Friday, July 11, 2025

Latest Posts

ಟಿಕೆಟ್​ ಹಂಚಿಕೆ ಬಗ್ಗೆ ಬಿಜೆಪಿಯಲ್ಲಿ ಯಾವ ಅಸಮಾಧಾನ ಇಲ್ಲ: ಡಿವಿಎಸ್​ ಸಮರ್ಥನೆ

- Advertisement -

ಮಂಡ್ಯ: ಬಿಜೆಪಿಯಿಂದ ಟಿಕೆಟ್​ ಹಂಚಿಕೆಯಲ್ಲಿ ಯಾವುದೇ ಅಸಮಾಧಾನವಿಲ್ಲ, ಪರಿಷತ್​ ಹಾಗೂ ರಾಜ್ಯಸಭಾ ಟಿಕೆಟ್​​ ಹಮಚಿಕೆಯಲ್ಲಿ ಎಲ್ಲಾ ವರ್ಗಗಳಿಗೂ ಪ್ರಾತಿನಿದ್ಯ ಕೊಟ್ಟಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ತಿಳಿಸಿದ್ದಾರೆ.

ಮಂಡ್ಯದಲ್ಲಿ ಮಾತನಾಡಿದ ಡಿವಿಎಸ್, ಎಲ್ಲರನ್ನೂ ಗುರುತಿಸುವ ಕಾರ್ಯ ಬಿಜೆಪಿ ಪಕ್ಷ ಮಾಡಿದೆ.

ಗೆಲ್ಲುವ ಪಕ್ಷವಾಗಿರುವುದರಿಂದ ಆಕಾಂಕ್ಷಿಗಳ ಸಂಖ್ಯೆಯೂ ಹೆಚ್ಚಿಸುತ್ತದೆ. ಕೆಲವೊಮ್ಮೆ ಆಯ್ಕೆ ಸಂದರ್ಭದಲ್ಲಿ ಗೊಂದಲ ಇರುವುದು ಸಹಜ. ವಾಸ್ತವವಾಗಿ ಎಲ್ಲರ ಸಹಮತ ಪಡೆದುಕೊಂಡೇ ಕೋರ್ ಕಮಿಟಿಯಲ್ಲಿ ಆಯ್ಕೆ ಪ್ರಕ್ರಿಯೆ ನಡೆದಿರುತ್ತದೆ. ವಿಧಾನಸಭೆ ಚುನಾವಣೆಗೆ ಕ್ರಿಯಾಶೀಲರು ಬೇಕಾಗುತ್ತಾರೆ. ಅದ್ದರಿಂದ ಜಗ್ಗೇಶ್​ ಅವರನ್ನು ರಾಜ್ಯಸಬೆಗೆ ಆಯ್ಕೆ ಮಾಡಿದ್ದೇವೆ ಎಂದರು.

ಜೆಡಿಎಸ್​ -ಕಾಂಗ್ರೆಸ್ ಅತೃಪ್ತರಿಂದ ಬಿಜೆಪಿಗೆ ವರದಾನವಾಗಲಿದೆ, ಜೆಡಿಎಸ್​​ನಲ್ಲಿ ಈಗಾಗಲೇ 6 ಅತೃಪ್ತರಿದ್ದಾರೆ, ಅವರೆಲ್ಲರೂ ಬಿಜೆಪಿ ಒಳ್ಳೆಯ ಪಾರ್ಟಿ ಅಂತಾ ತೀರ್ಮಾನ ಮಾಡಿದ್ದಾರೆ. ಇನ್ನು ಸಿದ್ದು-ಡಿಕೆಶಿ ಇವರಿಬ್ಬರಿಗೂ ಬುದ್ಧಿ ಕಲಿಸುವ ಆಲೋಚನೆ ಆ ಪಕ್ಷದಲ್ಲಿ ನಡೆಯುತ್ತಿದೆ. ಅವೆಲ್ಲವೂ ಬಿಜೆಪಿ ಪಾಲಿಗೆ ವರದಾನವಾಗಲಿವೆ ಎಂದು ತಿಳಿಸಿದರು.

 

- Advertisement -

Latest Posts

Don't Miss