- Advertisement -
ಬೆಂಗಳೂರು : ರಾಜ್ಯ ರಾಜ್ಯಕೀಯ ಕ್ಷಿಪ್ರ ರಾಜಕೀಯ ಬೆಳವಣಿಗೆ ಬೆನ್ನಲ್ಲೇ ಸಚಿವ ಸಾರಾ ಮಹೇಶ್ ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರ್ ರಾವ್ ಭೇಟಿಯಾಗಿ 30 ನಿಮಿಷಗಳ ಕಾಲ ಮಾತುಕತೆ ನಡೆಸಿರೋದು ಭಾರೀ ಚರ್ಚೆಗೆ ಕಾರಣವಾಗಿದೆ.. ಕುಮಾರಕೃಷ್ಣ ಗೆಸ್ಟ್ ಹೌಸ್ ನ ಕೊಠಡಿಯಲ್ಲಿ 30 ನಿಮಿಷಗಳ ಕಾಲ ಸಿಎಂ ಆಪ್ತ ಸಚಿವ ಸಾರಾ ಮಹೇಶ್ ಏನ್ ಮಾತಾಡಿದ್ರು ಅನ್ನೋದು ಹಲವು ಅನುಮಾನಗಳಿಗೆ ಕಾರಣವಾಗಿದೆ..
ಇದು ಆಕಸ್ಮಿಕ ಭೇಟಿ – ಸಿಎಂ ಕುಮಾರಸ್ವಾಮಿ
ಇನ್ನು ಜೆಡಿಎಸ್ – ಬಿಜೆಪಿ ನಾಯಕರ ಭೇಟಿ ಕಾಂಗ್ರೆಸ್ ನಾಯಕರ ಆಕ್ರೋಶಕ್ಕೆ ಕಾರಣವಾಗ್ತಿದ್ದ ಹಾಗೆಯೇ ಸ್ವತಃ ಕುಮಾರಸ್ವಾಮಿಯೇ ಸ್ಪಷ್ಟನೆ ನೀಡಿದ್ದಾರೆ.. ಸಾರಾ ಮಹೇಶ್ ಪ್ರವಾಸೋದ್ಯಮ ಸಚಿವ.. ಹೀಗಾಗಿ ಅತಿಥಿ ಗೃಹದಲ್ಲಿ ಹಲವಾರು ಜನ ಗಣ್ಯರು ತಂಗಲು ಬರ್ತಾರೆ ಈ ವೇಳೆ ಭೇಟಿಯಾಗಿದೆ.. ಇದಕ್ಕೆ ವಿಶೇಷ ಅರ್ಥ ಕಲ್ಪಸೋದು ಬೇಡ ಅಂತ ಸಿಎಂ ಕುಮಾರಸ್ವಾಮಿ ಸ್ಪಷ್ಟ ಪಡಿಸಿದ್ದಾರೆ..
- Advertisement -