ಸ್ವಾಮೀಜಿಗಳು ತಲೆಮೇಲೆ ಬಟ್ಟೆ ಹಾಕಿಕೊಳ್ಳೋದಿಲ್ವಾ.? ಎಂದು ಪ್ರಶ್ನಿಸಿದ ವಿಪಕ್ಷ ನಾಯಕ ಸಿದ್ಧು ವಿರುದ್ಧ, ಕೇಸರಿ ಪಡೆ ಕೆಂಡಾಮಂಡಲ

ಬೆಂಗಳೂರು: ಮೈಸೂರಿನಲ್ಲಿ ಮುಸ್ಲಿಂ ಹೆಣ್ಣುಮಕ್ಕಳು ದುಪ್ಪಟ್ಟ ಹಾಕಿದ್ರೇ ತಪ್ಪೇನು.? ಸ್ವಾಮೀಜಿಗಳು ತಲೆಮೇಲೆ ಬಟ್ಟೆ ಹಾಕಿಕೊಳ್ಳೋದಿಲ್ವಾ ಎಂಬುದಾಗಿ ಮಾಜಿ ಸಿಎಂ ಸಿದ್ಧರಾಮಯ್ಯ ಪ್ರಶ್ನಿಸಿದ್ದರು. ಅವರ ಮಾತಿಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಕೇಸರಿಪಡೆಯಿಂದ ಮುಗಿ ಬಿದ್ದಿದ್ದಾರೆ.

ಸಿದ್ಧರಾಮಯ್ಯ ಮಾತಿಗೆ ಸಚಿವ ಬಿ.ಸಿ ನಾಗೇಶ್, ಬಸನಗೌಡ ಪಾಟೀಲ್ ಯತ್ನಾಳ್, ರೇಣುಕಾಚಾರ್ಯ ಕೆಂಡಾಮಂಡಲ ಆಗಿದ್ದಾರೆ. ಅಲ್ಲದೇ ಸಿದ್ದರಾಮಯ್ಯ ಕೂಡಲೇ ಸ್ವಾಮೀಜಿಗಳ ಕ್ಷಮೆ ಯಾಚಿಸುಬೇಕು ಎಂಬುದಾಗಿ ಆಗ್ರಹಿಸಿದ್ದಾರೆ.

ಇನ್ನೂ ಸಿದ್ದರಾಮಯ್ಯ ಹೀಗೆ ಹೇಳಿಕೆ ನೀಡುವ ಮೂಲಕ ಓಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದ್ದಾರೆ. ಸ್ವಾಮೀಜಿಗಳನ್ನು ಇದರಲ್ಲಿ ಎಳೆದು ತಂದಿರೋದು ದುರ್ದೈವ ಸಂಗತಿಯಾಗಿದೆ. ಹತಾಶೆಯಿಂದ ಹೇಳಿಕೆಗಳನ್ನ ನೀಡುತ್ತಿದ್ದಾರೆ ಎಂಬುದಾಗಿ ಟಗರು ವಿರುದ್ಧ ಗುಡುಗಿದ್ದಾರೆ.

About The Author