Hubli News: ಹುಬ್ಬಳ್ಳಿ: ಮುಡಾ ಹಗರಣದಲ್ಲಿ ಯಾವುದೇ ಹುರುಳಿಲ್ಲ ಭಾರತೀಯ ಜನತಾ ಪಕ್ಷದವರು ಮೊಸರಿನಲ್ಲಿ ಕಲ್ಲು ಹುಡುಕುವ ಕೆಲಸ ಮಾಡತಾ ಇದ್ದಾರೆ ಎಂದು ಸಾಂಖ್ಯಿಕ ಹಾಗೂ ಯೋಜನಾ ಸಚಿವ ಡಿ ಸುಧಾಕರ ಅಸಮಾಧಾನ ವ್ಯಕ್ತಪಡಿಸಿದರು.
ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಈಗಾಗಲೇ ಮುಖ್ಯಮಂತ್ರಿ ಸಿದ್ಧರಾಮಯ್ಯಾ ನವರು ಮುಡಾ ಹಗರಣದ ರಾಜ್ಯದ ಜನತೆಗೆ ತಿಳಿಸಿದ್ದಾರೆ. ಅವರಿಗೆ ( ಭಾರತೀಯ ಜನತಾ ಪಕ್ಷದ) ವರೆಗೆ ಬೇರೆ ಏನು ಕೆಲಸ ಇಲ್ಲ. ಇದರ ಹಿನ್ನೆಲೆಯಲ್ಲಿ ರಾಜಕೀಯ ಇತಿಹಾಸದಲ್ಲಿ ಕಳಂಕ ರಹಿತವಾಗಿ ಹೊರಗೆ ಬಂದವರು
ಅವರು ಯಾವುದೇ ಒಂದು ಜಾಗದ ವಿಚಾರದಲ್ಲಿ ಭ್ರಷ್ಟಾಚಾರ ಮಾಡಲು ಸಾಧ್ಯವಿಲ್ಲ. ಬಿಜೆಪಿ ಅವರ ಆರೋಪ ಸರಿ ಇಲ್ಲ. ಮುಖ್ಯಮಂತ್ರಿಗಳು ಹೇಳಿದ್ದು ಮುಡಾ ಸರಿ ಮಾಡುತ್ತೇವೆ ಅಂತಾ. ಮುಡಾದಲ್ಲಿ ಆದ ಹಗರಣ ಬಿಜೆಪಿ ಕಾಲದಲ್ಲಿ ಎಂದು ಮಾಹಿತಿ ಕೊಟ್ಟರು.
ವಾಲ್ಮೀಕಿ ಹಗರಣದಲ್ಲಿ ಸಿಐಟಿ ತನಿಖೆ ವೇಳೆ ಇಡಿ ಎಂಟ್ರಿ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಸುಧಾಕರ್, ವಾಲ್ಮೀಕಿ ನಿಗಮದಹಗರಣದಲ್ಲಿ ತನಿಖೆ ನಡೆತಾ ಇದ್ದು. ಇದು ಬ್ಯಾಂಕ್ ಹಾಗೂ ಕಾರ್ಪೋರೇಷನ್ ಗೆ ಸಂಬಂಧಿಸಿದ್ದು. ವಾಲ್ಮೀಕಿ ಹಗರಣ ನಾಗೇಂದ್ರ ಅವರ ಗಮನಕ್ಕೆ ಬಂದಿರಲಿಲ್ಲ ಆದರೆ ಈಗ ತನಿಖೆ ಸಹ ಮಾಡಲಾಗುತ್ತದೆ. ಇಡಿ ಅಥವಾ ಸಿಬಿಐ ಆದರು ವಿಚಾರಣೆ ಮಾಡಲಿ ರಾಜ್ಯ ಸರ್ಕಾರ ಎಸ್ ಐಟಿ ನೇಮಕ ಮಾಡಿದೆ ಎಸ್ ಐಟಿ ಅವರು ತನಿಖೆ ಮಾಡತಾ ಇದ್ದಾರೆ. ಈ ಕುರಿತು ಹೆಚ್ಚಿಗೆ ನಾನು ಏನು ಮಾತನಾಡಲ್ಲ ಎಂದರು.

