ಧರ್ಮಸ್ಥಳದ ವಿರುದ್ಧ ಅಪಪ್ರಚಾರ ನಡೆಯುತ್ತಿದೆ ಎಂದು ಬಿಜೆಪಿ ಆರೋಪಿಸಿದೆ. ಸಾಮೂಹಿಕ ಅಂತ್ಯಕ್ರಿಯೆಗಳ ಆರೋಪಗಳ ಬಗ್ಗೆ NIA ತನಿಖೆ ನಡೆಸಬೇಕೆಂದು ಒತ್ತಾಯಿಸಿದೆ. ಅಂತಹ ತನಿಖೆಗೆ ಒತ್ತಾಯಿಸಲು ‘ಧರ್ಮಸ್ಥಳ ಚಲೋ’ ರ್ಯಾಲಿಯನ್ನು ನಡೆಸುವುದಾಗಿಯೂ ಬಿಜೆಪಿ ಘೋಷಿಸಿದೆ.
ಈಗ NIA ತನಿಖೆಗೆ ಒತ್ತಾಯಿಸಿ ಬಿಜೆಪಿ ಪಕ್ಷವು ಸೆಪ್ಟೆಂಬರ್ 1ರಂದು ಧರ್ಮಸ್ಥಳಕ್ಕೆ ಧರ್ಮಯಾತ್ರೆ ಕೈಗೊಂಡಿದೆ. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ಹೋದ್ರೆ ಹೋಗ್ಲಿ, ಧರ್ಮಸ್ಥಳದ ಹೆಗಡೆ ಅವ್ರೆ ಸ್ವಾಗತ ಮಾಡಿದ್ದರಂತೆ. ಬಿಜೆಪಿಯವರು ಎಲ್ಲದರಲ್ಲೂ ರಾಜಕೀಯ ಮಾಡ್ತಾರೆ. ನೀವು ಬಿಜೆಪಿ ಪರ ಮಾತಾಡ್ಬಾದ್ರು ಖಂಡಿಸಬೇಕು ಎಂದಿದ್ದಾರೆ.
ಇನ್ನು SIT ಯಾಕೆ ರಚನೆಯಾಗಿದೆ ಅನ್ನೋದರ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ ಸತ್ಯ ಹೊರ ಬರಬೇಕು ಅಲ್ವಾ? ಅಂತ ಪ್ರಶ್ನಿಸಿದ್ದಾರೆ. ಸತ್ಯ ಹೊರಬರಬೇಕು ಎಂಬ ಕಾರಣಕ್ಕಾಗಿ ನಾವು ವಿಶೇಷ ತನಿಖಾ ತಂಡ (SIT) ರಚಿಸಿದ್ದೇವೆ. ಧರ್ಮಸ್ಥಳದ ಕುರಿತು ಸಂಶಯವಿದ್ದ ಕಾರಣ ಅದನ್ನು ಪರಿಹರಿಸಲು SIT ರಚನೆ ಮಾಡಲಾಗಿದೆ. ಈ ಪ್ರಕರಣದಲ್ಲಿ ದೂರುದಾರ ಕೋರ್ಟ್ ಮುಂದೆ 164 ಸ್ಟೇಟ್ಮೆಂಟ್ ನೀಡಿದ್ದಾರೆ ಎಂದರು.
ಅನೇಕ ಸಂಘ ಸಂಸ್ಥೆಗಳಿಂದ SIT ಮಾಡಬೇಕು ಅಂತ ಒತ್ತಾಯ ಇತ್ತು. ಶಕ್ತಿ ಹೊರಬರಬೇಕು ಅನ್ನೋದು ಸರ್ಕಾರದ ಉದ್ದೇಶ. SIT ತನಿಖೆ ಸ್ವಾಗತ ಮಾಡಿರೋರ್ಯಾರು ಬಿಜೆಪಿ. ಅವ್ರಿಗೆ ಧರ್ಮಾನು ಗೊತ್ತಿಲ್ಲ, ಜಾತೀನೂ ಗೊತ್ತಿಲ್ಲ. ಸುಮ್ನೆ ರಾಜಕೀಯ ಮಾಡಬೇಕು ಮಾಡ್ತಿದಾರೆ ಅಂತ ಸಿದ್ದರಾಮಯ್ಯ ಟೀಕಿಸಿದ್ದಾರೆ.
ವರದಿ : ಲಾವಣ್ಯ ಅನಿಗೋಳ