Saturday, April 5, 2025

Latest Posts

ವಿನಯ್ ಕುಲಕರ್ಣಿ ವಿರುದ್ಧ ಆರೋಪ ಮಾಡದಾಕೆಯ ವಿರುದ್ಧ ಬ್ಲಾಕ್‌ಮೇಲ್ ಕೇಸ್

- Advertisement -

Hubli News: ಹುಬ್ಬಳ್ಳಿ : ಬ್ಲ್ಯಾಕ್‌ಮೇಲ್ ಮಾಡಿ 20 ಲಕ್ಷ ರೂ. ವಸೂಲಿ ಮಾಡಿದ್ದಲ್ಲದೇ, ಜೀವ ಬೆದರಿಕೆ ಹಾಕಿದ್ದಾರೆಂದು ಆರೋಪಿಸಿ ನೀರಾವರಿ ಇಲಾಖೆ ಗುತ್ತಿಗೆದಾರರೊಬ್ಬರು ಶಾಸಕ ವಿನಯ ಕುಲಕರ್ಣಿ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿರುವ ಮಂಜುಳಾ ಪೂಜಾರ ಸೇರಿ ನಾಲೈದು ಜನರ ವಿರುದ್ಧ ಇಲ್ಲಿಯ ಗೋಕುಲ್ ರೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಆರೋಪಿಗಳಾದ ಜಗದೀಶ ಸಣ್ಣಕ್ಕಿ, ೨ ಹನುಮಂತಪ್ಪ ಬಂಡಿವಡ್ಡರ, ಮಂಜುಳಾ ಪೂಜಾರ, ಸಿದ್ದಪ್ಪ ಹೊಸಮನಿ ಸೇರಿ ಇತರರ ವಿರುದ್ಧನೀರಾವರಿ ಇಲಾಖೆ ಪ್ರಥಮ ದರ್ಜೆ ಗುತ್ತಿಗೆದಾರ ಅರ್ಜುನ ಗುಡ್ಡದ ದೂರು ನೀಡಿದ್ದಾರೆ. ರಾಮದುರ್ಗ ತಾಲೂಕಿನ ಕಲಹಾಳ ಗ್ರಾಮದಲ್ಲಿರುವ ತಮ್ಮ ಸ್ವಂತ ಜಮೀನಿನಲ್ಲಿ ಹತ್ತಿ ಬೀಜ ಬಿತ್ತನೆಗೆ ಕೆಲವು ಪೂರೈಕೆದಾರರನ್ನು ಸಂಪರ್ಕಿಸಿದ್ದೆ.

ಮಾಹಿತಿ ಪಡೆದುಕೊಂಡು ಆರೋಪಿ ಮಂಜುಳಾ ಪೂಜಾರ ತಮ್ಮನ್ನು ಸಂಪರ್ಕಿಸಿ, ಹತ್ತಿ ಬೀಜ ಕಂಪನಿ ಅಂಬಾಸಿಡರ್ ಎಂದು ಪರಿಚಯಿಸಿಕೊಂಡಿ ದ್ದರು. ಬಳಿಕ ಖುದ್ದು ಭೇಟಿಯಾಗುವುದು ಮತ್ತು ಆತ್ಮೀಯತೆಯಿಂದ ಇದ್ದಂತೆ ನಟಿಸಿ ಆಕೆಯ ಜತೆಗಿದ್ದ ಜಗದೀಶನನ್ನು ಗಂಡ ಎಂದು ಹೇಳಿ ಪರಿಚಯಿಸಿದ್ದರು. ಅದಾದ ಮೇಲೆ ಶಿಗ್ಗಾವಿಯ ಹನುಮಂತಪ್ಪ ಬಂಡಿವಡ್ಡರ, ಹಾವೇರಿಯ ಸಿದ್ದಪ್ಪ ಹೊಸಮನಿ ಅವರನ್ನು ಪರಿಚಯಿಸಿದ್ದರು. ಈ ಬಗ್ಗೆ ಸಂಶಯ ಬಂದು ವಿಚಾರಿಸಿದಾಗ ಜಗದೀಶ ಸಣ್ಣಕ್ಕೆ ಆಕೆಯ 3ನೇ ಪತಿ ಎಂದು ಗೊತ್ತಾಗಿದ್ದು, ಬಳಿಕ ಆರೋಪಿಗಳು ಹಣ ಕೊಡುವಂತೆ ಒತ್ತಾಯಿಸಿದ್ದರು. ಕೊಡದಿದ್ದಾಗ, ನಕಲಿ ಫೋಟೊ, ವಿಡಿಯೋ ಮಾಡಿಸಿ ಹೆದರಿಸಿ ಹಣಕ್ಕೆ ಬೇಡಿಕೆ ಇಟ್ಟು ಬ್ಲ್ಯಾಕ್‌ಮೇಲ್ ಮಾಡಿ 20 ಲಕ್ಷರೂ. ವಸೂಲಿ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಲಾಗಿದೆ.

- Advertisement -

Latest Posts

Don't Miss