Banglore news:
ಇನ್ನೇನು ಚುನಾವಣೆ ಹತ್ತಿರವಾಗುತ್ತಿದ್ದಂತೆ ಬಿಜೆಪಿ ಕಳಿಗಳು ಅಖಾಡಕ್ಕೆ ಇಳಿಯಲು ಸಿದ್ಧರಾಗಿದ್ದಾರೆ.ಈ ಬಾರಿ ಹೆಚ್ಚು ಗೆಲುವನ್ನು ಸಾಧಿಸುವ ಉದ್ದೇಶದಿಂದ ರಾಜ್ಯಾದ್ಯಾಂತ ಪ್ರವಾಸ ಕೈಗೊಳ್ಳುವ ತೀರ್ಮಾನದಲ್ಲಿದೆ ಬಿಜೆಪಿ ಪಡೆ.ಅದಕ್ಕಾಗಿಯೇ ವಿಶೇಷ 50 ಅಜೆಂಡಾವನ್ನು ಕೈಗೆತ್ತಿಕೊಂಡಿದ್ದಾರೆ ಬಿಜೆಪಿ ನಾಯಕರು.
ಏನಿದು 50 ಅಜೆಂಡಾ..?
ಬಜಪಿ ಪಕ್ಷ ಸದ್ಯ ಅಧಿಕಾರದಲ್ಲಿದೆ. ಆದರೆ ಮುಂದಿನ ಚುನಾವಣೆ ಫಲಿತಾಂಶ ಹೇಳತೀರದ್ದಾಗಿದೆ. ಆದುದರಿಂದ ಬಿಜೆಪಿ ಪಕ್ಷದ ನಾಯಕರು ಒಟ್ಟಾಗಿ ಸೇರಿ ಚುನಾವಣೆಗೆ ಹೊಸ ತಯಾರಿಯನ್ನು ಮಾಡುತ್ತಿದ್ದಾರೆ. ಒಂದೆಡೆ 50 ಕ್ಷೇತ್ರಗಳನ್ನು ಗುರಿಯಾಗಿಟ್ಟುಕೊಂಡು ಆ ಎಲ್ಲಾ ಪ್ರದೇಶಗಳಿಗೆ ಪ್ರವಾಸ ಕೈಗೊಳ್ಳುವ ಪ್ಲಾನ್ ಹಾಕಿಕೊಂಡಿದ್ದಾರೆ. ಹಾಗೆಯೇ ನಾಯಕರುಗಳು ತಮ್ಮ ಕ್ಷೇತ್ರ ಮಾತ್ರವಲ್ಲದೆ ತಮ್ಮ ಸಮೀಪದ ಕ್ಷೇತ್ರದಲ್ಲಿಯೂ ಪ್ರಚಾರ ಕೈಗೊಳ್ಳುವಂತೆ ಸೂಚಿಸಲಾಗಿದೆ.ಹೀಗೆ ಒಂದು ಜಿಲ್ಲೆಯ 2 ಕ್ಷೇತ್ರಗಳಿಗೆ ಪ್ರವಾಸ ಕೈಗೊಳ್ಳುವಂತೆ ತಿಳಿಸಲಾಗಿದೆ. ಹಾಗೆಯೇ ಈ ಬಾರಿ ಬಿಜೆಪಿಗರ ಪ್ರಮುಖ ಟಾರ್ಗೆಟ್ ಗೋಕಕ್ ಕ್ಷೇತ್ರವಾಗಿದೆ. ಗೆದ್ದಿರುವ ಕ್ಷೇತ್ರ,2 ಗೆಲ್ಲುವ ಸಮೀಪದಲ್ಲಿರುವ ಕ್ಷೇತ್ರದಲ್ಲಿ ನಿಗಾ ಇರಿಸಬೇಕಾಗಿದೆ. ಸಿಎಂ ಈ ಬಾರಿ 50 ಕ್ಷೇತ್ರಗಳಿಗೆ ಪ್ರವಾಸ ಕೈಗೊಳ್ಳಲಿದ್ದಾರೆ. ಮತ್ತು ಬಿಜೆಪಿ ಸಕಲ ತಯಾರಿಯಲ್ಲಿದ್ದು ಈ ಪ್ರವಾಸದ ದಿನಾಂಕ ಮಾತ್ರ ನಿಗದಿಯಾಗುವುದಷ್ಟೇ ಬಾಕಿ ಇದೆ. ಇದೇ ಈ ಬಾರಿಯ 50 ಅಜೆಂಡಾವಾಗಿದೆ.
ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಇಂದಿನಿಂದ ರಾಜ್ಯ ಪ್ರವಾಸ
ಸ್ವಾತಂತ್ರ್ಯ ಹೋರಾಟಗಾರ ತಮ್ಮಣ್ಣಪ್ಪ ಬುದ್ನಿ ನಿಧನಕ್ಕೆ ಸಿಎಂ ಬೊಮ್ಮಾಯಿ ಸಂತಾಪ