ಬಿಜೆಪಿ, ಜೆಡಿಎಸ್ ನಾಯಕರು ಸಿಎಂಗೆ ಸಂಕಷ್ಟ ತರುವಂತ ಕೆಲಸ ಮಾಡ್ತಿದ್ದಾರೆ: ಮುತ್ತಣ್ಣ ಶಿವಳ್ಳಿ

Hubli News: ಹುಬ್ಬಳ್ಳಿ: ಬಿಜೆಪಿ ಮತ್ತು ಜೆಡಿಎಸ್ ನಾಯಕರು ಸಿದ್ದರಾಮಯ್ಯನವರಿಗೆ ಸಂಕಷ್ಟ ತರುವಂತ ಕೆಲಸ ಮಾಡುತ್ತಿದ್ದಾರೆ. ಮುಡಾ ವಿಚಾರದಲ್ಲಿ ಹೈಕೋರ್ಟ್ ಕೊಟ್ಟ ತೀರ್ಪು ಅಹಿಂದ ಸ್ವಾಗತ ಮಾಡುತ್ತದೆ ಎಂದು ಅಹಿಂದ ಸಭೆ ನಂತರ ರಾಜ್ಯಾಧ್ಯಕ್ಷ ಮುತ್ತಣ್ಣ ಶಿವಳ್ಳಿ ಹೇಳಿದರು.

ನಗರದಲ್ಲಿಂದು ಸುದ್ಧಿಗೋಷ್ಟಿ ನಡೆಸಿ ಮಾತನಾಡಿದ ಅವರು,‌ಇವತ್ತು ಅಹಿಂದ ಸಂಘಟನೆಯಿಂದ ಕಾರ್ಯಕರಣಿ ಸಭೆ ನಡೆದಿದ್ದೇವೆ. ಅಹಿಂದ ದಿಂದ ನಾವು ಸಿದ್ದರಾಮಯ್ಯನವರ ಬೆಂಬಲಕ್ಕೆ ನಿಂತಿದ್ದೇವೆ. ಅಹಿಂದ ಸಂಘಟನೆಯಿಂದ ಅಹಿಂದ ನಾಯಕನ ಉಳಿವಿಗಾಗಿ ಸಂವಿಧಾನ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲು ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದರು.

ಹುಬ್ಬಳ್ಳಿಯಿಂದ ಬೆಂಗಳೂರವರೆಗೆ ಸಂವಿಧಾನ ಜಾಥಾ ಹಮ್ಮಿಕೊಳ್ಳಲು ತೀರ್ಮಾನ ಮಾಡಲಾಗಿದೆ.ಆಕ್ಟೋಬರ್ 3 ರಂದು ಈ ಜಾಥಾಕ್ಕೆ ಚಾಲನೆ ನೀಡಲಾಗಿದೆ. ಸಂವಿಧಾನ ಜಾಥಾದಲ್ಲಿ ಸಂವಿಧಾನ ಪೀಠಕೆಗಳನ್ನ ವಾಹನಗಳಿಗೆ ಹಾಕಲಾಗುತ್ತದೆ. ವಿಧಾನಸೌಧಕ್ಕೆ ಹೋಗಿ ಈ ಜಾಥಾ ಕಾರ್ಯಕ್ರಮ ಮುಕ್ತಾಯವಾಗಲಿದೆ. ಸಿದ್ದರಾಮಯ್ಯನವರಿಗೆ ಬೆಂಬಲ ಸೂಚಿಸಲು ಈ ಜಾಥಾ ಮಾಡಲಾಗುತ್ತದೆ. ಈ ಜಾಥಾಕ್ಕೆ ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಮುಖಂಡರು ಬಾಹ್ಯ ಬೆಂಬಲ ನೀಡುತ್ತಿದ್ದಾರೆ ಎಂದರು.

ನಮ್ಮನ್ನ ಕಾಪಾಡುವ ದೇವರು ಸಂವಿಧಾನ. ಇದೇ ಸಂವಿಧಾನ ಜಾಥಾ ಹಮ್ಮಿಕೊಳ್ಳಲಾಗಿದೆ. ಈ ಹಿಂದೆ ಬಂಗಾರಪ್ಪ, ದೇವರಾಜ್ ಅರಸು ಅವರಿಗೆ ಇದೇ ರೀತಿ ಕಾಟವನ್ನ ಕೊಡಲಾಗಿತ್ತು. ಅದೇ ರೀತಿ ಈಗ ಸಿದ್ದರಾಮಯ್ಯನವರನ್ನ ಮುಗಿಸಲು ಹೋಗ್ತಾ ಇದ್ದಾರೆ. ನ್ಯಾಯಲಯದ ತೀರ್ಪಿಗೆ ನಮ್ಮ ವಿರೋಧ ಇಲ್ಲ. ಆದರೆ ಯಾವುದೇ ಕಾರಣಕ್ಕೂ ರಾಜೀನಾಮೆ ಕೊಡುವ ಅಗತ್ಯವಿಲ್ಲ ಎಂದು ಅವರು ಹೇಳಿದರು.

About The Author