ಪಿಎಸ್ಐ ನೇಮಕಾತಿ ಅಕ್ರಮ: ಬಿಜೆಪಿ-ಕಾಂಗ್ರೆಸ್ ನಡುವೆ ನೋಟಿಸ್ ಸಂಘರ್ಷ

ಬೆಂಗಳೂರು: ಆಡಳಿತಾರೂಢ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ನೋಟಿಸ್ ಸಂಘರ್ಷ ಶುರುವಾಗಿದೆ. ಪಿಎಸ್ಐ ಅಕ್ರಮ ನೇಮಕ ಸಂಬಂಧ ತಂತ್ರ- ಪ್ರತಿತಂತ್ರದಲ್ಲಿ ತೊಡಗಿರುವ ಕಾಂಗ್ರೆಸ್, ಬಿಜೆಪಿ ಪಕ್ಷದ ನಾಯಕರು ತೊಡಗಿದ್ದಾರೆ. ರಾಜಕೀಯ ಲಾಭ, ನಷ್ಟದ ಲೆಕ್ಕಾಚಾರದಲ್ಲಿ ಪರಸ್ಪರ ದಾಳ ಉರುಳಿಸುತ್ತಿರುವ ಉಭಯ ಪಕ್ಷಗಳು, ನೋಟಿಸ್ ಜಾರಿ ವಿಚಾರವನ್ನೇ ಅಸ್ತ್ರವನ್ನಾಗಿ ಮಾಡಿಕೊಳ್ಳಲು ಬಿಜೆಪಿ ಮುಂದಾಗಿದೆ ಎನ್ನಲಾಗುತ್ತಿದೆ.

ಪಿಎಸ್ಐ ನೇಮಕಾತಿ ಅಕ್ರಮದಲ್ಲಿ ತನಿಖೆಗೆ ಹಾಜರಾಗಿ ಸಹಕಾರ ನೀಡಬೇಕೆಂದು ಬಿಜೆಪಿ ನಾಯಕರು ಒತ್ತಾಯಿಸಿದ ಬೆನ್ನಲ್ಲೇ, ಬಿಜೆಪಿ ನಾಯಕರ ಒಳಮರ್ಮ ಅರಿಯುತ್ತಿದ್ದಂತೆ ಕಾಂಗ್ರೆಸ್ ಪಕ್ಷದ ನಾಯಕ ಎಚ್ಚೆತ್ತುಕೊಂಡಿದ್ದಾರೆ.

ತನಿಖೆಯ ನೆಪದಲ್ಲಿ ತಮ್ಮನ್ನ ಸಿಲುಕಿಸಿ ಪಿಎಸ್ಐ ಅಕ್ರಮದ ಕೆಸರನ್ನ ತಮ್ಮ ಪಕ್ಷಕ್ಕೆ ಬಳಿಯಬಹುದೆಂದು ಅರಿತ ಕೈ ನಾಯಕರು, ಅದೇ ಕಾರಣಕ್ಕೆ ಸಿಐಡಿ ಮುಂದೆ ಹಾಜರಾಗದಂತೆ ಪ್ರಿಯಾಂಕ್ ಖರ್ಗೆಗೆ ಸೂಚಿಸಿದ್ದಾರೆ ಎನ್ನಲಾಗಿದೆ. ಆದ್ರೇ ಈ ಮೊದಲು ನಾಯಕರ ಸೂಚನೆಯಂತೆ ತನಿಖಾಧಿಕಾರಿಗಳ ಮುಂದೆ ಹಾಜರಾಗದೆ ದೂರ ಉಳಿದಿದ್ದರು ಎನ್ನಲಾಗಿದೆ.

ವಕೀಲರ ಮೂಲಕ ಲಿಖಿತ ರೂಪದಲ್ಲಿ ಪ್ರತಿಕ್ರಿಯೆ ನೀಡಿದ್ದ ಶಾಸಕ ಪ್ರಿಯಾಂಕ್ ಖರ್ಗೆ, ಇದೀಗ ಮತ್ತೊಮ್ಮೆ ಸಾಕ್ಷ್ಯ ಸಮೇತ ತನಿಖಾಧಿಕಾರಿ ಮುಂದೆ ಹಾಜರಾಗುವಂತೆ ಮತ್ತೊಮ್ಮೆ ನೋಟಿಸ್ ನೀಸಲಾಗಿದೆ. ಎರಡು ದಿನಗಳಲ್ಲಿ ತನಿಖಾಧಿಕಾರಿ ಮುಂದೆ ಹಾಜರಾಗುವಂತೆ ಪ್ರಿಯಾಂಕ್ ಖರ್ಗೆಗೆ ನೋಟಿಸ್ ನಲ್ಲಿ ಸೂಚಿಸಲಾಗಿದೆ.

ನೋಟಿಸ್ ಸಂಬಂಧ ಕಾಂಗ್ರೆಸ್ ನಾಯಕರ ನಡೆ ಏನು ಎಂಬುದು ಕುತೂಹಲ ಮೂಡಿಸಿದೆ. ಬಿಜೆಪಿ ತಂತ್ರಕ್ಕೆ ಪ್ರತಿತಂತ್ರ ರೂಪಿಸಲು ಮತ್ತೊಂದು ಆಟ ಆಡಲಿದೆಯಾ ಎಂಬ ತೀವ್ರ ಕುತೂಹಲವನ್ನು ಹಟ್ಟು ಹಾಕಿದೆ.

About The Author