Sunday, October 13, 2024

Latest Posts

ಸದನದಲ್ಲಿ ದೋಸ್ತಿ ಶಾಸಕರ ಚರ್ಚೆ ಕುರಿತು ಈಶ್ವರಪ್ಪ ಅಪಹಾಸ್ಯ..!

- Advertisement -

ಬೆಂಗಳೂರು: ಕಳೆದ ವಾರದಿಂದ ವಿಶ್ವಾಸಮತ ಯಾಚನೆ ಮಾಡ್ತೀವಿ ಅಂತಿರುವ ಸಿಎಂ ಸದನದಲ್ಲಿ ಸದಸ್ಯರು ಚರ್ಚೆ ಮಾಡಬೇಕು ಅನ್ನೋ ನೆಪದಲ್ಲಿ ಈವರೆಗೂ ಮುಂದೂಡಿಕೆ ಮಾಡಿಕೊಂಡು ಬರ್ತಾನೇ ಇದ್ದಾರೆ. ಬೆಳಗ್ಗೆ ಆರಂಭವಾಗುವ ಸದನದಲ್ಲಿ ಆಡಳಿತ ಪಕ್ಷದ ಶಾಸಕರು ಮಾತನಾಡುವ ಸಾಮಾನ್ಯ ಮಾತುಗಳನ್ನು ಕುರಿತು ಟ್ಪೀಟ್ ಮಾಡೋ ಮೂಲಕ ಈಶ್ವರಪ್ಪ ಟೀಕಿಸಿದ್ದಾರೆ.

ಇಂದು ವಿಶ್ವಾಸಮತ ಯಾಚನೆಯಾಗುವುದು ಖಚಿತ ಅನ್ನೋ ಸುಳಿವು ಸಿಗುತ್ತಿದ್ದಂತೆ ಬಿಜೆಪಿ ನಾಯಕರು ಜೋಷ್ ನಲ್ಲಿದ್ದಾರೆ. ಈವರೆಗೂ ದೋಸ್ತಿ ಶಾಸಕರು ಸದನದಲ್ಲಿ ಪದೇ ಪದೇ ಹೇಳುವ ಮಾತುಗಳ ಕುರಿತು ಟ್ವೀಟ್ ಮೂಲಕ ಈಶ್ವರಪ್ಪ ಟೀಕಿಸಿದ್ದಾರೆ. ಮೊದಲನೆಯದಾಗಿ ಮಾನ್ಯ ಸಭಾಧ್ಯಕ್ಷರೇ ಅಂತ , ಎರಡನೆಯದ್ದಾಗಿ ನಾವು ಇನ್ನೂ ಬಹಳ ಜನ ಚರ್ಚೆ ಮಾಡೋದಿದೆ ಅಂತ, ಮೂರನೇಯದ್ದಾಗಿ ದಯವಿಟ್ಟು ಅವಕಾಶ ಮಾಡಿಕೊಡಿ ಹಾಗೂ ನಾಲ್ಕನೆಯದ್ದಾಗಿ ಸಂಜೆಯಾಗುತ್ತಲೇ ಮನೆಗೆ ಹೋಗಬೇಕು ಅಂತ ಟ್ಟೀಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ. ಅಲ್ಲದೆ ಆಡಳಿತ ಪಕ್ಷದ ಸದಸ್ಯರು ಇಷ್ಟೂ ದಿವಸದ ಕಲಾಪದಲ್ಲಿ ಈ ಮೇಲಿನ ವಿಚಾರದ ಕುರಿತಾಗಿಯೇ ಚರ್ಚೆ ಮಾಡಿದ್ದಾರೆ. ಇಷ್ಟು ಬಿಟ್ಟು ಇವತ್ತು ಬೇರೆ ಏನಾರ ಚರ್ಚೆ ಮಾಡಿ. ರಾಜ್ಯದ ಜನತೆ ನೋಡುತ್ತಿದ್ದಾರೆ ಅಂತ ಅಪಹಾಸ್ಯ ಮಾಡಿದ್ದಾರೆ.

- Advertisement -

Latest Posts

Don't Miss