Political News: ಬಿಜೆಪಿ ನಾಯಕರು ಸದನದ ಬಾವಿಗಿಳಿದು ವಿಧೇಯಕ ಪತ್ರ ಹಾಗು ಬಿಲ್ ಗಳನ್ನು ಹರಿದು ಡೆಪ್ಯುಟಿ ಸ್ಪೀಕರ್ ಮೇಲೆ ಬಿಸಾಕಿದ್ದರು. ಈ ಕಾರಣದಿಂದ ಬಿಜೆಪಿ ನಾಯಕರ 10 ಹೆಸರುಗಳನ್ನು ನಮೂದಿಸಿ ಸ್ಪೀಕರ್ ಯು.ಟಿ ಖಾದರ್ ಅವರು ಅಮಾನತು ಮಾಡಿ ಆದೇಶ ಹೊರಡಿಸಿದ್ದರು.
ಈ ಕಾರಣದಿಂದ ಜುಲೈ 20 ಗುರುವಾರ ಬಿಜೆಪಿ ನಾಯಕರು ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಸರಕಾರದ ವಿರುದ್ಧ ಪ್ರತಿಭಟನೆಯಲ್ಲಿ ನಿನರತರಾದರು.
ಪ್ರತಿಭಟನೆ ನಂತರ ಬಿಜೆಪಿ ನಾಯುಕರು ರಾಜ್ಯಪಾಲರಿಗೆ ಸರಕಾರದ ವಿರುದ್ಧ ದೂರು ನೀಡಲು ಮುಂದಾಗಿದ್ದಾರೆ. ಪಾದಯಾತ್ರೆಯ ಮೂಲಕ ವಿಧಾನ ಸೌಧದಿಂದ ರಾಜ ಭವನಕ್ಕೆ ತೆರಳಿ ಅಲ್ಲಿ ರಾಜ್ಯ ಪಾಲರಿಗೆ ದೂರನ್ನು ನೀಡುವ ಬಗ್ಗೆ ಹೇಳಿದ್ದಾರೆ.
ಸರ್ಕಾರದ ಧೋರಣೆ ಬಗ್ಗೆ ಹಾಗು ಸರಕಾರದ ದುರ್ಬಳಕೆ ಬಗ್ಗೆ ದೂರು ನೀಡಲು ಬಿಜೆಪಿ ನಾಯಕರು ನಿರ್ಧರಿಸಿದ್ದಾರೆ.
Opposition Party-ಎಲ್ಲರನ್ನು ಬಿಟ್ಟು ಹೊಸ ಶಾಸಕರಿಗೆ ಮಣೆ ಹಾಕಲಿದೆಯಾ ವಿಪಕ್ಷಗಳು ?
Vidhana Soudha : ವಿಧಾನ ಸೌಧದ ಗಾಂಧಿ ಪ್ರತಿಮೆ ಬಳಿ ಬಿಜೆಪಿ ನಾಯಕರಿಂದ ಪ್ರತಿಭಟನೆ