www.karnatakatv.net :ತುಮಕೂರು: ಕುತೂಹಲ ಕೆರಳಿಸಿದ ಹುಳಿಯಾರು ಪಟ್ಟಣ ಪಂಚಾಯಿತಿ ಕಮಲದ ವಶವಾಗಿದೆ. ಇಂದು ನಡೆದ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯಲ್ಲಿ ಬಿಜೆಪಿ ಮೇಲುಗೈ ಸಾಧಿಸಿದೆ. ಅಧ್ಯಕ್ಷರಾಗಿ ಕೆಎಂಎಲ್ ಕಿರಣ್ ಹಾಗೂ ಉಪಾಧ್ಯಕ್ಷರಾಗಿ ಶೃತಿ ಆಯ್ಕೆಯಾಗಿ ಗೆಲುವಿನ ನಗೆ ಬೀರಿದ್ದಾರೆ.
ಕಳೆದ ಒಂದು ವಾರದಿಂದ ಹಲವು ರಾಜಕೀಯ ಹೈಡ್ರಾಮಕ್ಕೆ ಸಾಕ್ಷಿಯಾಗಿತ್ತು ಹುಳಿಯಾರು. ತುಮಕೂರು ಜಿಲ್ಲೆ ಚಿಕ್ಕನಾಯಕಹಳ್ಳಿಯ ಹುಳಿಯಾರು ಪಟ್ಟಣ ಪಂಚಾಯ್ತಿ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿದೆ. ಕಾಂಗ್ರೆಸ್ ಅಭ್ಯರ್ಥಿ ರಾಜು ಬಡಗಿ ಕೆಲ ದಿನಗಳಿಂದ ನಾಪತ್ತೆಯಾಗಿದ್ದರು. ಇದು ಬಿಜೆಪಿ ಪಾಳಯಕ್ಕೆ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನ ಪಕ್ಕ ಅನ್ನೋ ನಿರ್ಧಾರ ಮಾಡಲಾಗಿತ್ತು. ಬಿಜೆಪಿ ಮುಖಂಡರು ಅಂದುಕೊಂಡಂತೆ ಪೂರಕ ವಾತಾವರಣ ಸೃಷ್ಠಿಯಾಗಿದೆ. ಪರಿಣಾಮ ಬಿಜೆಪಿಯ ಕೆಎಂಎಲ್ ಕಿರಣ್ ಅಧ್ಯಕ್ಷರಾಗಿ ಹಾಗೂ ಶೃತಿ ಸನತ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಸಂಸದ ಜಿ. ಎಸ್ ಬಸವರಾಜು ಹಾಗೂ ಸಚಿವ ಜೆ.ಸಿ. ಮಾಧಸ್ವಾಮಿ ಅವರು ಕೂಡ ಮತ ಕೈ ಎತ್ತವ ಮೂಲಕ ಬೆಂಬಲಿಸಿದ್ದಾರೆ. ಗೆದ್ದವರನ್ನ ತೆರೆದ ವಾಹನದಲ್ಲಿ ಮೆರವಣಿಗೆ ಮಾಡಲಾಯಿತು. ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು.
ಹುಳಿಯಾರು ಪಟ್ಟಣ ಪಂಚಾಯ್ತಿ 16 ಸದಸ್ಯರನ್ನ ಒಳಗೊಂಡಿದೆ. ಬಿಜೆಪಿಯ ಆರು ಸದಸ್ಯರು ಕಾಂಗ್ರೆಸ್ 5, ಜೆಡಿಎಸ್ 3 ಸದಸ್ಯರು ಹಾಗೂ ಪಕ್ಷೇತರರು ಇಬ್ಬರು ಆಯ್ಕೆಯಾಗಿದ್ದರು. ಕಾಂಗ್ರೆಸ್-ಜೆಡಿಎಸ್ ಹಾಗೂ ಪಕ್ಷೇತರರು ಸೇರಿ ಪಟ್ಟಣ ಪಂಚಾಯತಿ ಚುಕ್ಕಾಣಿ ಹಿಡಿಯುವ ಬಗ್ಗೆ ರಾಜಕೀಯ ಚಟುವಟಿಕೆಗಳು ನಡೆದಿತ್ತು. ಹೀಗೆ ದಿನಕ್ಕೊಂದು ತಿರುವು ಪಡೆಯುವ ಮೂಲಕ ಸಾರ್ವಜನಿಕ ವಲಯದಲ್ಲಿ ಮತ್ತಷ್ಟು ಕುತೂಹಲ ಮನೆ ಮಾಡಿತ್ತು. ಅಂತಿಮವಾಗಿ ಬಿಜೆಪಿಗೆ ಅಧಿಕಾರ ಹಿಡಿಯುವ ಅದೃಷ್ಟ ಒಲಿದಿದೆ.
ಕಾಂಗ್ರೆಸ್ ಅಭ್ಯರ್ಥಿಯ ರಾಜು ಬಡಗಿ ನಾಟ್ ರೀಚಬಲ್ ಆದ ಪರಿಣಾಮ ಕಮಲ ಪಾಳಯಕ್ಕೆ ಜಯದ ಮಾಲೆ ಸಿಕ್ಕಿದೆ. ಪಟ್ಟಣ ಪಂಚಾಯಿತಿಯಾಗಿ ಬದಲಾದ ಮೊದಲ ಚುನಾವಣೆಯಲ್ಲೇ ಬಿಜೆಪಿ ಆಡಳಿತಕ್ಕೆ ಬಂದಿದೆ. ಇದ್ರಿಂದ ಹುಳಿಯಾರು ಪಟ್ಟಣ ಅಭಿವೃದ್ಧಿಯಾಗುವ ನಿರೀಕ್ಷೆಯನ್ನ ನಿವಾಸಿಗಳಲ್ಲಿ ಹೆಚ್ಚಿಸುವಂತೆ ಮಾಡಿದೆ.
ದರ್ಶನ್ ಕೆ.ಡಿ.ಆರ್, ತುಮಕೂರು