Wednesday, March 12, 2025

Latest Posts

ಸಿಂದಗಿಯಲ್ಲಿ ಬಿಜೆಪಿ ಗೆಲುವು..!

- Advertisement -

www.karnatakatv.net: ತೀರ್ವವಾಗಿ ಕುತೂಹಲ ಕೆರಳಿಸಿದ ಉಪ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ಸಿಂದಗಿಯಲ್ಲಿ ಬಿಜೆಪಿಗೆ ಭರ್ಜರಿ ಗೆಲುವು ಕಂಡಿದೆ.

ಹಾನಗಲ್ ಮತ್ತು ಸಿಂದಗಿಯಲ್ಲಿ ಉಪಚುನಾವಣೆಯು ನಡೆದಿದ್ದು, ಇಂದು ಅದರ ಫಲಿತಾಂಶವು ಸಿಕ್ಕಿದೆ, ಸಿಂದಗಿಯಲ್ಲಿ ಬಿಜೆಪಿ ಅಭ್ಯರ್ತಿಯಾಗಿ ರಮೇಶ ಭೂಸನೂರ್ ಭಾಗವಹಿಸಿದ್ದು ಗೆಲುವನ್ನು ಸಾಧಿಸಿದ್ದಾರೆ, ಆದರೆ ಅಧಿಕೃತವಾಗಿ ಘೋಷಣೆಯಾಗದಿದ್ದರು, ಸಿಂದಗಿಯಲ್ಲಿ ಬಿಜೆಪಿ ಮೇಲುಗೈ ಕಂಡಿದೆ. ಕಾಂಗ್ರೆಸ್ ನಿಂದ ಅಶೋಕ್ ಮನಗೂಳಿ, ಮತ್ತು ಜೆಡಿಎಸ್ ನಿಂದ ನಾಜೀಯಾ ಅಂಗಡಿ ಸೋಲನ್ನು ಅನುಭವಿಸಿದ್ದಾರೆ. ಹಾನಗಲ್ ನಲ್ಲಿ ಇನ್ನು ಮತ ಏಣೀಕೆ ನಡೆಯುತ್ತಿದ್ದು, ಇನ್ನು ಕೆಲವೇ ಹೊತ್ತಲ್ಲಿ ಫಲಿತಾಂಶವು ಹೊರಬರಲಿದೆ. 13ನೇ ಸುತ್ತಿನಲ್ಲಿ ರಮೇಶ್ ಭೂಸನೂರ್ ಅವರು 18853 ಮತಗಳನ್ನು ಗಳಿಸಿ ಮುನ್ನಡೆಯಲ್ಲಿದ್ದಾರೆ. ಕಾಂಗ್ರೆಸ್ 38611 ಮತಗಳನ್ನು ಪಡೆದಿದ್ದಾರೆ. ಇನ್ನು ಜೆಡಿಎಸ್ ಗೆ 2538 ಮತಗಳು ಬಂದಿದೆ.

- Advertisement -

Latest Posts

Don't Miss