Friday, December 5, 2025

Latest Posts

ಡೆಲ್ಲಿಯಲ್ಲಿ BJP ಪವರ್‌ಪ್ಲೇ! ಬಿ.ವೈ. ವಿಜಯೇಂದ್ರ OUT?

- Advertisement -

ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಚರ್ಚೆ ಮತ್ತೆ ಗರಿಗೆದರುತ್ತಿದೆ. ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರನ್ನು ಬದಲಿಸಬೇಕೆಂದು ವರ್ಷದಿಂದ ಒತ್ತಾಯಿಸುತ್ತಿದ್ದ ಭಿನ್ನಮತೀಯರು ಈಗ ಹೊಸ ತಂತ್ರಕ್ಕೆ ತಿರುಗಿದ್ದಾರೆ. ಇವರ ವಾದ—ಅಧ್ಯಕ್ಷರ ಅವಧಿ ಮೂರು ವರ್ಷ. ವಿಜಯೇಂದ್ರ ಈಗಾಗಲೇ ಎರಡು ವರ್ಷ ಪೂರೈಸಿದ್ದಾರೆ. ಇನ್ನೊಂದು ವರ್ಷ ಮುಂದುವರಿಸಿದರೂ ಅಡ್ಡಿಯಿಲ್ಲ. ಆದರೆ 2028ರ ಚುನಾವಣೆಗೆ ಮುನ್ನ ಹೊಸ ನಾಯಕತ್ವ ಅಗತ್ಯವೆಂದು ಅವರು ಒತ್ತಾಯಿಸಿದ್ದಾರೆ. ವಿ. ಸೋಮಣ್ಣ ಅಥವಾ ಜಗದೀಶ ಶೆಟ್ಟರ್ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಬೇಕು ಎನ್ನುವುದು ಇವರ ಬೇಡಿಕೆ.

ಈ ನಡುವೆ ಭಿನ್ನಮತೀಯ ನಾಯಕರು ಕಳೆದ ಮೂರು ದಿನಗಳಿಂದ ದೆಹಲಿಯಲ್ಲಿ ಸಕ್ರಿಯರಾಗಿದ್ದು, ಜೆ.ಪಿ. ನಡ್ಡಾ ಮತ್ತು ಅಮಿತ್ ಶಾ ಭೇಟಿಗಾಗಿ ಪ್ರಯತ್ನಿಸುತ್ತಿದ್ದಾರೆ. ಅವರು ರಾಜ್ಯ ಉಸ್ತುವಾರಿ ರಾಧಾಮೋಹನ್ ದಾಸ್ ಅಗರವಾಲ್ ಅವರನ್ನು ಭೇಟಿ ಮಾಡಿ ತಮ್ಮ ನಿಲುವನ್ನೂ ತಿಳಿಸಿದ್ದಾರೆ. ತಟಸ್ಥರೆಂದು ಗುರುತಿಸಲ್ಪಟ್ಟ ವಿ. ಸೋಮಣ್ಣ, ಬಸವರಾಜ ಬೊಮ್ಮಾಯಿ, ಡಾ. ಸುಧಾಕರ್ ಮತ್ತು ಜಗದೀಶ ಶೆಟ್ಟರ್‌ರೊಂದಿಗೆ ಸಮಾಲೋಚನೆಗಳು ನಡೆದಿವೆ. ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರನ್ನು ಕೂಡ ಭೇಟಿಯಾಗಿ ಚರ್ಚಿಸಲಾಗಿದೆ. ಈ ಸಂದರ್ಭದಲ್ಲಿ ಕುಮಾರಸ್ವಾಮಿ—“ನಾನು ಬಿಜೆಪಿ ಜೊತೆಗೆ ಇದ್ದೇನೆ… ಆದರೆ ಭಿನ್ನಮತೀಯರ ಜತೆಗೆ ಅಲ್ಲ” ಎಂದು ಸ್ಪಷ್ಟ ಸಂದೇಶ ನೀಡಿದ್ದಾರೆ.

ಕುಮಾರ್ ಬಂಗಾರಪ್ಪ “ಯತ್ನಾಳ ಉಚ್ಛಾಟನೆಯ ನಂತರವೂ ನಾವು ಹಿಂತಿರುಗಿಲ್ಲ. 2028ರಲ್ಲಿ ಅಧಿಕಾರಕ್ಕೆ ಬರಲು ಸಂಘಟನೆ ಬಲಪಡಿಸಬೇಕು ಎಂದು ಹೇಳಿದ್ದಾರೆ. ಮತ್ತೊಂದೆಡೆ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಬಿಜೆಪಿಯಲ್ಲಿ ಬಣಗಳೇ ಇಲ್ಲ, ಬಿಜೆಪಿ ಬಣ ಮಾತ್ರವೇ ಇದೆ” ಎಂದು ಹೇಳಿದ್ದಾರೆ. ಭಿನ್ನಮತೀಯರು ಕುಮಾರಸ್ವಾಮಿಯನ್ನು ಭೇಟಿಯಾದ ವಿಚಾರಕ್ಕೆ ಅವರು ಕೇಂದ್ರ ಸಚಿವರನ್ನು ಯಾರೂ ಬೇಕಾದರೂ ಭೇಟಿ ಮಾಡಬಹುದು ಎಂದು ಪ್ರತಿಕ್ರಿಯಿಸಿದ್ದಾರೆ.

ರಾಜಣ್ಣ ಪುತ್ರ ರಾಜೇಂದ್ರ ಬಿಜೆಪಿ ಸಂಪರ್ಕದಲ್ಲಿದ್ದಾರೆಯೇ ಎಂಬ ಪ್ರಶ್ನೆಗೆ ಅವರು ಮಾಹಿತಿ ಇಲ್ಲ ಎಂದಿದ್ದರೂ, ರಾಜ್ಯ ಸರ್ಕಾರ ರೈತರ ಸಮಸ್ಯೆ ಕಡೆಗಣಿಸಿ ಕುರ್ಚಿ ಕಿತ್ತಾಟದಲ್ಲಿ ತೊಡಗಿದೆ ಎಂದು ದಾಳಿ ನಡೆಸಿದ್ದಾರೆ.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss