Friday, March 29, 2024

Latest Posts

ಮೈತ್ರಿ ಸರ್ಕಾರದ ವಿರುದ್ಧ 2 ದಿನ ಬಿಜೆಪಿ ಅಹೋರಾತ್ರಿ ಧರಣಿ..!

- Advertisement -

ಬೆಂಗಳೂರು: ಜಿಂದಾಲ್ ಗೆ ಸಾವಿರಾರು ಎಕರೆ ಭೂಮಿ ನೀಡಿಕೆ ನಿರ್ಧಾರ ಹಾಗೂ ಬರ ನಿರ್ವಹಣೆಗೆ ಮೈತ್ರಿ ಸರ್ಕಾರ ವಿಫಲವಾಗಿರೋದನ್ನು ಖಂಡಿಸಿ ಇಂದಿನಿಂದ ರಾಜ್ಯ ಬಿಜೆಪಿ ನಾಯಕರು ಅಹೋರಾತ್ರಿ ಧರಣಿ ಕೈಗೊಂಡಿದ್ದಾರೆ.

ಬೆಂಗಳೂರಿನ ಆನಂದ್ ರಾವ್ ವೃತ್ತದ ಗಾಂಧಿ ಪ್ರತಿಮೆ ಎದುರು ಬೆಳಗ್ಗೆ 10 ಗಂಟೆಗೆ ಆರಂಭವಾಗಿರೋ ಧರಣಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ನೇತೃತ್ವದಲ್ಲಿ ನಡೆಯುತ್ತಿದೆ. ಬಿಜೆಪಿಯ 25 ಮಂದಿ ಸಂಸದರು ಮತ್ತು 105 ಮಂದಿ ಶಾಸಕರು ಧರಣಿಯಲ್ಲಿ ಪಾಲ್ಗೊಂಡಿದ್ದಾರೆ. ಸಂಸದೆ ಶೋಭಾ ಕರಂದ್ಲಾಜೆ, ಮಾಜಿ ಡಿಸಿಎಂ ಆರ್ ಅಶೋಕ್, ಗೋವಿಂದ ಕಾರಜೋಳ, ಅರವಿಂದ ಲಿಂಬಾವಳಿ, ಸಿ.ಟಿ ರವಿ, ರವಿಕುಮಾರ್ ಸೇರಿದಂತೆ ಪಕ್ಷದ ಎಲ್ಲಾ ಪ್ರಮುಖ ನಾಯಕರು ಮೈತ್ರಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಎರಡು ದಿನಗಳ ಕಾಲ ಅಹೋರಾತ್ರಿ ಧರಣಿ ಬಳಿಕ ಸಿಎಂ ಗೃಹ ಕಚೇರಿಗೆ ಬಿಜೆಪಿ ಸಂಸದರು ಮತ್ತು ಶಾಸಕರೊಡನೆ ರಾಜ್ಯ ಬಿಜೆಪಿ ನಾಯಕರು ಮುತ್ತಿಗೆ ಹಾಕಲು ನಿರ್ಧರಿಸಿದ್ದಾರೆ.

ಸರ್ಕಾರಿ ನೌಕರರಿಗೆ ಮೈತ್ರಿ ಸರ್ಕಾರ ರಜೆಯ ಬರೆ…! ಮಿಸ್ ಮಾಡದೇ ಈ ವಿಡಿಯೋ ನೋಡಿ

https://www.youtube.com/watch?v=T1pWXQlWrLo
- Advertisement -

Latest Posts

Don't Miss