ಗದಗ: ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ಕೊಡಿಸುವುದಾಗಿ ಪಿಡಿಒ ಸಂಜಯ್ ಚವಡಾಳ್ ರಿಂದ ಬರೋಬ್ಬರಿ ಒಂದು ಕೋಟಿ ರೂಗಳನ್ನು ಹಿರೆಹಡಗಲಿ ಅಭಿನವ ಹಾಲಾಶ್ರೀ ಸ್ವಾಮಿಜಿಗಳು ವಂಚಿಸಿರುವ ಕುರಿತು ದೂರು ದಾಖಲಾದ ಹಿನ್ನೆಲೆ ಹಾಲಾಶ್ರೀಗಳನ್ನು ವಿಚಾರಣೆಗೆ ಒಳಪಡಿಸಲಾಗಿದೆ.
ಶಿರಹಟ್ಟಿ ಮೀಸಲು ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಒಂದು ಕೋಟಿ ಹಣವನ್ನು ಶ್ರೀಗಳು 10 ಲಕ್ಷ ಮತ್ತುಮ್ಮೆ 40 ಲಕ್ಷ ಕೊನೆಯದಾಗಿ 50 ಲಕ್ಷ ಹಣವನ್ನು ಸಂಜಯ್ ಅವರಿಂದ ಪಡೆದುಕೊಂಡಿರುತ್ತಾರೆ.ಸದ್ಯ ಸಂಜಯ್ ಅವರು ಕರ್ತವ್ಯ ಲೋಪದಿಂದಾಗಿ ಅಮಾನತಾಗಿದ್ದಾರೆ.
ಬೆಳಿಗ್ಗೆಯೇ ಹಾಲಶ್ರೀಯನ್ನ ಕರೆದುಕೊಂಡು ಹೋಗಿದ್ದ ಪೊಲೀಸರು ಹಿರೇಹಡಗಲಿ ಮಠ ಸೇರಿ ಬ್ಯಾಲವಾಡಗಿ ಹಾಗೂ ಕೊರ್ಲಹಳ್ಳಿ ಯ ಟೋಲ್ ಬಳಿ ಸ್ಥಳ ಮಹಜರು ಮಾಡಿದರು.
ನಂತರ ಮುಂಡರಗಿ ಠಾಣೆಗೆ ಹಾಲಶ್ರೀ ಗೆ ಕರೆ ತಂದು ಗದಗ ಎಸ್ ಪಿ ಬಿಎಸ್ ನೇಮಗೌಡ ನೇತೃತ್ವದಲ್ಲಿ ಮುಂಡರಗಿ ಠಾಣೆಯಲ್ಲಿ ಇಂದು ಮತ್ತು ನಾಳೆ ವಿಚಾರಣೆಗಾಗಿ ಪೊಲೀಸ್ ಕಸ್ಟಡಿಯಲ್ಲಿ ಉಳಿಸಿಕೊಳ್ಳಲಿದ್ದಾರೆ.
ಉಗ್ರರ ಚಟುವಟಿಕೆಗಳಿಗೆ ಪ್ರಶಸ್ತ ತಾಣವಾಯಿತೇ ಹು-ಧಾ ? ಸ್ಫೋಟಕ ಅಂಶ ಬಾಯ್ಬಿಟ್ಟ ಆರೋಪಿ:
ಸರ್ಕಾರಿ ಕಾಲೇಜಿನಲ್ಲಿ ಸೌಲಭ್ಯವಿರದ ಕಾರಣ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು..!
Hubli: ಹೆದ್ದಾರಿಯ ಕಾಮಗಾರಿಗೆ ಬೇಕಿದೆ ಚುರುಕು: ಜನರಲ್ಲಿ ಹುಟ್ಟಿದ ಮತ್ತೊಂದು ಅನುಮಾನ..!