ಜಮ್ಮು ಕಾಶ್ಮೀರ ವಿಧಾನಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ತಕ್ಷವೇ ಅದನ್ನು ಹಿಂಪಡೆದಿದೆ. ಬೆಳಗ್ಗೆ 11 ಗಂಟೆ ಸುಮಾರಿಗೆ 44 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಜೆಪಿ ಘೋಷಿಸಿತ್ತು. ಸೋಶಿಯಲ್ ಮೀಡಿಯಾದಲ್ಲಿ ಪಟ್ಟಿಯನ್ನು ಹಂಚಿಕೊಂಡಿತ್ತು. ಆದ್ರೆ, ಕೆಲವೇ ಹೊತ್ತಿನಲ್ಲಿ ಪಟ್ಟಿಯನ್ನು ಡಿಲೀಟ್ ಮಾಡಿದೆ.
ಡಿಲೀಟ್ ಮಾಡಿರುವ ಪಟ್ಟಿಯಲ್ಲಿ ಮೂರು ಪ್ರಮುಖ ಹೆಸರು ನಾಪತ್ತೆಯಾಗಿವೆ. ಜಮ್ಮು ಕಾಶ್ಮೀರ ಬಿಜೆಪಿ ಅಧ್ಯಕ್ಷ ರವೀಂದರ್ ರೈನಾ, ಮಾಜಿ ಡಿಸಿಎಂಗಳಾದ ನಿರ್ಮಲ್ ಸಿಂಗ್, ಕವಿಂದರ್ ಗುಪ್ತಾ ಹೆಸರುಗಳು ಕಾಣೆಯಾಗಿದ್ದವು. ಈ ಪಟ್ಟಿಯಲ್ಲಿ ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್ ಅವರ ಸಹೋದ ದೇವೇಂದ್ರ ರಾಣಾ ಅವರ ಹೆಸರು ಇತ್ತು. ಅವರು ಇತ್ತೀಚಿಗೆ ನ್ಯಾಷನಲ್ ಕಾನ್ಫರೆನ್ಸ್ನಿಂದ ಬಿಜೆಪಿಗೆ ಸೇರ್ಪಡೆಯಾಗಿದ್ದರು.
ಬಿಜೆಪಿ ಬಿಡುಗಡೆ ಮಾಡಿದ್ದ ಮೊದಲ ಪಟ್ಟಿಯಲ್ಲಿ ಇಬ್ಬರು ಕಾಶ್ಮೀರಿ ಪಂಡಿತರು ಸೇರಿದಂತೆ, 14 ಮುಸ್ಲಿಂ ಅಭ್ಯರ್ಥಿ ಹೆಸರು ಇತ್ತು. ಜಮ್ಮು ಕಾಶ್ಮೀರದಲ್ಲಿ ಸೆಪ್ಟಂಬರ್ 19, 25 ಹಾಗೂ ಅಕ್ಟೋಬರ್ 1ರಂದು ಮೂರು ಹಂತಗಳಲ್ಲಿ ಮತದಾನ ನಡೆಯಲಿದೆ. ಅಕ್ಟೋಬರ್4 ರಂದು ಫಲಿತಾಂಶ ಪ್ರಕಟವಾಗಲಿದೆ.