Sunday, May 26, 2024

Latest Posts

ರಕ್ತದ ಕಣ ಕಣದಲ್ಲಿ ಬಿಜೆಪಿ ಇದೆ. ನನ್ನ ಮನೆಗೆ ನಾನು ಮರಳಿ ಬಂದಂತಿದೆ: ಗಾಲಿ ಜನಾರ್ಧನ ರೆಡ್ಡಿ

- Advertisement -

political News: ಇಂದು ಗಾಲಿ ಜನಾರ್ಧನ ರೆಡ್ಡಿ ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ಹಲವು ಬಿಜೆಪಿ ನಾಯಕರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.

ಈ ವೇಳೆ ಮಾತನಾಡಿದ ರೆಡ್ಡಿ, ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ವಿಸರ್ಜನೆ ಮಾಡಿ ಬಿಜೆಪಿ‌ ಸೇರಿದ್ದೇವೆ. ನಾನು, ನನ್ನ ಪತ್ನಿ, ಪಕ್ಷದವರು ಸೇರ್ಪಡೆಯಾಗಿದ್ದೇವೆ. ಬಿಜೆಪಿ‌ ಸೇರಿರುವುದು ನನ್ನ ಅದೃಷ್ಟ. ಬಿಜೆಪಿ ಕರ್ನಾಟಕಲ್ಲಿ ನೆಲೆಯೂರಲು ಬಿಎಸ್ ವೈ ಕಾರಣ. ಅವರ ಕ್ಯಾಬಿನೆಟ್ ನಲ್ಲಿ ಕೆಲಸ‌ ಮಾಡಿದ್ದೆ. ಇಂದು ವಿಜಯೇಂದ್ರ ಜೊತೆ ಇದ್ದೇನೆ. ತಂದೆ ಮಗನ ಜೊತೆ ಇರೋದೆ ನನ್ನ ಅದೃಷ್ಟ ಎಂದಿದ್ದಾರೆ.

ಸಂತೋಷಕ್ಕೆ‌ ಮಾತನಾಡಲು ಸಾಧ್ಯವಾಗ್ತಿಲ್ಲಾ. ವಿಜಯೇಂದ್ರ ನೇತೃತ್ವದಲ್ಲಿ ಎಲ್ಲರೂ ಕೆಲಸ‌ ಮಾಡುತ್ತೇವೆ. ಯಾವುದೇ ಕಂಡಿಷನ್,‌ ಫಲಾಪೇಕ್ಷೆ ಇಲ್ಲದೇ ಸೇರಿದ್ದೇನೆ. ಪಕ್ಷ ಕೊಡುವ ಜವಾಬ್ದಾರಿ ನಿರ್ವಹಿಸುತ್ತೇನೆ. ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ‌ಮಾಡುತ್ತೇನೆ. ಮನೆಗೆ ಮತ್ತೆ ವಾಪಾಸ್ ಬಂದರೋ ಹಾಗಿದೆ. ರಕ್ತದ ಕಣ ಕಣದಲ್ಲಿ ಬಿಜೆಪಿ ಇದೆ. ಪಕ್ಷದ ಕಚೇರಿಗೆ 13 ವರ್ಷಗಳ ನಂತರ ಬಂದಿದ್ದೇನೆ ಅನಿಸ್ತಿಲ್ಲಾ. ನಿನ್ನೆ ಹೋಗಿ ಇಂದು ಬಂದಿರುವ ಹಾಗಿದೆ ಎಂದು ಗಾಲಿ ಜನಾರ್ಧನ ರೆಡ್ಡಿ ಹೇಳಿದ್ದಾರೆ.

ಅಚ್ಛೇ ದಿನ್ ತರುವ ಭರವಸೆಯನ್ನು ಹುಸಿಗೊಳಿಸಿದ ಮೋದಿಯವರನ್ನು ಜನರು ಯಾಕೆ ನಂಬುತ್ತಾರೆ?: ಸಿಎಂ

ಬೆಳಗಾವಿಯಲ್ಲಿ ಯಾವುದೇ ವಿರುದ್ಧ ವಾತಾವರಣ ಇದ್ದರೂ ಅದನ್ನು ಶಮನ ಮಾಡುವೆ: ಜಗದೀಶ್ ಶೆಟ್ಟರ್

ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ರಾಜ್ಯ ಸಾಮಾಜಿಕ ಜಾಲತಾಣ ಪ್ರಕೋಷ್ಠದ ಸಭೆ

- Advertisement -

Latest Posts

Don't Miss