www.karnatakatv.net : ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದರೆ ಬಿಜೆಪಿ ಕೆಟ್ಟ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಬಿಎಸ್ ವೈ ಅವರನ್ನು ಭೇಟಿ ಮಾಡಿದ ನಂತರ ದಿಂಗಾಲೇಶ್ವರ ಶ್ರೀಗಳು ಪ್ರತಿಕ್ರಿಯಿಸಿದ್ದಾರೆ. ಸಿಎಂ ಭೇಟಿ ಬಳಿಕ ಮಾತನಾಡಿದ ಶ್ರೀಗಳು, ಯಡಿಯೂರಪ್ಪ ಕೇವಲ ಲಿಂಗಾಯತ ನಾಯಕರಲ್ಲ. ಇವರು ಸಿಎಂ ಸ‍್ಥಾನದಲ್ಲಿ ಇದ್ದಾಗಲೇ ಬದಲಾವಣೆ ಪ್ರಶ್ನೆ ಏಕೆ ಎಂದರು. ಸದ್ಯ ಎಚ್ಚರಿಕೆ ನೀಡಿ ಹೋಗುತ್ತಿದ್ದೇವೆ ಅಷ್ಟೆ. ಸಿಎಂ ಅವರನ್ನು ಬದಲಾವಣೆ ಮಾಡಿ ನೋಡೋಣ. ಬದಲಾವಣೆ ಚರ್ಚೆ ನಡೆದರೆ ಮುಂದಿನ ದಿನಗಳಲ್ಲಿ 500 ಮಂದಿ ಮಠಾಧೀಶರು ಸೇರುತ್ತೇವೆ ಎಂದು ಹೈಕಮಾಂಡ್ ಗೆ ಶ್ರೀಗಳು ಎಚ್ಚರಿಕೆ ನೀಡಿದ್ದಾರೆ.




