Dharwad News: ಧಾರವಾಡ: ಧಾರವಾಡದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಸಂತೋಷ್ ಲಾಡ್, ಸಿಎಂ ಪತ್ನಿ ಸೈಟ್ ವಾಪಸ್ಸು ಕೊಟ್ಟರೆ ಏನ್ ತಪ್ಪಿದೆ..? ಸಿಎಂ ಅವರ ಪ್ರೆಸ್ಟೀಜ್ ಬಹಳ ಮುಖ್ಯವಾದದ್ದು, ಆ ಕಾರಣಕ್ಕಾಗಿ ಮರಳಿ ಕೊಟ್ಟಿದ್ದು.
ಮರಿಯಾದೆಗೋಸ್ಕರ ಮರಳಿ ಕೊಟ್ಟಿದ್ದು ಅದಕ್ಕೆ ಯೂಟರ್ನ ಅಂದ್ರೆ ಏನು ಹೇಳಲು ಬರುವುದಿಲ್ಲ. ಮುಡಾ ಸೈಟ್ ಕೊಟ್ಟಿದ್ದು ಬಿಜೆಪಿ ಅವರೆೇ ಬೊಮ್ಮಾಯಿ ಸರಕಾರ ಇದ್ದಾಗ ಸೈಟ್ ಕೊಟ್ಟಿದ್ದು. ವಾಪಸ್ಸು ಕೊಡಬಾರದು ಎಂದು ರೂಲ್ಸ್ ಏನಾದ್ರೂ ಇದೆನಾ..? ನಮ್ಮ ಇಷ್ಟ ಯಾವಾಗಾದ್ರು ವಾಪಸ್ಸು ಕೊಡುತ್ತೇವೆ. ಬಿಜೆಪಿಯ ಒತ್ತಡಕ್ಕೆ ಸೈಟ್ ಕೊಟ್ಟಿದ್ದು, ಮರಿಯಾದೆ ವಿಷಯವಾಗಿದೆ. ಸಿಎಂ ಅವರ ಪತ್ನಿಯ ಬಗ್ಗೆ 40 ವರ್ಷದಿಂದ ನನಗೆ ಗೊತ್ತು. ಒಂದಿನಾನೂ ಹೊರಗೆ ಬಂದವರಲ್ಲ. ಲೋಕಾಯುಕ್ತ, ಇಡಿ, ಇವೆಲ್ಲ ವಿಚಾರಣೆ ಆಗ್ತಾ ಇದೆ. ಕರ್ಮ ರಿಟರ್ನ ಬಂದೆ ಬರುತ್ತೆ, ನಾನು ಅವರ ಪರವಾಗಿ ಮಾತನಾಡುತ್ತಿಲ್ಲ.
ಕಾನೂನು ಬದ್ಧವಾಗಿ ಅಣ್ಣನಾನದವರು ತಂಗಿಗೆ ಗಿಫ್ಟ್ ಕೊಟ್ಟಿದ್ದು ಅದು. ಮುಡಾಗೆ ಅವರ ಜಮಿನು ಎನ್ಕ್ರೋಚಮೆಂಟ್ ಮಾಡಿದ್ದು ಅದಕ್ಕೆ ಅವರು ಸೈಟ್ ಕೊಟ್ಟಿದ್ದು. ಇದಕ್ಕೆ ಇಡಿ ಎಂಟ್ರಿ ಆಗುತ್ತೆ,ಇದರಲ್ಲಿ ದುಡ್ಡಿನ ವ್ಯವಹಾರ ಇದೆನಾ ಇಲ್ಲಿ ,ಎಲ್ಲಿದೆ ದುಡ್ಡಿನ ವ್ಯವಹಾರ.? ಎಲೆಕ್ಡ್ರೋಬಾಂಡ್ ನಲ್ಲಿ 8 ವರೆ ಸಾವಿರ ಕೋಟಿ ಹಗರಣ ಆಗಿದೆ. ಅಲ್ಲಿ ಇ ಡಿ ಯಾಕೆ ವಿಚಾರಣೆ ಮಾಡಲ್ಲ. ಸುಮೋಟೋ ಪ್ರಕರಣ ದಾಖಲು ಮಾಡಿಕ್ಕೊಂಡು ಎಲೆಕ್ಟ್ರೋ ಬಾಂಡ್ ನಲ್ಲಿ ಹಗರಣ ಮಾಡಿದವರನ್ನ ಅರೆಸ್ಟ ಮಾಡಬೇಕಲ್ವಾ..? ಎಂದು ಲಾಡ್ ಪ್ರಶ್ನಿಸಿದ್ದಾರೆ.
ಹಗರಣದ ಬಗ್ಗೆ ಸುಪ್ರಿಂ ಕೋರ್ಟ ಹೇಳಿದೆ. ಇ ಡಿ ಬಳಕೆ ಮಾಡಿಕ್ಕೊಂಡು ಸಿಎಂ ರಾಜಿನಾಮೆ ಕೇಳ್ತಾ ಇದಾರೆ ಬಿಜೆಪಿ ಅವರು. ಕೇಂದ್ರದಲ್ಲಿ 29 ಜನ ಕ‌್ಯಾಬಿನೆಟ್ ಸಚಿವರುಗಳ ಮೆಲೆ ಕ್ರಮಿನಲ್ ಕೇಸ್, ಕೊಲೆ ಕೇಸ್, ರೇಪ್ ಕೇಸ್ ಗಳು ಇವೆ, ಅವರು ರಾಜಿನಾಮೆ ಕೊಡೋದು ಬೇಡ್ವಾ ಹಾಗಾದ್ರೆ..? ಕುಮಾರಸ್ವಾಮಿ ಮೆಲೆ ಕೇಸ್ ಇದೆ ಅವರು ರಾಜಿನಾಮೆ ಕೊಡೋದು ಬೇಡ್ವಾ..? ಎಂದು ಪ್ರಶ್ನಿಸಿದ ಸಂತೋಷ್ ಲಾಡ್, ಪದೇ ಪದೇ ಸಿಎಂ ರಾಜೀನಾಮೆ ಕೊಡ್ತಾರಾ ಅಂತಾ ನಮಗ್ಯಾಕೆ ಪ್ರಶ್ನೆ ಕೇಳುತ್ತೀರಾ ಅಂತಾ ಮಾಧ್ಯಮದ ಮೇಲೆ ಗರಂ ಆಗಿದ್ದಾರೆ.
ಪ್ರಹ್ಲಾದ್ ಜೋಶಿ ಅವರಿಗೆ ಅಧಿಕಾರ ಇದೆ ಅದನ್ನ ತಗೊಳ್ಳಿಕೆ ಹೇಳಿ ಫಸ್ಟ್. ಹಾಗಾದ್ರೆ ಕಾನೂನು ಬಾಹಿರ ಎಂದು ಜೋಶಿ ಅವರು ಒಪ್ಪಿಕ್ಕೊಳ್ತಾರಾ..? ಒಪ್ಪಿಕ್ಕೊಂಡರೆ ಎಲ್ಲರನ್ನ ಅರೆಸ್ಟ್ ಮಾಡಲಿಕ್ಕೆ ಹೇಳಿ. ಫಸ್ಟ್ ಬಿಜೆಪಿ ಅವರು ಅರೆಸ್ಟ ಆಗಲಿ, ಇವರು ಮಾಡಿದ ಪ್ರಾಡ್ ತಾನೆ ಇದಕ್ಕೆ ಅವರು ಮಾತನಾಡಲ್ಲ ಜೋಶಿ ಅವರು. ಯಡಿಯೂರಪ್ಪ ರಾಜಿನಾಮೆಗೆ ಕೊಡುವಾಗ ಸಿ ಎಂ ಸಿದ್ದರಾಮಯ್ಯ ಹೀಗೆ ಒತ್ತಡ ಮಾಡಿದ್ರು. ಅವಾಗ ಒತ್ತಡ ಮಾಡಿರುವುದಕ್ಕೆ ಕಾರಣ ಇದೆ. ಲೋಕಾಯುಕ್ತ ಸಂತೋಷ ಹೇಗಡೆ ಅವರಿಗೆ ಮಾಡಿದ್ದು ಬಿ ಎಸ್ ಯಡಿಯೂರಪ್ಪನವರೇ. ಅದರಲ್ಲಿ ಮೈನಿಂಗ್ ಕೇಸ್ ನಲ್ಲಿ ಯಡಿಯೂರಪ್ಪ ಇದಾರೆ ಎಂದು ಚಾರ್ಜಶೀಟ್ ಆಗಿತ್ತು. ಇಲ್ಲೆನಾಗಿದೆ ಗವರ್ನರ್ ನಿಂದ ತಂದಿರೋದ್ಯಾಕೆ..?
ಗವರ್ನರ್ ಹತ್ರ ನಾಲ್ಕು ಕೇಸ್ ಇದ್ದವು, ಅವುಗಳನ್ನ ಯಾಕೆ ಮಾಡಲಿಲ್ಲ..? ಕೇವಲ 14 ಸೈಟ್ ವಿಚಾರವಾಗಿ ಮಾಡ್ತಾ ಇದಾರೆ. 124 ಸೈಟ್ ಬಗ್ಗೆ ಯಾಕೆ ವಿಚಾರಣೆ ಮಾಡ್ತಿಲ್ಲ.? 124 ಸೈಟು ಪಡೆದವರೆಲ್ಲ ಕಾನೂನಾತ್ಮಕ ಸೈಟ್ ಪಡೆದಿದ್ದಾರಾ ಬಿಜೆಪಿ ಅವರ ಲೆಕ್ಕಕ್ಕೆ.. ಇದರಲ್ಲಿ ರಾಜಕೀಯ ಕುತಂತ್ರ ಇದೆ ರಾಜಿನಾಮೆ ಕೊಡೋ ಅವಶ್ಯಕತೆನೆ ಇಲ್ಲ ಎಂದು ಸಂತೋಷ್ ಲಾಡ್ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.