ದಕ್ಷಿಣ ಕನ್ನಡ ಜಿಲ್ಲೆಯ ಕಡಬ ಪಟ್ಟಣ ಪಂಚಾಯ್ತಿ ಅನ್ನ ಬಿಜೆಪಿ ಭದ್ರಕೋಟೆಯೆಂದು ಹೇಳಲಾಗುತ್ತಿತ್ತು. ಆದ್ರೀಗ ಕಡಬ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಒಂದೇ ಒಂದು ಮತ ಪಡೆಯದೆ ಚುನಾವಣೆ ಸೋತಿರುವುದು ಗಮನ ಸೆಳೆಯುತ್ತಿದೆ.
ವಾರ್ಡ್ ಸಂಖ್ಯೆ 1 ಕಳಾರನಲ್ಲಿ ಬಿಜೆಪಿ ಅಭ್ಯರ್ಥಿ ಪ್ರೇಮಾ, 418 ಮತಗಳಲ್ಲಿ ಒಂದೇ ಒಂದು ಮತ ಪಡೆಯದೇ ಹೀನಾಯ ಸೋಲನ್ನು ಅನುಭವಿಸಿದ್ದಾರೆ. ಈ ಸ್ಥಾನದಲ್ಲಿ ಕಾಂಗ್ರೆಸ್ ಅಭ್ಯರ್ಥಿ ತಮನ್ನಾ ಜಬೀನ್ 201 ಮತಗಳನ್ನು ಪಡೆದು, ಸ್ವತಂತ್ರ ಅಭ್ಯರ್ಥಿ ಜೈನಾಬಿ ಆಡಮ್ ಅವರನ್ನು 62 ಮತಗಳ ಅಂತರದಿಂದ ಸೋಲಿಸಿದರು. SDPI ಅಭ್ಯರ್ಥಿ 74 ಮತಗಳನ್ನು ಗಳಿಸಿದರು.
ವಾರ್ಡ್ ಸಂಖ್ಯೆ 1ರ ಮತದಾರರಲ್ಲದ ಪ್ರೇಮಾ, ಅವರು ವಾಸಿಸುವ ವಾರ್ಡ್ ಸಂಖ್ಯೆ 6ರಲ್ಲೂ ಕಣದಲ್ಲಿದ್ದರು. ಆದರೆ, ಅಲ್ಲಿಯೂ 177 ಮತಗಳನ್ನು ಗಳಿಸಿ ಕಾಂಗ್ರೆಸ್‌ನ ನೀಲಾವತಿ ಶಿವರಾಮ್ ಎಂ.ಎಸ್. ವಿರುದ್ಧ ಸೋತರು. ನೀಲಾವತಿ 314 ಮತಗಳನ್ನು ಗಳಿಸಿ ಗೆದ್ದು ಬೀಗಿದ್ದಾರೆ.
ವಾರ್ಡ್ ನಂಬರ್ 1 ಮುಸ್ಲಿಂ ಬಹುಸಂಖ್ಯಾತರು ಇರುವುದರಿಂದ ಪಕ್ಷದ ಬೆಂಬಲ ಅಲ್ಪವಾಗಿದೆ. ಅವರು, ನಾಮಪತ್ರ ಸಲ್ಲಿಸಿದ ನಂತರ ಸ್ಥಳೀಯ ಘಟಕವು ಪ್ರೇಮಾ ಬದಲು ಜೈನಾಬಿ ಆಡಮ್‌ಗೆ ಬೆಂಬಲ ನೀಡಲು ನಿರ್ಧರಿಸಿತು ದಕ್ಷಿಣ ಕನ್ನಡ ಬಿಜೆಪಿ ಅಧ್ಯಕ್ಷ ಸತೀಶ್ ಕುಮಾರಪ್ಪ ಎಂದು ತಿಳಿಸಿದ್ದಾರೆ.
ಇದೇ ವೇಳೆ ವಾರ್ಡ್ ಸಂಖ್ಯೆ 3ರಲ್ಲೂ ಬಿಜೆಪಿ ಅಭ್ಯರ್ಥಿ, ಮುಸ್ಲಿಂ ಅಭ್ಯರ್ಥಿ ಆಡಮ್ ಕುಂದೋಳಿ ಕೇವಲ 75 ಮತಗಳನ್ನು ಪಡೆಯುತ್ತಾ ಕಾಂಗ್ರೆಸ್ ಅಭ್ಯರ್ಥಿಯ ವಿರುದ್ಧ ಸೋತರು. ಇದು ಕಡಬ ಪಟ್ಟಣ ಪಂಚಾಯಿತಿಗೆ ನಡೆದ ಮೊದಲ ಚುನಾವಣೆ ಆಗಿದ್ದು, 13 ಸ್ಥಾನಗಳ ಪೈಕಿ ಕಾಂಗ್ರೆಸ್ 8 ಸ್ಥಾನಗಳನ್ನು ಗೆದ್ದು ಸ್ಪಷ್ಟ ಬಹುಮತ ಪಡೆದುಕೊಂಡಿದೆ. ಬಿಜೆಪಿ 5 ಸ್ಥಾನಗಳಿಗೆ ತೃಪ್ತಿ ಪಡುವಂತಾಗಿದೆ.




