Kalaburagi; ಆಡಿಯೋ ರೆಕಾರ್ಡ್​ ಮಾಡಿ ನೇಣಿಗೆ ಶರಣಾದ ಬಿಜೆಪಿ ಮುಖಂಡ;

ಕಲಬುರಗಿ : ಜಿಲ್ಲೆಯ ಚಿಂಚೊಳ್ಳಿ ತಾಲೂಕಿನ ಶಿರೊಳ್ಳಿ ಗ್ರಾಮದ ಬಿಜೆಪಿ ಮುಖಂಡ ಶಿವಕುಮಾರ್ ಎಂಬುವವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಕುರಿತು ಕೇಂದ್ರ ಸಚಿವ ಭಗವಂತ ಖೂಬಾ ಸುದ್ದಿಗೋಷ್ಟಿ ನಡೆಸಿ ಕಾಂಗ್ರೆಸ್ ಸರ್ಕಾರದ ವಿರುದ್ದ ಕಿಡಿಕಾರಿದರು.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದ ಅನೇಕ ದೌರ್ಜನ್ಯಗಳು ನಡೆಯುತ್ತಿವೆ. ಧರ್ಮಕ್ಕಾಗಿ ಹೋರಾಟ ಮಾಡುವವರ ಹತ್ತಿಕ್ಕುವ ಕೆಲಸ‌ ಮಾಡ್ತಿದ್ದಾರೆ ಕರ್ನಾಟಕದ ಜನ ಸರ್ಕಾರದ ಮೇಲೆ ವಿಶ್ವಾಸ ಕಳೆದುಕೊಂಡಿದ್ದಾರೆ ಬಿಜೆಪಿ ಮುಖಂಡ ಶಿವಕುಮಾರ್ ಸಂಬಂಧಿಕರ ಹೊಲಕ್ಕೆ ತೆರಳಿ ಥಳಸಿದ್ದಾರೆ ಎಂದು ಆರೋಪಿಸಿದರು.

ಬಿಜೆಪಿ ನಾಯಕರ ಕಿರುಕುಳದಿಂದಾಗಿ ಶಿವಕುಮಾರ್ ಆತ್ಮಹತ್ಯೆಗೆ ಶರಣಾಗಿದ್ದು ನೇಣು ಹಾಕಿಕೊಳ್ಳುವ ಮೊದಲು ಸಚಿವ ಶರಣ ಪ್ರಕಾಶ್ ಪಾಟೀಲ್ ವಿರುದ್ದ  ಆಡಿಯೋ ರೆಕಾರ್ಡ್ ಮಾಡಿ  ನೋವು ತೋಡಿಕೊಂಡಿದ್ದಾರೆ.ಇದರಿಂದಾಗಿ ಕೋಪಗೊಂಡಿರುವ ಸಚಿವ ಖೋಬಾ ನಿಮ್ಮ ಕಾರ್ಯಕರ್ತರ ಸಚಿವರ ದಬ್ಬಾಳಿಕೆಗೆ ಆತ್ನಹತ್ಯೆ ನಡೆದಿದೆ. ಸಚಿವ ಶರಣ ಪ್ರಕಾಶ್ ಪಾಟಿಲ್ ನೈತಿಕ ಹೊಣೆ ಹೊತ್ತು ರಾಜಿನಾಮೆ ಕೊಡಬೇಕು ಎಂದು ಆಗ್ರಹಿಸಿದರು. ಹಾಗಾಗಿ ಸರ್ಕಾರದ ಕಡೆಯಿಂದ ಪರಿಹಾರ ಕೊಡುವಂತೆ ಸಿಎಂ ಸಿದ್ದರಾಮಯ್ಯನವರಿಗೆ ಆಗ್ರಹಿಸಿದರು.

ವಿದ್ಯುತ್ ತಂತಿಗಳನ್ನೂ ಕದ್ದೊಯ್ಯುತ್ತಿರುವ ಖದೀಮರು!

ಚಾಲಕನ ನಿಯಂತ್ರಣ ತಪ್ಪಿ ಸ್ಲೀಪರ್ ಬಸ್ ಪಲ್ಟಿ; ಪ್ರಯಾಣಿಕರು ಸೇಫ್..!

ರೈತರ ಉತ್ಪನ್ನಗಳನ್ನು ಪ್ರೊತ್ಸಾಹಿಸಲು ಬೆಂಬಲ ಬೆಲೆ ಹೆಚ್ಚಳ: ಪ್ರಹ್ಲಾದ್ ಜೋಷಿ..!

About The Author