Saturday, October 12, 2024

Latest Posts

ವಿದ್ಯಾರ್ಥಿಗಳ ಬಸ್ ಪಾಸ್ ದರ ಏರಿಕೆ..!

- Advertisement -

ಬೆಂಗಳೂರು: ಶಾಲೆಗಳು ಆರಂಭವಾದ ಬೆನ್ನಲ್ಲೆ ಬಿಎಂಟಿಸಿ ವಿದ್ಯಾರ್ಥಿಗಳ ಬಸ್ ಪಾಸ್ ದರವನ್ನು ಏರಿಕೆ ಮಾಡಿದೆ.

ವಿದ್ಯಾರ್ಥಿಗಳ ಪ್ರತಿ ತಿಂಗಳ ಬಿಎಂಟಿಸಿ ಬಸ್ ಪಾಸ್ ಮೇಲೆ 30 ರೂಪಾಯಿ ಏರಿಕೆ ಮಾಡಲಾಗಿದೆ. ಸದ್ಯ ಬಿಎಂಟಿಸಿ ನಷ್ಟದಲ್ಲಿದ್ದು ಪಾಸ್ ದರ ಹೆಚ್ಚಳ ಮಾಡೋದು ಅನಿವಾರ್ಯ ಅಂತ ಸಾರಿಗೆ ಇಲಾಖೆ ಮೂಲಗಳು ತಿಳಿಸಿವೆ. ಬಿಎಂಟಿಸಿಯ ಈ ನಿರ್ಧಾರಕ್ಕೆ ಪೋಷಕರು ಆಕ್ರೋಶವ್ಯಕ್ತಪಡಿಸುತ್ತಿದ್ದಾರೆ.

ಪ್ರಾಥಮಿಕ ಶಾಲಾ ಮಕ್ಕಳ ಮಾಸಿಕ ಬಸ್ ಪಾಸ್ ದರವನ್ನು 170 ರೂಪಾಯಿಯಿಂದ 200 ರೂಪಾಯಿಗೆ ಏರಿಕೆ ಮಾಡಲಾಗಿದೆ. ಪ್ರೌಢಶಾಲಾ ವಿದ್ಯಾರ್ಥಿಗಳ ಮಾಸಿಕ ಬಸ್ ಪಾಸ್ ದರವನ್ನು 670 ರೂಪಾಯಿಯಿಂದ 700 ರೂಪಾಯಿಗೆ ಏರಿಕೆ ಮಾಡಲಾಗಿದೆ. ಹೀಗೆ, ಪಿಯು, ತಾಂತ್ರಿಕ , ಪದವಿ ವಿದ್ಯಾರ್ಥಿಗಳ ಮಾಸಿಕ ಪಾಸ್ ಗಳ ಮೇಲೆಯೂ ಬಿಎಂಟಿಸಿ 30 ರೂಪಾಯಿ ದರ ಏರಿಕೆ ಮಾಡಿದೆ.

ಬಿಪಿಎಲ್ ಕಾರ್ಡ್ ಇರೋವ್ರು ಯಾವ್ದಕ್ಕೂ ಎಚ್ಚರವಾಗಿರಿ. ಯಾಕೆ ಅಂತ ತಿಳ್ಕೊಬೇಕಾದ್ರೆ ಈ ವಿಡಿಯೋ ಮಿಸ್ ಮಾಡದೇ ನೋಡಿ

https://www.youtube.com/watch?v=rVVoF8-8Ooc

- Advertisement -

Latest Posts

Don't Miss