- Advertisement -
ರಾಷ್ಟ್ರೀಯ ಐಕ್ಯತಾ ಅಭಿಯಾನ ಜನಸಂಪರ್ಕ ಹಿನ್ನೆಲೆಯಲ್ಲಿ
ಜಾನಪದ ಸೊಗಡಿನ ಹಿರಿಯ ಸಾಹಿತಿ, ಕವಿ, ನಾಟಕಕಾರ, ಸಂಗೀತ ನಿರ್ದೇಶಕ, ಚಲನಚಿತ್ರ ನಿರ್ದೇಶಕ, ಜ್ಞಾನಪೀಠ ಪುರಸ್ಕ್ರತ ಡಾ. ಚಂದ್ರಶೇಖರ ಕಂಬಾರ ಅವರ ಮನೆಗೆ ಬಿಜೆಪಿ ನಾಯಕರು ಭೇಟಿ ನೀಡಿದ್ರು. ಕೇಂದ್ರ ಸರ್ಕಾರ ಕೈಗೊಂಡ ಐತಿಹಾಸಿಕ 370 ನೇ ವಿಧಿ ರದ್ಧತಿ ಕುರಿತು, ಜಮ್ಮು-ಕಾಶ್ಮೀರ ಅಭಿವೃದ್ಧಿ ಕುರಿತಂತೆ ಅಭಿಪ್ರಾಯ ಹಾಗೂ ಇತರೆ ವಿಷಯಗಳ ಕುರಿತು ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ರಾಷ್ಟ್ರೀಯ ಕಾರ್ಯಾಧ್ಯಕ್ಷರಾದ ಶ್ರೀ ಜೆ.ಪಿ.ನಡ್ಡಾ, ರಾಜ್ಯ ಅಧ್ಯಕ್ಷರಾದ ಶ್ರೀ ನಳೀನ ಕುಮಾರ ಕಟೀಲ, ಉಸ್ತುವಾರಿ ಶ್ರೀ ಮುರುಳೀಧರ ರಾವ್ ಸೇರಿದಂತೆ ಮತ್ತೀತರು ಉಪಸ್ಥಿತರಿದ್ದರು.
- Advertisement -