ಬಿಜೆಪಿ ವಿರುದ್ಧ ವಾಕ್ಸಮರಕ್ಕೆ ಜಗದೀಶ್ ಶೆಟ್ಟರ್‌ ಪುತ್ರ ಎಂಟ್ರಿ – ಬಿಜೆಪಿ ವಿರುದ್ಧ ಕಿಡಿ

ಹುಬ್ಬಳ್ಳಿ: ಸದ್ಯ ಬಿಜೆಪಿ ಮತ್ತು ಮಾಜಿ ಸಿಎಂ ಜಗದೀಶ್ ಶೆಟ್ಟರ್‌ ನಡುವಿನ ಟಾಕ್ ಫೈಟ್‌ ಜೋರಾಗಿದೆ. ಶೆಟ್ಟರ್ ಮಾಡುವ ಆರೋಪಕ್ಕೆ ಬಿಜೆಪಿ ನಾಯಕರು ತಿರುಗೇಟು ನೀಡುತ್ತಿದ್ದಾರೆ. ಈ ನಡುವೆ ಮಾತಿನ ಯುದ್ಧಕ್ಕೆ ಶೆಟ್ಟರ್ ಅವರ ಪುತ್ರ ಎಂಟ್ರಿಕೊಟ್ಟಿದ್ದು, ಬಿಜೆಪಿ ವಿರುದ್ಧ ಕಿಡಿ ಕಾರಿದ್ದಾರೆ.

ಜಗದೀಶ್ ಶೆಟ್ಟರ್‌ ಅವರನ್ನ ಗುರಿಯಾಗಿಸಿಕೊಂಡು ಬಿಜೆಪಿ ನಾಯಕರು ಸಾಕಷ್ಟು ಹೇಳಿಕೆ ನೀಡುತ್ತಿದ್ದು, ಇದರಿಂದಾಗಿ ಅಸಮಾಧಾನಗೊಂಡಿರುವ ಜಗದೀಶ್ ಶೆಟ್ಟರ್‌ ಪುತ್ರ ಸಂಕಲ್ಪ್ ಶೆಟ್ಟರ್ ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ನಾಯಕರನ್ನ ಕುಟುಕಿದ್ದಾರೆ.

ಕರ್ನಾಟಕ ಬಿಜೆಪಿ ವಿರೋಧ ಪಕ್ಷದ ನಾಯಕ ಹಾಗೂ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಇವರು ಪ್ರಮುಖ ಮಾನದಂಡ, ಜಗದೀಶ್ ಶೆಟ್ಟರ್ ವಿರುದ್ಧ ಯಾರು ಹೆಚ್ಚು ಮಾತನಾಡುತ್ತಾರೆ ಟ್ವಿಟ್ಟರ್‌ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಅದನ್ನು ಅದಕ್ಕೆ ಬಿಎಲ್ ಅವರ ಆದೇಶ ಅಂತ ಅಡಿ ಬರಹ ಬರೆದು ಹ್ಯಾಶ್ ಟ್ಯಾಗ್ ಮಾಡಿ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

Cauvery Water: ಕಲಬುರ್ಗಿಯಲ್ಲೂ ಭುಗಿಲೆದ್ದ ಕಾವೇರಿ ಕಾವು..!

ಗಣಪತಿಗೆ ಗಣಹೋಮ ಮಾಡಿಸಿದ ಮುಸ್ಲಿಂ ಯುವಕ: ನಾವೆಲ್ಲರೂ ಒಂದೇ..!

Shakthi yojane century; ಶಕ್ತಿ ಯೋಜನೆಯ ಶತದಿನದ ಸಂಭ್ರಮ ಹಂಚಿಕೊಂಡ ಸಿಎಂ..!

About The Author