ವಿಧಾನಪರಿಷತ್ ಉಪ ಚುನಾವಣೆ: ಬಿಜೆಪಿಯ ಅಭ್ಯರ್ಥಿ ಬಾಬೂರಾವ್ ಚಿಂಚನಸೂರು ಅವಿರೋಧವಾಗಿ ಆಯ್ಕೆ

ಬೆಂಗಳೂರು: ದಿನಾಂಕ 11-08-2022ರಂದು ವಿಧಾನಪರಿಷತ್ ನ ಒಂದು ಸ್ಥಾನಕ್ಕೆ ಉಪ ಚುನಾವಣೆಯನ್ನು ಘೋಷಣೆ ಮಾಡಲಾಗಿತ್ತು. ಆದ್ರೇ ದಿನಾಂಕ 01-08-2022ರಂದು ನಾಮಪತ್ರ ಸಲ್ಲಿಸೋದಕ್ಕೆ ಕೊನೆಯ ದಿನವಾಗಿದ್ದರೂ ಬಿಜೆಪಿಯ ಅಭ್ಯರ್ಥಿ ಬಾಬೂರಾವ್ ಚಿಂಚನಸೂರು ಮಾತ್ರ ಸಲ್ಲಿಸಿದ್ದರು. ಹೀಗಾಗಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಈ ಬಗ್ಗೆ ವಿಧಾನಸಭೆಯ ಕಾರ್ಯದರ್ಶಿ ವಿಶಾಲಾಕ್ಷಿ ಮಾಹಿತಿ ನೀಡಿದ್ದು, ಇಂದು ನಾಮಪತ್ರ ವಾಪಾಸ್ ಪಡೆಯಲು ಕೊನೆಯ ದಿನವಾಗಿತ್ತು. ಈ ವೇಳೆಯಲ್ಲಿ ಯಾವುದೇ ಅಭ್ಯರ್ಥಿ ನಾಮಪತ್ರವನ್ನು ಬಿಜೆಪಿಯ ಅಭ್ಯರ್ಥಿ ಬಾಬೂರಾವ್ ಚಿಂಚನಸೂರ್ ವಿರುದ್ಧ ಸ್ಪರ್ಧಿಸಲು ಸಲ್ಲಿಸಿರಲಿಲ್ಲ. ಹೀಗಾಗಿ ಅವರು ವಿಧಾನಪರಿಷತ್ ನ ಒಂದು ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾಗಿರೋದಾಗಿ ಘೋಷಣೆ ಮಾಡಿದ್ದಾರೆ.

About The Author