www.karnatakatv.net: ಸರ್ಕಾರಿ ಅಧಿಕಾರಿಗಳು ನಮ್ಮಂಥಹವರ ಚಪ್ಪಲಿಗಳನ್ನು ಎತ್ತುತ್ತಾರೆ ಅನ್ನೋ ವಿವಾದಾತ್ಮಕ ಹೇಳಿಕೆ ನೀಡಿ ಟೀಕೆಗೆ ಗುರಿಯಾಗಿದ್ದ ಬಿಜೆಪಿ ಹಿರಿಯ ನಾಯಕಿ ಉಮಾಭಾರತಿ ತಮ್ಮ ಭಾಷೆ ಸುಧಾರಿಸಿಕೊಳ್ಳೋದಾಗಿ ಹೇಳಿದ್ದಾರೆ.
ಕಾಂಗ್ರೆಸ್ ಹಿರಿಯ ದಿಗ್ವಿಜಯ ಸಿಂಗ್ ಅವರಿಗೆ ಪತ್ರವೊಂದನ್ನು ಬರೆದಿದ್ದಾರೆ, ಅವರು ತಮ್ಮ ಭಾಷೆಯನ್ನು ಸುಧಾರಿಸುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಗೆ ಪತ್ರ ಬರೆದಿರೋ ಉಮಾಭಾರತಿ, ನನ್ನ ಮಾತು ಈಗ ನನಗೇ ತುಂಬಾ ನೋವಾಗಿದೆ ನಾನು ಈಗಿನಿಂದಲೇ ನನ್ನ ಭಾಷೆಯನ್ನು ಸುಧಾರಿಸಿಕೊಳ್ಳುತ್ತೇನೆ ಅಂತ ಹೇಳಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಉಮಾಭಾರತಿ ಮಾತನಾಡಿದ್ದ ವೈರಲ್ ವಿಡಿಯೋದಲ್ಲಿ ನಾಯಕರನ್ನು ಅಧಿಕಾರಿಗಳು ನಿಯಂತ್ರಿಸುತ್ತಾರೆ ಅಂತ ಎಲ್ಲರೂ ಅಂದುಕೊಂಡಿದ್ದಾರೆ. ಆದ್ರೆ ಮೊದಲು ಅಧಿಕಾರಿಗಳು ನಮ್ಮ ಬಳಿ ಖಾಸಗಿಯಾಗಿ ಮಾತುಕತೆ ನಡೆಸುತ್ತಾರೆ. ಬಳಿಕ ಅವರು ಕಡತ ತಯಾರಿಸಿ ಮುಂದಕ್ಕೆ ಕಳಿಸುತ್ತಾರೆ. ಅಧಿಕಾರಿಗಳು ಇರೋದು ನಮ್ಮ ಚಪ್ಪಲಿ ಎತ್ತೋದಕ್ಕೆ ಅಂತ ನೀಡಿದ್ದ ಹೇಳಿಕೆ ನೀಡಿ ತೀವ್ರ ಆಕ್ರೋಶಕ್ಕೆ ಗುರಿಯಾಗಿದ್ರು. ಇದಕ್ಕೆ ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ತೀವ್ರ ಕಿಡಿ ಕಾರಿದ್ರು.




