ಏ.11ರಂದು ವಜಾಗೊಂಡಿದ್ದ ನೌಕರರಿಗೆ ಪುನರ್ ಆದೇಶ – ಬಿಎಂಟಿಸಿ

ಬೆಂಗಳೂರು: ಮುಷ್ಕರದ ಸಂದರ್ಭದಲ್ಲಿ ವಜಾಗೊಂಡಿದ್ದಂತ ನೌಕರರನ್ನು ಪುನರ್ ಕೆಲಸಕ್ಕೆ ನೇಮಕಾತಿ ಮಾಡಿಕೊಳ್ಳುವ ಸಂಬಂಧ, ಏಪ್ರಿಲ್ 11, 2022ರಂದು ಪುನರ್ ನೇಮಕಾತಿ ಆದೇಶ ನೀಡಲಾಗುತ್ತದೆ ಎಂಬುದಾಗಿ ಬಿಎಂಟಿಸಿ ತಿಳಿಸಿದೆ.

ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಏಪ್ರಿಲ್ 11, 2022ರಂದು ಬೆಳಿಗ್ಗೆ 11 ಗಂಟೆಗೆ ಬಿಎಂಟಿಸಿ ಕೇಂದ್ರ ಕಚೇರಿಯಲ್ಲಿ ವಜಾಗೊಂಡಿದ್ದಂತ ನೌಕರರಿಗೆ ಪುನರ್ ನೇಮಕಾತಿ ಆದೇಶವನ್ನು ಸಾರಿಗೆ ಸಚಿವ ಬಿ.ಶ್ರೀರಾಮುಲು ವಿತರಿಸಲಿದ್ದಾರೆ ಎಂಬುದಾಗಿ ತಿಳಿಸಿದೆ.

About The Author