Wednesday, July 2, 2025

Latest Posts

ಬಿಜೆಪಿ ಯುವ ಮುಖಂಡ ಹಠಾತ್ ಸಾವು

- Advertisement -

ಹಾಸನದ ಸರಣಿ ಸಾವಿನ ಬಳಿಕ ತುಮಕೂರು ಜಿಲ್ಲೆಯಲ್ಲಿ ಘೋರ ದುರಂತವೊಂದು ನಡೆದಿದೆ. ಹೃದಯಾಘಾತಕ್ಕೆ ಇಂದು ತುಮಕೂರು ಗ್ರಾಮಾಂತರ ಕ್ಷೇತ್ರದ ಊರುಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಹೆಬ್ಬಾಕ ಸ್ವಾಮಿ ಅವರು ಸಾವನ್ನಪ್ಪಿದ್ದಾರೆ. ಹಾರ್ಟ್ ಅಟ್ಯಾಕ್ ಅನ್ನೋ ಶಬ್ಧ ಕೇಳಿದ್ರೆ ಕೆಲವರ ಹಾರ್ಟ್ ಬೀಟ್ ನಿಂತು ಹೋಗುತ್ತೆ. ಇತ್ತೀಚೆಗೆ ಹಾಸನದಲ್ಲಿ ಸಂಭವಿಸುತ್ತಿರುವ ಹೃದಯಾಘಾತದ ಪ್ರಕರಣಗಳೇ ಇದಕ್ಕೆ ಸಾಕ್ಷಿ.

36 ವರ್ಷದ ಹೆಬ್ಬಾಕ ಸ್ವಾಮಿ ಅವರು ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಬಿಜೆಪಿ ಯುವ ಮೋರ್ಚಾ ಮುಖಂಡರು ಆಗಿದ್ದರು. ಹೆಬ್ಬಾಕ ಸ್ವಾಮಿ ಅವರು ಪ್ರತಿದಿನದಂತೆ ಇಂದು ಮಗಳನ್ನು ಶಾಲೆಗೆ ಬಿಟ್ಟು ಮನೆಗೆ ಮರಳಿದ್ರು. ತುಮಕೂರು ನಗರದ ಕುವೆಂಪು ನಗರದ ತಮ್ಮ ನಿವಾಸಕ್ಕೆ ಬಂದು ಕೆಲವೇ ಕ್ಷಣಗಳಲ್ಲಿ ತಲೆ ಸುತ್ತಿ ಬಿದ್ದಿದ್ದಾರೆ. ತಕ್ಷಣ ಅವರನ್ನು ಸ್ಥಳೀಯರು ಮತ್ತು ಕುಟುಂಬಸ್ಥರು ಸಿದ್ಧಗಂಗಾ ಆಸ್ಪತ್ರೆಗೆ ದಾಖಲಿಸಿದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.

ಗ್ರಾಮ ಪಂಚಾಯಿತಿ ಅಧ್ಯಕ್ಷ ಹೆಬ್ಬಾಕ ಸ್ವಾಮಿ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಯುವ ನಾಯಕನಾಗಿ ಗುರುತಿಸಿಕೊಂಡಿದ್ದ ಹೆಬ್ಬಾಕ ಸ್ವಾಮಿಯ ಅಕಾಲಿಕ ನಿಧನ ಆಘಾತಕ್ಕೆ ಕಾರಣವಾಗಿದೆ. ಊರುಕೆರೆ ಗ್ರಾಮ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ದುಃಖದ ಛಾಯೆ ಮೂಡಿದೆ. ಜನರ ಸೇವೆಯಲ್ಲಿ ಸದಾ ತೊಡಗಿದ್ದ ಅವರು, ತಮ್ಮ ನಿಷ್ಠೆ ಮತ್ತು ಶಿಷ್ಟ ಪ್ರವೃತ್ತಿಯಿಂದ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು. ಬಿಜೆಪಿ ಮುಖಂಡರು ಹಾಗೂ ಯುವಮೋರ್ಚಾ ಕಾರ್ಯಕರ್ತರು ಅವರು ಒಬ್ಬ ಪ್ರಾಮಾಣಿಕ, ಕ್ರಿಯಾಶೀಲ ನಾಯಕನಾಗಿದ್ದೇನೆಂದು ನೆನಪಿಸಿಕೊಂಡಿದ್ದಾರೆ. ಈ ಯುವ ನಾಯಕನ ಅಕಾಲಿಕ ಅಗಲಿಕೆಯಿಂದ ಪಕ್ಷಕ್ಕೂ ಹಾಗೂ ಸಮುದಾಯಕ್ಕೂ ತುಂಬಲಾರದ ನಷ್ಟ ಎಂದು ಸಂತಾಪ ವ್ಯಕ್ತಪಡಿಸಿದ್ದಾರೆ.

- Advertisement -

Latest Posts

Don't Miss