ಮೈಸೂರು: ಬಿಜಿಪಿ ಶಾಸಕ ಸುರೇಶ್ ಕುಮಾರ್ ಇಂದು ತಮ್ಮ ಬಹುದಿನಗಳ ಆಸೆಯಂತೆ ತಮ್ಮ ಸ್ನೇಹಿತನ ಜಮೀನಿನಲ್ಲಿ ಸುರೇಶ್ ಕುಮಾರ್ ಕಬ್ಬು ನಾಟಿ ಮಾಡಿದ್ರು.
ಮೈಸೂರು ಜಿಲ್ಲೆಯ ನಂಜನಗೂಡಿನ ಹೊರಳವಾಡಿ ಗ್ರಾಮದ ತಮ್ಮ ಸ್ನೇಹಿತ ಕಪಿಲೇಶ್ ಎಂಬುವರ ಕಬ್ಬಿನ ಗದ್ದೆಯಲ್ಲಿ ಇವತ್ತು ಬೆಂಗಳೂರಿನ ರಾಜಾಜಿನಗರದ ಬಿಜೆಪಿ ಶಾಸಕ ಸುರೇಶ್ ಕುಮಾರ್ ಕಬ್ಬು ನಾಟಿ ಮಾಡಿ ಕೆಲ ಹೊತ್ತು ಜಮೀನಿನಲ್ಲೇ ಕಳೆದ್ರು.
ಬಳಿಕ ಮಾತನಾಡಿದ ಶಾಸಕ ಬಹಳ ದಿನಗಳ ಇಚ್ಛೆಯನ್ನು ಇಂದು ಪೂರೈಸಿದೆ. ಮಿತ್ರ ಕಪಿಲೇಶ್ ರವರ ಗದ್ದೆಯಲ್ಲಿ ಗೆಳೆಯರೊಂದಿಗೆ ನಾನೂ ಕಬ್ಬಿನ ನಾಟಿ ಮಾಡಿದೆ. ಅಲ್ಲದೆ ಅದೇ ಸಮಯಕ್ಕೆ ಇಲ್ಲಿಗೆ ಬಂದ ಸ್ಥಳೀಯ ಸಕ್ಕರೆ ಕಾರ್ಖಾನೆಯ ಫೀಲ್ಡ್ ಅಧಿಕಾರಿಗಳಾದ ಮಹೇಶ್ ಮತ್ತು ನಾಗೇಂದ್ರ ಪ್ರಸಾದ್ ರೊಂದಿಗೆ ಕಬ್ಬು ಬೆಳೆಗಾರರ ಕೆಲ ವಿಷಯಗಳ ಕುರಿತು ಚರ್ಚಿಸಿದೆ. ಸುಮಾರು 4 ಗಂಟೆಗಳ ಈ ಕೆಲಸದಲ್ಲಿ ತೊಡಗಿದ್ದಾಗ ಅದ್ಭುತ ಅನುಭವ ನನ್ನದಾಯಿತು. ಕೊಟ್ಟಿಗೆ ವಾಸ್ತವ್ಯದ ನಂತರ ನಾಟಿ ಮಾಡಿದ ಅನುಭವ ತುಂಬಾ ಚೆನ್ನಾಗಿತ್ತು. ಇಂತಹ ಅನುಭವಗಳಿಂದ ನಗರವಾಸಿಗಳು ವಂಚಿತರಾಗಿದ್ದೇವೆ ಅಂತ ಇದೇ ವೇಳೆ ಸುರೇಶ್ ಕುಮಾರ್ ತಮ್ಮ ಅನುಭವ ಹಂಚಿಕೊಂಡ್ರು.
ಹೊಸದಾಗಿ ಕೆಲಸಕ್ಕೆ ಸೇರಿರೋ ಸರ್ಕಾರಿ ನೌಕರರಿಗೆ ಇಲ್ಲಿದೆ ಶಾಕಿಂಗ್ ನ್ಯೂಸ್..! ಮಿಸ್ ಮಾಡದೇ ಈ ವಿಡಿಯೋ ನೋಡಿ