ದರ್ಶನ್ ಫ್ಯಾನ್ಸ್ ಜೊತೆಗಿನ ವಿವಾದ ಸುಖಾಂತ್ಯ ಕಂಡ ಬೆನ್ನಲ್ಲೇ ನವರಸ ನಾಯಕ ಜಗ್ಗೇಶ್ ಗೆ ಬಿಜೆಪಿ ಕಡೆಯಿಂದ ಭರ್ಜರಿ ಗಿಫ್ಟ್ ಸಿಕ್ಕಿದೆ. ಬಿಜೆಪಿ ಉಸ್ತುವಾರಿಗಳ ಪೈಕಿ ಓರ್ವರಾಗಿ ಜಗ್ಗೇಶ್ ನೇಮಕಗೊಂಡಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ 10 ಮಂದಿ ಮುಖಂಡರನ್ನ ಉಸ್ತುವಾರಿಗಳನ್ನಾಗಿ ನೇಮಿಸಿ ಆದೇಶ ಹೊರಡಿಸಿದ್ದು, ಈ ಹತ್ತು ಮಂದಿ ಉಸ್ತುವಾರಿಗಳ ಪೈಕಿ ಜಗ್ಗೇಶ್ ಅವರ ಹೆಸರೂ ಇದೆ.

ಜಗ್ಗೇಶ್ ದಚ್ಚು ಫ್ಯಾನ್ಸ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆಂದು ಆರೋಪಿಸಿ ತೋತಾಪುರಿ ಸಿನಿಮಾ ಶೂಟಿಂಗ್ ವೇಳೆ ದರ್ಶನ್ ಅಭಿಮಾನಿಗಳು ಜಗ್ಗೇಶ್ರನ್ನ ಮುತ್ತಿಗೆ ಹಾಕಿದ್ದರು. ಅಲ್ಲದೇ ಕ್ಷಮೆ ಕೇಳುವಂತೆ ಒತ್ತಾಯಿಸಿದ್ದರು.
ಈ ವಿವಾದಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಪ್ರತಿಕ್ರಿಯಿಸಿ, ನನ್ನ ಸೆಲಿಬ್ರಿಟಿಗಳ ಪರವಾಗಿ ನಾನು ಜಗ್ಗೇಶ್ ಅವರ ಕ್ಷಮೆ ಕೇಳುತ್ತೇನೆ ಎಂದಿದ್ದಾರೆ. ಇದಕ್ಕೆ ಟ್ವೀಟ್ ಮೂಲಕ ಉತ್ತರಿಸಿರುವ ಜಗ್ಗೇಶ್ ದರ್ಶನ್ಗೆ ಧನ್ಯವಾದಗಳನ್ನೂ ತಿಳಿಸಿದ್ದಾರೆ. ಈ ಎಲ್ಲಾ ಬೆಳವಣಿಗೆ ನಡುವೆ ಜಗ್ಗೇಶ್ ಗೆ ಬಿಜೆಪಿಯಿಂದ ಗಿಫ್ಟ್ ಸಿಕ್ಕಿರುವುದು ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ.