Banglore News : ಉಡುಪಿಯ ಕಾಲೇಜಿನ ವೀಡಿಯೋ ವಿಚಾರ ಇದೀಗ ರಾಜ್ಯದಲ್ಲಿ ಭುಗಿಲೆದ್ದಿದೆ. ಇದರ ಬೆನ್ನಲ್ಲೇ ಇದೇ ವಿಚಾರವಾಗಿ ಟ್ವೀಟ್ ಮಾಡಿದ ಬಿಜೆಪಿ ಕಾರ್ಯಕರ್ತೆ ಶಕುಂತಲಾ ನಟರಾಜ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಟ್ವೀಟ್ ನಲ್ಲಿ ಇವರು ಕಾಂಗ್ರೆಸ್ ಹಾಗು ಸಿಎಂ ವಿರುದ್ಧವಾಗಿ ವಿಚಾರಗಳನ್ನು ಬರೆದುಕೊಂಡಿದ್ದಾರೆ.
ಉಡುಪಿ ಕಾಲೇಜಿನ ವಿಡಿಯೋ ಕೇಸ್‌ಗೆ ಸಂಬಂಧಿಸಿದಂತೆ ಶಕುಂತಲಾ, ‘ಕಾಂಗ್ರೆಸ್‌ನವರ ಪ್ರಕಾರ ವಿಡಿಯೋ ಮಾಡಿದ್ದು ಮಕ್ಕಳಾಟವಂತೆ. ಸಿದ್ದರಾಮಯ್ಯ ಸೊಸೆ ಅಥವಾ ಹೆಂಡತಿ ಅವರ ವಿಡಿಯೋವನ್ನು ಇದೆ ತರ ಮಾಡಿದರೆ ಅದನ್ನು ಮಕ್ಕಳಾಟ ಅಂತ ಒಪ್ಪಿಕೊಳ್ಳುತ್ತೀರಾ?’ ಎಂದು ಪೋಸ್ಟ್ ಮಾಡಿದ್ದರು. ಈ ಕುರಿತು ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.
ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸರು ಅವರನ್ನು ಬಂಧಿಸಿದ್ದಾರೆ. ತಮಕೂರು ಮೂಲದ ಬಿಜೆಪಿ ಕಾರ್ಯಕರ್ತೆ ಶಕುಂತಲಾ, ಬಿಜೆಪಿಯ ಸಾಮಾಜಿಕ ಜಾಲತಾಣದ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಬಂಧನದ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ. ಈ ಹಿಂದೆಯೂ ಇವರು ಒಡಿಸ್ಸಾ ರೈಲು ದುರಂತ ಸೇರಿದಂತೆ ಹಲವು ವಿಚಾರವಾಗಿ ವಿವಾದಾತ್ಮಕ ಟ್ವೀಟ್ ಮಾಡಿ ಕೆಂಗಣ್ಣಿಗೆ ಗುರಿಯಾಗಿದ್ದರು ಎನ್ನಲಾಗಿದೆ.
ಮುಸ್ಲಿಂ ಯುವತಿಯರು ಟಾಯ್ಲೆಟ್ ನಲ್ಲಿ ಕ್ಯಾಮೆರಾ ಇಟ್ಟು ಹಿಂದೂ ಹೆಣ್ಣುಮಕ್ಕಳ ವಿಡಿಯೋ ಮಾಡಿದ್ದು ಕಾಂಗ್ರೆಸ್‌ನವರ ಪ್ರಕಾರ ಮಕ್ಕಳಾಟವಂತೆ..@siddaramaiah ನವರ ಸೊಸೆ or ಹೆಂಡ್ತಿ ಅವ್ರ ವಿಡಿಯೋವನ್ನು ಇದೆ ತರ ಮಾಡಿದ್ರೆ
ಅದನ್ನು ಮಕ್ಕಳಾಟ ಅಂತ ಒಪ್ಕೋತೀರಾ? pic.twitter.com/jP0QTKvL5R— ಶಕುಂತಲ🪷Shakunthala (@ShakunthalaHS) July 25, 2023
Flood: ನೇರೆ ಪೀಡಿತ ಪ್ರದೇಶಗಳಿಗೆ ಭೇಟಿ ವೇಳೆಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಲಾಡ್
Traffic jam: ಸಚಿವ ಸಂತೋಷ್ ಲಾಡ್ ಗೆ ಬೆಂಬಲಿಗರಿಂದ ಸನ್ಮಾನ , ರಸ್ತೆಯಲ್ಲಿ ವಾಹನ ದಟ್ಟಣೆ.