Hosapete News : ಬೈಂದೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಉದ್ಯಮಿ ಗೋವಿಂದಬಾಬು ಪೂಜಾರಿ ಅವರಿಗೆ ಹಿಂದೂಪರ ಕಾರ್ಯಕರ್ತೆ ಚೈತ್ರಾ ಕುಂದಾಪುರ ವಂಚಿಸಿದ್ದಾರೆ ಎಂಬ ಪ್ರಕರಣದ ಬೆನ್ನಿಗೇ ರಾಜ್ಯದಲ್ಲಿ ಅಂಥದ್ದೇ ಇನ್ನೊಂದು ಪ್ರಕರಣ ಬೆಳಕಿಗೆ ಬಂದಿದೆ.
ಇಲ್ಲಿಯೂ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ವಂಚಿಸಿರುವುದು ತಡವಾಗಿ ಬಹಿರಂಗಗೊಂಡಿದ್ದು, ಇಬ್ಬರ ವಿರುದ್ಧ ದೂರು ಕೂಡ ದಾಖಲಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹಗರಿಬೊಮ್ಮನಹಳ್ಳಿ ಎಸ್ಸಿ ಮೀಸಲು ಕ್ಷೇತ್ರದ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ನಿವೃತ್ತ ಇಂಜಿನಿಯರ್ ಹನಸಿ ಸಿ. ಶಿವಮೂರ್ತಿ ಅವರಿಂದ 2.03 ಕೋಟಿ ರೂ. ಪಡೆದು ವಂಚಿಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಈ ಸಂಬಂಧ ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಲೂಕಿನ ಬೆನಕನಹಳ್ಳಿ ಬಿಜೆಪಿ ಮುಖಂಡ ರೇವಣಸಿದ್ದಪ್ಪ ಅವರು ಸಿ.ಶಿವಮೂರ್ತಿಗೆ ಪರಿಚಯವಾಗಿ ‘ನನಗೆ ರಾಜ್ಯಮಟ್ಟದ ನಾಯಕರ ಪರಿಚಯವಿದೆ. ಖಂಡಿತ ನಿಮಗೆ ಟಿಕೆಟ್ ಕೊಡಿಸುವೆ’ ಎಂದು ನಂಬಿಸಿದ್ದಾರೆ. ನಂತರ ಬೆಂಗಳೂರಿನ ಹೋಟೆಲ್ನಲ್ಲಿ ಪುತ್ತೂರಿನ ಬಿಜೆಪಿ ಮುಖಂಡ ಎನ್.ಪಿ. ಶೇಖರ್ ಎಂಬುವರನ್ನು ಶಿವಮೂರ್ತಿಗೆ ಪರಿಚಯಿಸಿದ್ದು, ನಳಿನ್ ಕುಮಾರ್ ಕಟೀಲ್ ಅವರ ಬಿಜೆಪಿ ಕಚೇರಿಯಲ್ಲಿ ಮಾತುಕತೆ ನಡೆಸಿ ಟಿಕೆಟ್ ಕೊಡಿಸುವುದಾಗಿ ನಂಬಿಸಿದ್ದಾರೆ.
ಬಳ್ಳಾರಿ ಜಿಲ್ಲೆಯಲ್ಲಿ ಶ್ರೀರಾಮುಲು ಯಾರಿಗೂ ಪರಿಚಯವಿರಲಿಲ್ಲ. ಅವರಿಗೆ ಬಿಜೆಪಿ ಟಿಕೆಟ್ ಕೊಡಿಸಿ, ಬೆಳೆಸಿದ್ದು ನಾನೇ ಎಂದು ರೇವಣಸಿದ್ದಪ್ಪ ಹೇಳಿಕೊಳ್ಳುತ್ತಿದ್ದ. ನಾನು ಪೊಲೀಸರಿಗೆ ದೂರು ನೀಡಿದ್ದರಿಂದ ಅಪರಿಚಿತರು ಫೋನ್ ಮಾಡಿ ಜೀವ ಬೆದರಿಕೆ ಹಾಕುತ್ತಿದ್ದಾರೆ.
| ಹನಸಿ ಸಿ. ಶಿವಮೂರ್ತಿ, ವಂಚನೆಗೊಳಗಾದವರು ಇವರನ್ನು ನಂಬಿದ ಶಿವಮೂರ್ತಿ, ರೇವಣಸಿದ್ದಪ್ಪ, ಎನ್.ಪಿ. ಶೇಖರ್ ಹಾಗೂ ಇವರ ಕಾರು ಚಾಲಕ ಅರ್ಜುನ್ ಬಿ. ಶೆಟ್ಟಿ ಮತ್ತು ಕೊಟ್ಟೂರಿನ ಮೋಹನ್ಗೆ ಹಂತಹಂತವಾಗಿ ಬ್ಯಾಂಕ್ ಮತ್ತು ಫೋನ್ ಪೇ ಮೂಲಕ 2.03 ಕೋಟಿ ರೂ. ಸಂದಾಯ ಮಾಡಿದ್ದಾರೆ. ಆದರೆ, ಬ್ಯಾಲಹುಣಸಿ ರಾಮಣ್ಣಗೆ ಬಿಜೆಪಿ ಟಿಕೆಟ್ ದೊರಕಿದ್ದರಿಂದ ಶಿವಮೂರ್ತಿ ನಂಬಿಕೆ ಹುಸಿಯಾಗಿದೆ. ಇದೇ ಸಂದರ್ಭ ರೇವಣಸಿದ್ದಪ್ಪ, ಬಿಜೆಪಿ ತೊರೆದು ವಿಜಯನಗರ ಕೆಆರ್ಪಿ ಪಕ್ಷದ ಜಿಲ್ಲಾಧ್ಯಕ್ಷರಾದರು. ಬಿಜೆಪಿ ಟಿಕೆಟ್ ಕೈತಪ್ಪಿದ್ದರಿಂದ ಹತಾಶರಾಗಿದ್ದ ಶಿವಮೂರ್ತಿ, ಜನಾರ್ದನ ರೆಡ್ಡಿಯ ಕೆಆರ್ಪಿಪಿಯಿಂದ ಸ್ಪರ್ಧಿಸಿ ಹೀನಾಯ ಸೋಲು ಅನುಭವಿಸಿದರು.
ಬಿಜೆಪಿ ಟಿಕೆಟ್ ಕೊಡಿಸದಿದ್ದರೆ ಹಣ ಮರಳಿಸುವುದಾಗಿ ಹೇಳಿದ್ದರಿಂದ ರೇವಣಸಿದ್ದಪ್ಪ ಮತ್ತು ಎನ್.ಸಿ. ಶೇಖರ್ಗೆ ಹಣ ಹಿಂದಿರುಗಿಸುವಂತೆ ಬೆನ್ನು ಬಿದ್ದರೂ ಪ್ರಯೋಜನವಾಗಿಲ್ಲ. ಕೊನೆಗೆ 2023ರ ಜುಲೈನಲ್ಲಿ ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದು, ನಾನು ವಂಚನೆಗೊಳಗಾಗಿದ್ದೇನೆ. ನ್ಯಾಯ ಕೊಡಿಸಿ ಎಂದು ಶಿವಮೂರ್ತಿ ಅಳಲು ತೋಡಿಕೊಂಡಿದ್ದಾರೆ. ನಂತರ ಪೊಲೀಸರ ಮೊರೆ ಹೋಗಿದ್ದು, ಅ.19ರಂದು ಕೊಟ್ಟೂರು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
Shiva Moorthy : ಬೊಮ್ಮಾಯಿ, ಶ್ರೀರಾಮುಲುಗೆ ಟಿಕೆಟ್ ಕೊಡಿಸಿದ್ದೇ ನಾನು : ಶಿವಮೂರ್ತಿ ಸ್ಫೋಟಕ ಹೇಳಿಕೆ
ಆರೋಪ ಸಾಬೀತಾದರೆ ಸಂತೋಷ್ ವರ್ತೂರ್ಗೆ ಎಷ್ಟು ವರ್ಷ ಶಿಕ್ಷೆ? ಇಲ್ಲಿದೆ ಮಾಹಿತಿ