Wednesday, June 19, 2024

Latest Posts

jagadish shetter; ಹಲವಾರು ನಾಯಕರು ಬಿಜೆಪಿಯಿಂದ ನೊಂದು ಬರ್ತಿದ್ದಾರೆ..!

- Advertisement -

 ಹುಬ್ಬಳ್ಳಿ: ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಇಂದಿನ ರಾಜಕೀಯದ ಬೆಳವಣಿಗೆ ಕುರಿತು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು. ಮುಂಬರುವ ದಿನಗಳಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಗೆ ಎಲ್ಲಾ ಪಕ್ಷಗಳು ಸಕಲ ಸಿದ್ದತೆಗಳನನ್ನು ನಡೆಸಿಕೊಳ್ಳುತ್ತಿದ್ದು ಆಪರೇಶನ್ ಹಸ್ತದ ಮೂಲಕ ಕಾಂಗ್ರೆಸ್ ಪಕ್ಷ ವಿಪಕ್ಷಗಳ ನಾಯಕರನ್ನು ತನ್ನತ್ತ ಸೆಳೆಯಲು ಗಾಳ ಬೀಸಿದೆ.

ಈಗಾಗಲೇ ಹಲವು ನಾಯಕರು ಕಾಂಗ್ರೆಸ್ ಪಕ್ಷಕ್ಕೆ ಸೇರಿಕೊಳ್ಳುತ್ತಿದ್ದು ಇದರ ಕುರಿತು ಶೆಟ್ಟರ್ ಅವರು ಬಿಜೆಪಿ ಯಲ್ಲಿನ ವ್ಯವಸ್ಥೆಯಿಂದ ಬಹಳಷ್ಟು ಜನ ನೊಂದು ಕಾಂಗ್ರೆಸ್ ಸೇರ್ಪಡೆ ಆಗ್ತಾ ಇದ್ದಾರೆ, ಸ್ವಯಿಚ್ಛೆಯಿಂದ ಪಕ್ಷದಿಂದ ಪಕ್ಷಕ್ಕೆ ಹೋದ್ರೆ ಅದು ಆಪರೇಷನ್ ಅಲ್ಲಾ ಹಾಗೂ ಅದರ ಅವಶ್ಯಕತೆನೂ ಇಲ್ಲಾ.ಮುನೇನಕೊಪ್ಪ ಅವರು ಪ್ರೆಸ್ ಮೀಟ್ ಕರೆದದ್ದು ನನಗೆ ಗೊತ್ತಿಲ್ಲ  ನಾನು ಈ ಬಗ್ಗೆ ಅವರೊಂದಿಗೆ ಮಾತನಾಡಿಲ್ಲ ಈ ಬಗ್ಗೆ ನಾನು ಏನು ಹೇಳೋಕೆ ಬರಲ್ಲ ಯಾಕೆ ಕರೆದಿದ್ದಾರೆ ಅಂತ ಅವರೇ ಹೇಳಬೇಕು ಇನ್ನು ಹಲವಾರು ನಾಯಕರು ಬಿಜೆಪಿಯಿಂದ ನೊಂದು ಬರ್ತಿದ್ದಾರೆ ಬಿಜೆಪಿ ದಿನದಿಂದ ದಿನಕ್ಕೆ ಕುಗ್ಗುತ್ತಿದೆ ಎಂದು ಮರುಕಪಟ್ಟರು.

ನಾಯಕನಿಲ್ಲದೆ ಬಿಜೆಪಿ ಸೊರಗುತ್ತಿದೆ  ರಾಜ್ಯದ ಅಧ್ಯಕ್ಷರ ಅವಧಿ ಮುಗಿದರೂ ಇದುವರೆಗೂ ನೇಮಕ ಮಾಡಲಾಗುತ್ತಿಲ್ಲ. ಅವರಿಗೆ ಈ ರೀತಿ ಶೋಚನಿಯ ಪರಿಸ್ಥಿತಿ ಯಾವುದೇ ರಾಷ್ಟ್ರೀಯ ಪಕ್ಷಕ್ಕೆ ಬಂದಿರ್ಲಿಲ್ಲ ಹೊರಟ್ಟಿ ಅವರಿಗೆ ಚೀಟಿ ಎತ್ತಿ ತಾತ್ಕಾಲಿಕವಾಗಿಯಾದರೂ ಪ್ರತಿಪಕ್ಷ ನಾಯಕನನ್ನು ಆಯ್ಕೆ ಮಾಡಿ ಎಂದಿದ್ದೆ ರಾಜ್ಯದ ಬಿಜೆಪಿ ನಾಯಕರ ಮೇಲೆ ನಂಬಿಕೆ ಕೇಂದ್ರದವರಿಗೆ ಹೋಗಿದೆ

ಮೋದಿಯವರನ್ನು ಬರಮಾಡಿಕೊಳ್ಳಲು ಅವರಿಗೆ ಅವಕಾಶ ಇರ್ಲಿಲ್ಲ ಬಿಜೆಪಿ ರಾಜ್ಯ ನಾಯಕರಿಗೆ ಬೀದಿಗೆ ಬೀಳುವಂತ ಪರಿಸ್ಥಿತಿ ಬಂದಿದೆ  ಈಗಿನ ಬಿಜೆಪಿ ಪಕ್ಷ ದಿನದಿಂದ ದಿನಕ್ಕೆ ಅದೋಗತಿಗೆ ಹೋಗ್ತಾ ಇದೆ   ಕಾಂಗ್ರೆಸ್ ಬಲವಾಗಿ ಬೆಳೀತಾ ಇದೆ  ಕಾಂಗ್ರೆಸ್ ಪಕ್ಷದ ಸಂಘಟನೆಗೆ ನಾನು ಪ್ರಯತ್ನ ಮಾಡ್ತಾ ಇದ್ದೇನೆ  ಮಿನಿಮಮ್ 15 ಸೀಟ್ ಲೋಕಸಭೆಯಲ್ಲಿ ಕಾಂಗ್ರೆಸ್ ಬರುತ್ತೆ. ಎಂದು ಹೇಳಿಕೆ ನೀಡಿದರು.

Pressmeet :ಶಂಕರಪಾಟೀಲ್‌ ಮುನೇನಕೊಪ್ಪ ಸುದ್ದಿಗೋಷ್ಠಿ; ಕುತೂಹಲ ಕೆರಳಿಸಿದ ನಡೆ..!

Shankar Patil Munenakoppa: ಮಹತ್ವದ ತಿರುವು ಪಡೆಯಲಿದೆಯಾ ಮುನೇನಕೊಪ್ಪ ಸುದ್ದಿಗೋಷ್ಠಿ.?

Police : ಅಂದರ್-ಬಾಹರ್ ಆಟ- 12 ಆರೋಪಿಗಳು ಅಂದರ್

- Advertisement -

Latest Posts

Don't Miss