ಕರ್ನಾಟಕ ಟಿವಿ : ಮೀಸೆ ಬಂದ ಗಂಡಸಿಗೆ ನೆಲ ಕಾಣಲ್ವಂತೆ.. ಅಧಿಕಾರದ ಮದ ಏರಿದವರಿಗೆ ಮತದಾರ ಕಾಣಲ್ವಂತೆ.. ಆದ್ರೆ, ರಾಜ್ಯ ಬಿಜೆಪಿಯ ಕೆಲ ನಾಯಕರಿಗೆ ತಾವು ಅಧಿಕಾರಕ್ಕೆ ಬಂದ ಕಾರ್ಯಕರ್ತರು ಕಾಣಿಸ್ತಿಲ್ಲ.. ಇದಿಷ್ಟೆ ಅಲ್ಲ, ಲೋಕಸಭಾ ಚುನಾವಣೆಯಲ್ಲಿ ಯಾವುದೇ ಲಾಭದ ನಿರೀಕ್ಷೆಯಿಲ್ಲದೆ ಬಿಜೆಪಿ ಗೆಲುವಿಗೆ ಟೊಂಕ ಕಟ್ಟಿ ಕೆಲಸ ಮಾಡಿದ ಚಕ್ರವರ್ತಿ ಸೂಲಿಬೆಲೆಗೂ ರಾಜ್ಯ ಬಿಜೆಪಿ ನಾಯಕರು ಬೆಲೆ ಕೊಡದೆ ಇರೋದು ದುರಂತವೇ ಸರಿ.. ಆದ್ರೆ, ಚಕ್ರವರ್ತಿ ಸೂಲಿಬೆಲೆಗೆ ಬಿಜೆಪಿಯ ಅವಶ್ಯಕತೆ ಇಲ್ಲ.. ಆದ್ರೆ ರಾಜ್ಯ ಬಿಜೆಪಿಗೆ ಚಕ್ರವರ್ತಿ ಸೂಲಿಬೆಲೆ ಅವಶ್ಯಕತೆ ಖಂಡಿತ ಇದೆ..

ಕೈಗೆ ಇನ್ನೂರೋ, ಮುನ್ನೂರೋ ಕೊಟ್ಟು ತಿನ್ನೋಕೆ ಬಿರಿಯಾನಿ, ಕುಡಿಯೋಕೆ 90 ಕೊಡಿಸಿದ್ರೆ ಇವತ್ತು ಪ್ರಚಾರಕ್ಕೆ ಜನ ಬರ್ತಾರೆ.. ಇನ್ನು ಕೈಗೆ 10 ಸಾವಿರ ಕೊಟ್ರೆ ದಿನದ ಲೆಕ್ಕದಲ್ಲಿ ಕಾರ್ಯಕರ್ತರನ್ನ ಪ್ರಚಾರಕ್ಕೆ, ಪ್ರತಿಭಟನೆಗೆ ಕರೆದುಕೊಂಡು ಬರುವ ಟೀಂಗಳು ಎಲ್ಲಾ ಕಡೆ ಇವೆ.. ಈ ರೀತಿ ಮನಿ ಪಾಲಿಟಿಕ್ಸ್ ಪ್ರಸ್ತುತ ರಾಜಕಾರಣ ನಡೀತಿದೆ. ಪರಿಸ್ಥಿತಿ ಹೀಗಿರಬೇಕಾದ್ರೆ 2019ರ ಜನವರಿಯಲ್ಲಿ ಟೀಂ ಮೋದಿ ಅಂತ ತಂಡ ಕಟ್ಟಿಕೊಂಡ ಚಕ್ರವರ್ತಿ ಸೂಲಿಬೆಲೆ ರಾಜ್ಯಾದ್ಯಂತ 57 ದಿನಗಳ ಕಾಲ ನಿರಂತರ ಪ್ರವಾಸ ಮಾಡಿದ್ರು..

28 ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ 116 ಸಮಾವೇಶಗಳನ್ನ ಮಾಡಿದ್ರು. ಪ್ರತೀ ಕಾರ್ಯಕ್ರಮಕ್ಕೂ ಸಾವಿರಾರು ಜನರನ್ನ ಸ್ವಯಂ ಪ್ರೇರಿತರಾಗಿ ಆಗಮಿಸುವಂತೆ ಮಾಡಿ ಮೋದಿ ಕಾರ್ಯಕ್ರಮಗಳನ್ನ ಮನೆಮನೆಗೆ ತಲುಪಿಸಿದ್ರು. 18 ಸಾವಿರ ಕಿಲೋಮೀಟರ್ ಪ್ರವಾಸ ಮಾಡಿದ ಟೀಂ ಮೋದಿ ತಂಡ 3 ಲಕ್ಷದ 25 ಸಾವಿರ ಜನರನ್ನ ನೇರವಾಗಿ ತಲುಪಿದ್ರೆ 2 ಕೋಟಿ ಜನರನ್ನ ಫೇಸ್ ಬುಕ್, ಯುಟ್ಯೂಬ್ ಮೂಲಕ ಮೋದಿಗೆ ಮತಹಾಕುವಂತೆ ಪ್ರಚಾರ ಮಾಡ್ತು.. ರಾಜ್ಯದಲ್ಲಿ ಚಕ್ರವರ್ತಿ ಸೂಲಿಬೆಲೆ ಬಿಜೆಪಿ ಪರ ಪ್ರಾಮಾಣಿಕ ಪ್ರಚಾರ ಮಾಡಿದ ವ್ಯಕ್ತಿ. ಆದ್ರೆ, ಇವತ್ತು ಚಕ್ರವರ್ತಿ ಸೂಲಿಬೆಲೆ ಯಾರು ಅಂತ ಕೇಳುವ ಯಾವೊಬ್ಬ ಸಂಸದ ಕೂಡ ಅಂತ ಕಾರ್ಯಕ್ರಮಕ್ಕೆ ಬಿಡಿಗಾಸು ಕೊಟ್ಟಿರಲಿಲ್ಲ. ಮೋದಿಯನ್ನ ಮತ್ತೆ ಅಧಿಕಾರಕ್ಕೆ ತರಬೇಕು ಅಂತ ಕಂಕಣ ತೊಟ್ಟ ಲಕ್ಷಾಂತರ ಜನ ಚಕ್ರವರ್ತಿ ಸೂಲಿಬೆಲೆ ತಂಡಕ್ಕೆ ಎಲ್ಲಾ ರೀತಿಯಲ್ಲೂ ಶಕ್ತಿ ತುಂಬಿದ್ರು. ಇದರ ಪರಿಣಾವೇ ಕರ್ನಾಟಕದಲ್ಲಿ ಬಿಜೆಪಿಗೆ ದೊಡ್ಡಮಟ್ಟದ ಮತಗಳನ್ನ ತಂದುಕೊಟ್ಟಿದೆ ಅಂದ್ರೆ ತಪ್ಪಾಗಲ್ಲ.. ರಾಜ್ಯದಲ್ಲಿ ಈಗ ಜನ ಗಂಟೆಗಟ್ಟಲೇ ಕೂತು ಭಾಷಣ ಕೇಳ್ತಾರೆ ಅಂದ್ರೆ ಅಂಥಹ ಟಾಪ್ 5 ಜನರಲ್ಲಿ ಚಕ್ರವರ್ತಿ ಸೂಲಿಬೆಲೆ ಇದ್ದಾರೆ ಅಂದ್ರೆ ತಪ್ಪಾಗಲ್ಲ..

ಉತ್ತರಕರ್ನಾಟಕವನ್ನ ಕಾಡಿದ ಪ್ರವಾಹ ಕೋಟ್ಯಂತರ ಕನ್ನಡಿಗರ ಕಣ್ಣಲ್ಲಿ ನೀರು ತರಿಸಿದೆ.. ಪ್ರವಾಹ ಪರಿಹಾರ ಕೊಡುವಲ್ಲಿ ಕೇಂದ್ರ ಸರ್ಕಾರ ಅನುಸರಿಸಿದ ರೀತಿ ಎಂಥವರನ್ನೂ ಕೆರಳಿಸದೆ ಇರದು.. ಹೀಗಿರಬೇಕಾದ್ರೆ ಮೋದಿ ಬಳಿ ಮಾತನಾಡಿ ಪರಿಹಾರ ತರಬೇಕಾದ ಸಂಸದರು ಬಾಮ್ಮುಚ್ಚಿ ಕೂತಾಗ ವಿಪಕ್ಷದವರು ಮೋದಿ ಹಾಗೂ ಬಿಜೆಪಿ ನಾಯಕರಿಗೆ ಬೀದಿಬೀದಿಯಲ್ಲಿ ಬೈಯಲು ಶುರು ಮಾಡಿದ್ರು.

ಆ ವೇಳೆ ಉತ್ತರ ಕರ್ನಾಟಕ ನಿರಾಶ್ರಿತರ ಕಣ್ಣೀರು ಒರೆಸುವ ಕೆಲಸವನ್ನ ಚಕ್ರವರ್ತಿ ಸೂಲಿಬೆಲೆ ತಂಡ ಮಾಡ್ತಿತ್ತು. ಶಾಲೆಗಳು, ಮನೆಗಳನ್ನ ಕ್ಲೀನ್ ಮಾಡಿದ ಸೂಲಿಬೆಲೆ ದಾನಿಗಳನ್ನ ಹಿಡಿದು ಸೂರು ನಿರ್ಮಿಸಲು ಮುಂದಾಗಿದ್ರು. ವಿಪಕ್ಷ ನಾಯಕರು ಎಷ್ಟೇ ಟೀಕೆ ಮಾಡಿದ್ರು ಸುಮ್ಮನೆ ಕುಳಿತಿದ್ದ ಬಿಜೆಪಿ ಸಂಸದರನ್ನ ಕಂಡು ಕೆರಳಿದ ಚಕ್ರವರ್ತಿ ಸೂಲಿಬೆಲೆ ಹೇಗೆ ತಾನೆ ಸುಮ್ಮನೆ ಕೂರಲು ಸಾಧ್ಯ ಹೇಳಿ.. ಹೀಗಾಗಿ ರಾಜ್ಯದ 25 ಬಿಜೆಪಿ ಸಂಸದರಿಗೆ ಚಕ್ರವರ್ತಿ ಸೂಲಿಬೆಲೆ ಚಾಟಿ ಬೀಸಿದ್ರು.. ಆದ್ರೆ, ಚಕ್ರವರ್ತಿ ಸೂಲಿಬೆಲೆ ಮಾತಿಗೆ ಬೆಲೆ ಕೊಡದಿದ್ರೂ ಪರವಾಗಿಲ್ಲ. ಆದ್ರೆ ಅವರಿಗೆ ದೇಶದ್ರೋಹಿ ಪಟ್ಟ ಕಟ್ಟಿದ ಕೆಲ ಬಿಜೆಪಿ ನಾಯಕರು ತಾವೇ ತೀವ್ರ ಟೀಕೆಗೆ ಗುರಿಯಾದ್ರು.. ಚಕ್ರವರ್ತಿ ಸೂಲಿಬೆಲೆಯನ್ನ ಸ್ವತಃ ಮಾಜಿ ಪ್ರಧಾನಿ ದೇವೇಗೌಡರೇ ಹೊಗಳಿದ್ದಾರೆ.. ಯಾಕಂದ್ರೆ, ರಾಜ್ಯದ್ಯಂತ ಯುವ ಬ್ರಿಗೇಡ್ ತಂಡದ ಮೂಲಕ ಸಾವಿರಾರು ಕಲ್ಯಾಣಿಗಳ ಪುನರುಜ್ಜೀವನ ಮಾಡಿದ್ದಾರೆ..

ನೇತ್ರಾವತಿಯಿಂದ ಕೃಷ್ಣೆ ವರೆಗೆ ನದಿಯನ್ನ ಸಾಧ್ಯವಾದಷ್ಟು ಕ್ಲೀನ್ ಮಾಡಿದ್ದಾರೆ.. ಬೆಂಗಳೂರು ನಗರದಲ್ಲಿ ಹುಟ್ಟುವ ಸ್ಥಳದಿಂದಲೇ ಕೊಳಚೆ ನೀರಾಗಿ ಹರಿಯುವ ವೃಷಭಾವತಿ ನದಿಯನ್ನ ಸ್ವಚ್ಛ ಮಾಡಲು ಸೂಲಿಬೆಲೆ ತಂಡ ಮುಂದಾಗಿದೆ. ಇದಿಷ್ಟೆ ಅಲ್ಲದೇ ರೈತರ ದಾಯ ಡಬಲ್ ಮಾಡಲು ಶೂನ್ಯ ಕೃಷಿಯನ್ನ ತಾವೇ ಅನುಷ್ಠಾನ ಮಾಡುವ ಮೂಲಕ ರೈತರಿಗೆ ಪ್ರಾಯೋಗಿಕವಾಗಿ ತಿಳಿಸಲು ಮುಂದಾಗಿದ್ದಾರೆ.

ಜೊತೆಗೆ ಫಿಫ್ತ್ ಪಿಲ್ಲರ್ ಅಂತ ಉದ್ಯಮಿಗಳ ಸಭೆ ಮಾಡಿ ಉದ್ಯೋಗ ಸೃಷ್ಟಿ ಹಾಗೂ ಸ್ವಯಂ ಉದ್ಯೋಗ ಮಾಡೋರಿಗೆ ಸ್ಪೂರ್ತಿ ತುಂಬುತ್ತಿದ್ದಾರೆ.. ಇಂತಹ ನಿಸ್ವಾರ್ಥ ವ್ಯಕ್ತಿಯನ್ನ ಬಿಜೆಪಿಯ ಕೆಲ ನಾಯಕರು ನಡೆಸಿ ಕೊಳ್ತಿರುವ ರೀತಿ ಎಂಥಹವರಿಗೂ ಕೋಪ ಬರಿಸದೆ ಇರದು.. ಕಾಂಗ್ರೆಸ್, ಜೆಡಿಎಸ್ ನಾಯಕರೇ ಚಕ್ರವರ್ತಿ ಸೂಲಿಬೆಲೆಗೆ ಮರ್ಯಾದೆ ಕೊಡ್ರಪ್ಪಅಂತ ಬಿಜೆಪಿಯ ನಾಯಕರಿಗೆ ಬುದ್ಧಿ ಹೇಳಲು ಶುರು ಮಾಡಿದ್ದಾರೆ.

ಈ ನಡುವೆ ಮೋದಿ 2024ರ ಚುನಾವಣೆಯಲ್ಲಿ ನನ್ನ ಹೆಸರೇಳದೆ ಚುನಾವಣೆ ಗೆಲ್ಲಿ ಅಂತ ಬಿಜೆಪಿ ಸಂಸದರು, ಶಾಸಕರಿಗೆ ತಾಕೀತು ಮಾಡಿದ್ದಾರೆ.. ಇಂಥಹ ಸಂದರ್ಭದಲ್ಲಿ ಬಿಜೆಪಿ ಸಂಸದರು, ಶಾಸಕರು ಮೋದಿ ಜಪ ಮಾಡೋದು ಬಿಟ್ಟು ಚಕ್ರವರ್ತಿ ಸೂಲಿಬೆಲೆ ಹೇಳಿದಂತೆ ತಮ್ಮ ತಮ್ಮ ಕ್ಷೇತ್ರಗಳ ಜನರ ಹಿತವನ್ನ ಕಾಪಾಡಬೇಕಿದೆ.. ಚಕ್ರವರ್ತಿ ಸೂಲಿಬೆಲೆ ರಾಜಕಾರಣ ಮಾಡಿ ಸಂಸಾರ ಸಾಕಬೇಕಾಗಿಲ್ಲ.. ಆದ್ರೆ, ಬಿಜೆಪಿ ನಾಯಕರು ರಾಜಕಾರಣದಲ್ಲಿ ಗೆಲುವು ಸಾಧಿಸಲು ಚಕ್ರವರ್ತಿ ಸೂಲಿಬೆಲೆಯಂಥಹ ನಿಸ್ವಾರ್ಥ ನಾಯಕರ ಸಂಘಟನಾ ಸಹಾಯ ಬೇಕಿದೆ.. ಬಿಜೆಪಿ ನಾಯಕರು ಕಾಂಗ್ರೆಸ್, ಜೆಡಿಎಸ್ ನಾಯಕರ ಮಾತನ್ನ ಕೇಳದಿದ್ರೂ ಪರವಾಗಿಲ್ಲ. ತಮ್ಮ ಪಕ್ಷದ ಹಿತೈಷಿಗಳ ಮಾತನ್ನಾದ್ರೂ ಇನ್ಮುಂದೆ ಕೇಳಿದ್ರೆ ರಾಜ್ಯ ಬಿಜೆಪಿ ಮಾನ ಮೂರು ಕಾಸಿಗಾದ್ರೂ ಉಳಿದೀತು..

ಯಸ್ ವೀಕ್ಷಕರೇ ನಿಮ್ಮ ಪ್ರಕಾರ ಚಕ್ರವರ್ತಿ ಸೂಲಿಬೆಲೆಗೆ ಬಿಜೆಪಿ ಅನಿವಾರ್ಯಾನಾ..? ಅಥನಾ ಬಿಜೆಪಿಗೆ ಚಕ್ರವರ್ತಿ ಸೂಲಿಬೆಲೆ ಸಂಘಟನಾ ಶಕ್ತಿ ಅನಿವಾರ್ಯಾನಾ..? ಕಾಮೆಂಟ್ ಮಾಡಿ.