ಆಸ್ಪತ್ರೆಯಲ್ಲೇ ರಕ್ತಪಾತ, ಕಿಮ್ಸ್‌ನಲ್ಲಿ ಭಯಾನಕ ಘಟನೆ!

ಗಾಂಜಾ ವಿಚಾರಕ್ಕಾಗಿ ಕಿಮ್ಸ್ ಆಸ್ಪತ್ರೆಯಲ್ಲೇ ಚಾಕು ಹಾಕಿದ ಘಟನೆಗೆ ಸಂಬಂಧಿಸಿದಂತೆ, ಪೊಲೀಸರು ಏಳು ಜನ ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ.

ಕಸಬಾಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೈಯದ್, ಹಸನ್ ನಾಯಕ್ ಮತ್ತು ಹಜರೆಸಾಬ ಎಂಬ ವ್ಯಕ್ತಿಗಳು ಪರಸ್ಪರ ಜಗಳ ಮಾಡಿಕೊಂಡಿದ್ದರ ಬಗ್ಗೆ ಕಸಬಾಪೆಟೆ ಪೊಲೀಸ್ ಠಾಣೆಯಲ್ಲಿ ದೂರು ಪ್ರತಿ ದೂರು ಪ್ರಕರಣಗಳು ದಾಖಲಾಗಿದೆ.

ಹಲ್ಲೆ ಆಗಿದ್ದ ವ್ಯಕ್ತಿಗಳು ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ವೇಳೆ, ಸೈಯದ್ ಎಂಬಾತನಿಗೆ ಹಸನ್ ನಾಯಕ್ ಎಂಬಾತನು ತನ್ನ ಸಹಚಾರರನ್ನು ಕರೆದುಕೊಂಡು ಬಂದು ಕಿಮ್ಸ್ ಆಸ್ಪತ್ರೆಯಲ್ಲೇ ಚಾಕು ಹಾಕಿ ಪರಾರಿಯಾಗಿದ್ದರು.

ಈ ಘಟನೆ ಸಂಬಂಧಪಟ್ಟಂತೆ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸೋನು ಪಠಾಣ್, ಅಫ್ತಾಬ್ ಪಠಾಣ್, ಹಸನ ನಾಯಕ್, ಅಲ್ತಾಫ್ ಧಾರವಾಡ, ಮಲ್ಲಿಕ ರಿಹಾನ, ಖಾಜಾ, ಇಬ್ರಾಹಿಂ ಅಜಾನ ಸೌದಾಗರ
ಒಟ್ಟು ಏಳು ಜನ ಆರೋಪಿಗಳನ್ನು ಬಂಧಿಸಿದ್ದಾರೆ.

About The Author