Political News: Mandya: ಮಂಡ್ಯದಲ್ಲಿ ಜೆಡಿಎಸ್- ಬಿಜೆಪಿ ಪಾದಯಾತ್ರೆ ವಿಚಾರವಾಗಿ ಮಾತನಾಡಿದ ಸಚಿವ ಎನ್.ಚಲುವರಾಾಯಸ್ವಾಮಿ, ಅವರು ಯಾಕೆ ಪಾದಯಾತ್ರೆ ಮಾಡ್ತಾರೆ ಗೊತ್ತಿಲ್ಲ. 150 ಜನರ ಹಗರಣ ಸಿಎಂ ದಾಖಲೆ ಬಿಡುಗಡೆ ಮಾಡಿದ್ದಾರೆ. ಜೆಡಿಎಸ್-ಬಿಜೆಪಿ ಅಷ್ಟು ಜನ ಅನಾಧಿಕೃತವಾಗಿ ಸೈಟ್ ತಕೊಂಡಿದ್ದಾರೆ. ಯಾರ ವಿರುದ್ಧ ಹೋರಾಟ ಮಾಡ್ತಾರೋ ಗೊತ್ತಿಲ್ಲ. ಮುಖ್ಯಮಂತ್ರಿಗಳ ಶ್ರೀಮತಿ ಅವರ ಲ್ಯಾಂಡ್ ಹೋಗಿರೋದಕ್ಕೆ ಪರ್ಯಾಯವಾಗಿ ಕೊಡಿ ಅಂತ ಕೇಳಿದ್ದಾರೆ ಎಂದರು.
ಕೊಟ್ಟಿರಿವವರು ಯಾರು? ಬಿಜೆಪಿಯವರು. ಯಾರ ವಿರುದ್ದ ಮಾಡ್ತಾರೆ ನನಗೆ ಅರ್ಥವಾಗ್ತಿಲ್ಲ. ಕುಮಾರಸ್ವಾಮಿ ತಕೊಂಡಿದ್ದು ಕಾನೂನು ಬದ್ದನೋ ಏನೋ. ಯಾರದು ಸತ್ಯ.ಯಾವುದು ಸುಳ್ಳು.ಅನ್ನುವುದು ತಿಳಿಯಬೇಕಿದೆ. ತನಿಖಾ ಸಮಿತಿ ಹಾಗಿದೆ ಅದರಿಂದ ಸತ್ಯ ಗೊತ್ತಾಗುತ್ತೆ. ಪೊಲೀಸ್ ಅಧಿಕಾರಿ ಆದ್ರೆ ಒತ್ತಡ ಮಾಡಿದ್ರು ಅಂತಾರೆ.
ಜುಡಿಷಿಯಲ್ ಕಮಿಟಿಯಾದ್ರೆ ಜೀವನ ಪೂರ್ತಿ ನ್ಯಾಯಂಗದಲ್ಲಿ ಕುಳಿತು ತೀರ್ಮಾನ ಕೊಟ್ಟವರು. ಅಷ್ಟು ಸುಲಭವಾಗಿ ತಪ್ಪು ಮಾಡಲ್ಲ ಅನ್ನೋ ನಂಬಿಕೆ. ಸಂವಿಧಾನದಲ್ಲಿ ಉಳಿದಿರುವುದೆ ಜುಡಿಷಿಯಲ್ ವ್ಯವಸ್ಥೆ. ತೀರ್ಮಾನ ಬರಲಿ ನೋಡೋಣ. ಸಿದ್ದರಾಮಯ್ಯ ಅವರು ವಿರೋಧ ಪಕ್ಷದಲ್ಲಿದ್ದಾಗ ಸಿಬಿಐಗೆ ಕೊಡಿ ಅಂದಾಗ ಯಾಕೆ ಕೊಡಲಿಲ್ಲ? ಇವಾಗ ಸಿಬಿಐ ಬೇಕಾ? ಎಂದರು.