ಬಸವಕಲ್ಯಾಣ ಬಿಜೆಪಿ ಶಾಸಕ ಶರಣು ಸಲಗರ್ ಅವರಿಂದ ಸುದ್ದಿಗೋಷ್ಠಿ. ಶಾಸಕ ಶರಣು ಸಲಗರ್ ಸೇರಿ 9 ಜನರ ವಿರುದ್ಧ ಎಫ್ಐಆರ್ ದಾಖಲಾದ ಹಿನ್ನೆಲೆಯಲ್ಲಿ ಸಿಡಿಮಿಡಿಗೊಂಡ ಸಲಗರ್ ಗೋಹತ್ಯೆ ನಡೆಯುವ ಆರೋಪ ಕೇಳಿ ಬಂದ ತಕ್ಷಣ ಸ್ಥಳಕ್ಕೆ ತೆರಳಿ ಹತ್ಯೆ ಮಾಡುವುದನ್ನು ಹೊರಗಡೆಯಿಂದಲೆ ನಿಲ್ಲಿಸಲು ಪ್ರಯತ್ನ ಮಾಡಿದ್ಧೆನೆ. ಕಾನೂನು ಬಾಹಿರವಾಗಿ ನಡೆಯುತ್ತಿರುವ ಕೆಲಸವನ್ನು ನಿಲ್ಲಿಸಿದ್ಧಕ್ಕೆ ನನ್ನ ಮೇಲೆ ಪ್ರಕರಣ ದಾಖಲಾಗಿದೆ. ಇಲ್ಲಿನ ಮಾಜಿ ಎಂಎಲ್ಸಿ ಹಾಗು 2023 ರ ವಿಧಾನಸಭೆಯ ಚುನಾವಣೆ ಪರಾಜಿತ ಅಭ್ಯರ್ಥಿ ಮುಸ್ಲಿಂ ಸಮುದಾಯದವರನ್ನು ಎತ್ತಿ ಕಟ್ಟುವ ಕೆಲಸ ಮಾಡುತ್ತಿದ್ದಾರೆ. ಗೋಹತ್ಯೆ ಮಾಡುತ್ತಿರುವವರನ್ನು ಸಹಕರಿಸುತ್ತವೆ ಅಲ್ಲದೆ ರಾಜ್ಯ ಸರ್ಕಾರ ನಿಮ್ಮ ಜೊತೆಗಿದೆ ಎಂದು ವಿಜಯ್ ಸಿಂಗ್ ಅವರು ಕಾನೂನು ಬಾಹಿರ ಚಟುವಟಿಕೆ ನಡೆಸುವವರಿಗೆ ಸಹಕಾರ ನೀಡುತ್ತಿದ್ದಾರೆ. ಎಂಜಲು ಓಟಿನ ಆಸೆಗಾಗಿ ಕಾನೂನು ಬಾಹಿರವಾಗಿ ಚಟುವಟಿಕೆಗಳಿಗೆ ಪ್ರಚೋದನೆ ನೀಡುತ್ತಿರುರುವುದು ಸರಿ ಅಲ್ಲ ಎಂದು ವಿಜಯ್ ಸಿಂಗ್ ವಿರುದ್ಧ ಹರಿಹಾಯ್ದರು. ಶರಣರ ನಾಡಿನಲ್ಲಿ ಗೋಹತ್ಯೆ ಗೆ ಸಹಕಾರ ನೀಡುತ್ತಿರುವ ನಿಮಗೆ ಗೋಮಾತೆ ಯ ಶಾಪ ತಟ್ಟದೆ ಬಿಡುವುದಿಲ್ಲ ಎಂದು ತಿಳಿಸಿದರು. ನನ್ನ ಮೇಲೆ ಪ್ರಕರಣ ದಾಖಲಿಸಿದಕ್ಕೆ ನಾನು ಹೆದರುವುದಿಲ್ಲ ಗೋರಕ್ಷಣೆ ಗೆ ಸದಾ ಸಿದ್ಧನಿದ್ದೇನೆ ಎಂದು ತಿಳಿಸಿದರು.
walking path: ವಾಯುವಿಹಾರಕ್ಕೆ ತೆರಳಲು ಭಯವಾಗುತ್ತಿದೆ, ಹಾವುಗಳ ಕಾಟ ಹೆಚ್ಚಿದೆ..!