Friday, March 14, 2025

Latest Posts

ಆಡಳಿತ ಪಕ್ಷದ ವಿರುದ್ಧ ಮಾತನಾಡುವುದೇ ಬಿಜೆಪಿ ಕೆಲಸ: ಸಚಿವ ಸಂತೋಷ್ ಲಾಡ್

- Advertisement -

Hubli News: ಹುಬ್ಬಳ್ಳಿ: ಸಿಎಂ, ಡಿಸಿಎಂ ಹುದ್ದೆ ಖಾಲಿಯಿಲ್ಲ, ಅದನ್ನೆಲ್ಲ ಹೈ ಕಮಾಂಡ್ ತೀರ್ಮಾನ ಮಾಡುತ್ತೆ. ಒಕ್ಕಲಿಗ ಶ್ರೀಗಳ ಹೇಳಿಕೆಗೆ ಮುಖ್ಯಮಂತ್ರಿಗಳು ಈಗಾಗಲೇ ಸ್ಪಷ್ಟಿಕರಣ ಕೊಟ್ಟಿದ್ದಾರೆ ಎಂದು ಸಚಿವ ಸಂತೋಷ ಲಾಡ್ ಹೇಳಿದರು.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಆಗಬೇಕಾದ್ರೆ ಹೈಕಮಾಂಡ್, ಎಲ್ಲ ಶಾಸಕರು ನಿರ್ಧಾರದ ಮೇಲೆ ಆಗಬೇಕು, ಹೈಕಮಾಂಡ ಏನು ತೀರ್ಮಾನ ಮಾಡಿರುತ್ತೆ ಅದೇ ಫೈನಲ್. ಅದಕ್ಕೆ ಸಿಎಂ ಸ್ಪಷ್ಟನೆ ನೀಡಿದ್ದಾರೆ ಎಂದರು.

ಸರ್ಕಾರ ನಡೆಸಬೇಕಾದ್ರೆ ದರ ಏರಿಸಲೇಬೇಕು; ಹಾಲಿನ ದರದ ಬಗ್ಗೆ ಈಗಾಗಲೇ ಸಿಎಂ ಅವರು ಸ್ಪಷ್ಟೀಕರಣ ಕೊಟ್ಟಿದ್ದಾರೆ. ಬೇರೆ ರಾಜ್ಯಗಳಿಗೆ ಹೋಲಿಸಿದ್ರೆ ಹಾಲಿನ, ಪೆಟ್ರೋಲ್ ಡಿಸೇಲ್ ದರ ಎಲ್ಲವೂ ಕಡಿಮೆ ಇದೆ. ಸರ್ಕಾರ ನಡೆಸಬೇಕಾದ್ರೆ ದರ ಏರಿಸಬೇಕಾಗುತ್ತದೆ. 60 ಸಾವಿರ ಕೋಟಿ ರೂಪಾಯಿಯನ್ನು ನಾವು ಗ್ಯಾರಂಟಿಗೆ ಕೊಡಬೇಕಾಗುತ್ತೆ. ಅದಕ್ಕಾಗಿ ಮಾಡಬೇಕು. ಹತ್ತು ವರ್ಷಗಳಲ್ಲಿ ಕೇಂದ್ರ ಸರ್ಕಾರ ಎಷ್ಟು ಜಾಸ್ತಿ ಮಾಡಿದ್ದಾರೆ ಅದರ ಬಗ್ಗೆ ಮಾತಾಡೊದು ಬೇಡ್ವಾ. ನಿರ್ಮಲಾ ಸೀತಾರಮನ್ ಇದರ ಬಗ್ಗೆ ಮಾತಾಡಬೇಕು. ಅವರು ದೇಶ ನಡೆಸಬೇಕಾದ್ರೆ, ನಾವು ರಾಜ್ಯ ನಡೆಸಬೇಕೆಂದು ಬೆಲೆ ಏರಿಕೆಯನ್ನು ಸಮರ್ಥನೆ ಮಾಡಿಕೊಂಡರು.

ರಾಮ ಮಂದಿರ ಸೋರುತ್ತಿದೆ ಯಾರು ನಿಲ್ಲಿಸಬೇಕು..?; ಬಿಜೆಪಿ ಅವರು ಆರೋಪ ಮಾಡೊದೆ ಅವರ ಕೆಲಸ, ರಾಮ ಮಂದಿರ ಸೋರುತ್ತಿದೆ ಅದನ್ನ ಯಾರು ಹೋಗಿ ನಿಲ್ಲಸಬೇಕು..? ನೀಟ್ ಪೇಪರ್ ಲೀಕ್ ಆಯಿತು ಅದರ ಬಗ್ಗೆ ಯಾರು ಮಾತಾಡೋದ ಬೇಡ್ವಾ..? ಬಿಜೆಪಿ ಅವರು ಯಾವುದು ರೂಲಿಂಗ್ ಸರ್ಕಾರ ಇರುತ್ತೆ ಅದರ ವಿರುದ್ಧ ಮಾತಾಡೋದೆ ಅವರ ಕೆಲಸ ಎಂದು ಹರಿಹಾಯ್ದರು.

ಬರ ಪರಿಹಾರದ ವಿಚಾರಕ್ಕೆ ಮಾತನಾಡಿ, ನಾವು ಸರ್ಕಾರ ನಡೆಸ್ತಾ ಇದ್ದು ಒಂದು ವರ್ಷ ಆಯ್ತು, ಕೇಂದ್ರ ಸರ್ಕಾರದ ಹತ್ತು ವರ್ಷಗಳಲ್ಲಿ ಯಾವುದೇ ಲೋಪದೋಷಗಳು ಇಲ್ವಾ. ಬೆಲೆ ಏರಿಕೆ, ಎಂಪ್ಲಾಯಮೆಂಟ್, ಜಿಡಿಪಿ ಇವು ಯಾವುದು ಅವರ ಕಾಣ್ತಿಲ್ಲಾ ಎಂದು ಸಚಿವ ಸಂತೋಷ ಲಾಡ್ ಹೇಳಿದರು.

ಜುಲೈ 3ರಂದು ಸಿಎಂ ಮನೆಗೆ ಮುತ್ತಿಗೆ : ಬಿ. ವೈ. ವಿಜಯೇಂದ್ರ

ಬಾಹ್ಯಾಕಾಶದಲ್ಲಿ ಸಿಲುಕಿದ ಸುನೀತಾ ವಿಲಿಯನ್ಸ್; ಬಾಹ್ಯಾಕಾಶದಲ್ಲಿ ಏನಾಗ್ತಿದೆ ಗೊತ್ತಾ?

2028ಕ್ಕೆ ನಾನೇ ರಾಜ್ಯದ ಸಿಎಂ ಸತೀಶ್‌ ಜಾರಕಿಹೊಳಿ, ಡಿಕೆಗೆ ಸೆಡ್ಡು

- Advertisement -

Latest Posts

Don't Miss