ಬೆಳಗಾವಿ ಮಹಾನಗರ ಪಾಲಿಕೆ ಮೇಲೆ ಬಿಜೆಪಿ ಧ್ವಜ ಹಾರಲಿದೆ..!

www.karnatakatv.net :ಬೆಳಗಾವಿ: ನಗರದ ಮಹಾನಗರ ಪಾಲಿಕೆ ಮತದಾನ ಹಿನ್ನೆಲೆ ಸಂಸದೆ ಮಂಗಲ ಸುರೇಶ್ ಅಂಗಡಿ ಪುತ್ರಿಯರ ಜೊತೆ ತೆರಳಿ ಮತದಾನ ಮಾಡಿದರು.

ಬೆಳಗಾವಿಯ ವಾರ್ಡ್ ನಂ.17ರ ಸದಾಶಿವನಗರದ ಮತಗಟ್ಟೆ ಕೇಂದ್ರ 110ರಲ್ಲಿ ಸಂಸದೆ ಮಂಗಲ ಅಂಗಡಿ ಮತದಾನ ಮಾಡಿದರು. ಈ ವೇಳೆ ಮಂಗಲ ಅಂಗಡಿ ಅವರಿಗೆ ಪುತ್ರಿಯರಾದ ಶ್ರದ್ಧಾ ಶೆಟ್ಟರ್, ಸ್ಫೂರ್ತಿ ಪಾಟೀಲ್ ಸಾಥ್ ನೀಡಿದರು. ನಂತರ ಮಾತನಾಡಿ, ಪ್ರಧಾನಿ ಮೋದಿ, ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಮುಖ್ಯಮಂತ್ರಿ ಬೊಮ್ಮಾಯಿ ಅವರ ಅಭಿವೃದ್ಧಿ ಕಾರ್ಯ ನೋಡಿ ಜನ ಮತ ಹಾಕಲಿದ್ದಾರೆ.  ಬೆಳಗಾವಿ ಮಹಾನಗರ ಪಾಲಿಕೆ ಮೇಲೆ ಈ ಬಾರಿ ಬಿಜೆಪಿ ಧ್ವಜ ಹಾರಲಿದೆ. 45ಕ್ಕೂ ಹೆಚ್ಚು ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ. ಇನ್ನು ಕೊರೊನಾದಿಂದಾಗಿ ಬೆಲೆ ಏರಿಕೆ ಆಗಿದೆ ಮುಂದಿನ ದಿನಗಳಲ್ಲಿ ಎಲ್ಲವೂ ಸರಿ ಹೋಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಾಗೇಶ್ ಕುಂಬಳಿ, ಕರ್ನಾಟಕ ಟಿವಿ- ಬೆಳಗಾವಿ

About The Author