ಬೆಂಗಳೂರು: ಸಮಾಜಘಾತುಕ ಚಟುವಟಿಕೆಗಳಲ್ಲಿ ಭಾಗಿಯಾಗುವ ಅಪರಾಧಿಗಳ ಮಾಹಿತಿ ನೀಡಿದರೆ ಭಾರೀ ಮೊತ್ತದ ಬಹುಮಾನ ನೀಡಲು ಸರ್ಕಾರ ನಿರ್ಧರಿಸಿದೆ. ಮಹಿಳೆ, ಮಕ್ಕಳ ಮೇಲೆ ದೌರ್ಜನ್ಯ, ಕಳ್ಳ ಸಾಗಾಣಿಕೆ, ಡ್ರಗ್ಸ್ ಸಾಗಾಣಿಕೆ, ಆಯುಧ ಕಳ್ಳ ಸಾಗಾಣಿಕೆ ಸೇರಿದಂತೆ ಸಮಾಜಘಾತುಕ ಚಟುವಟಿಕೆಗಳಲ್ಲಿ ಭಾಗಿಯಾದ ಅಪರಾಧಿಗಳ ಬಗ್ಗೆ ಮಾಹಿತಿ ನೀಡಿದರೆ ಬಹುಮಾನ ನೀಡಲಾಗುವುದು.
ಕೆಡಿಪಿ ಸಭೆಗೆ ಜೆಡಿಎಸ್ ಶಾಸಕರು ಗೈರು
ಉದ್ಘೋಷಿತ ಅಪರಾಧಿಗಳ ಸುಳಿವು ನೀಡುವ ಖಾಸಗಿ ಮಾಹಿತಿದಾರರಿಗೆ 5 ಲಕ್ಷ ರೂಪಾಯಿವರೆಗೆ ಬಹುಮಾನ ನೀಡಲಾಗುತ್ತದೆ. ರಾಷ್ಟ್ರೀಯ ಸುರಕ್ಷತೆ, ಕಾನೂನು ಸುವ್ಯವಸ್ಥೆ ಹಿತದೃಷ್ಟಿಯಿಂದ ಈ ತೀರ್ಮಾನ ಕೈಗೊಳ್ಳಲಾಗಿದ್ದು, ಡಿಜಿ ಮತ್ತು ಐಜಿಪಿಗೆ ವಿಶೇಷ ಆರ್ಥಿಕ ವಿತ್ತಾಧಿಕಾರ ನೀಡಲು ಸರ್ಕಾರ ಮುಂದಾಗಿದೆ. ಪ್ರಕರಣದ ತೀವ್ರತೆಯ ಪರಿಗಣಿಸಿ ಬಹುಮಾನದ ಮೊತ್ತವನ್ನು ನಿರ್ಧರಿಸಲಾಗುವುದು. 20 ಸಾವಿರದಿಂದ 5 ಲಕ್ಷ ರೂಪಾಯಿವರೆಗೆ ಬಹುಮಾನ ನೀಡಲಾಗುವುದು.