ತೆ ಆದರೆ ಈ ರೀತಿ ಸುಮ್ಮನೆ ಆಪಾದನೆ ಮಾಡೋದರಿಂದ ಏನು ಅನುಕೂಲ? ದಾಖಲೆ ಇದ್ದರೆ ಕೊಡಬಹುದು ? ಹಳೆಯ ಬಿಲ್‌ಗಳನ್ನು ಕೊಟ್ಟೇ ಕೊಡಲಾಗುತ್ತೆ ಈಗಾಗಲೇ ಅನೇಕ ಜಿಲ್ಲೆಯಲ್ಲಿ ಬಾಕಿ ಬಿಲ್ ಬಿಡುಗಡೆಯಾಗುತ್ತಿವೆ ಧಾರವಾಡದ ಕರ್ನಾಟಕ ವಿವಿ ಅನುದಾನ ಬಾಕಿ ವಿಚಾರ
ಧಾರವಾಡದಲ್ಲಿ ಸಚಿವ ಸಂತೋಷ ಲಾಡ್ ಪ್ರತಿಕ್ರಿಯೆ :ಇದರಲ್ಲಿ ಯಾವುದೇ ರಾಜಕೀಯ ಇಲ್ಲ 2018 ರಿಂದ ಇಲ್ಲಿಯವರೆಗೆ ದುಡ್ಡು ಕೊಟ್ಟಿಲ್ಲ ಹೀಗಾಗಿ ಈಗ ರೂ. 230 ಕೋಟಿ ಬೇಕಾಗಿದೆ ಸಂಬಂಧಿಸಿದ ಸಚಿವರಿಗೆ ಮಾತನಾಡಿದ್ದೇನೆ. ಸಿಎಂ ಗಮನಕ್ಕೂ ಇದನ್ನು ತಂದಿದ್ದೇನೆ ಮುಂದೆ ಹಣಕಾಸು ಇಲಾಖೆ ಅನುಮತಿ ಪಡೆಯಲಾಗುವುದು. ಅನುಮತಿ ಪಡೆದು ಸಂಬಂಧಿಸಿದ ಸಚಿವರು ಅನುದಾನ ನೀಡುತ್ತಾರೆ.
Bjp : ಮಂಡ್ಯ : ಸರ್ಕಾರದ ವಿರುದ್ಧ ಬಿಜೆಪಿಗರ ಆಹೋರಾತ್ರಿ ಧರಣಿ ಸತ್ಯಾಗ್ರಹ