ದಿನದಿಂದ ದಿನಕ್ಕೆ ಬಿಸಿಲಿನ ಹವೆ ಹೆಚ್ಚುತ್ತಿದೆ. ಬಿಸಿ ಗಾಳಿಗೆ ದೇಹ ನಿರ್ಜಲೀಕರಣವಾಗುವ ಸಾಧ್ಯತೆ ಹೆಚ್ಚಾಗಿದೆ. ಅದಷ್ಟೇ ಅಲ್ಲದೆ ಸುಸ್ತು, ಬಾಯಾರಿಕೆ, ದಣಿವು ಸಾಮಾನ್ಯಾವಾಗಿ ಕಾಡುವ ಸಮಸ್ಯವಾಗಿದೆ. ದೇಹದಲ್ಲಿನ ನೀರಿನ ಸಾಂಧ್ರತೆ ಕಡಿಮೆಯಾಗಿ ನಿರ್ಜಲೀಕರವಾಗುತ್ತಿದ್ದು, ಅರ್ಧ ಆರೋಗ್ಯ ಸಮಸ್ಯೆಗಳು ಇದರಿಂದಲೇ ಆರಂಭವಾಗುತ್ತಿದೆ. ಹೀಗಾಗಿ ಹೆಚ್ಚು ನೀರಿನ ಸೇವನೆ, ನೀರಿನ ಅಂಶವುಳ್ಳ ಹಣ್ಣುಗಳ ಸೇವನೆ ಮಾಡುವುದು ದೇಹಕ್ಕೆ ಅಗತ್ಯವಾಗಿದೆ.
ಈಗ ಮಾವಿನ ಹಣ್ಣಿನ ಕಾಲ ಆರಂಭವಾಗಿದೆ. ಮಾವಿನ ಹಣ್ಣಿನ ಸೇವನೆಯಿಂದ ದೇಹಕ್ಕೆ ಸಾಕಷ್ಟು ಪ್ರಮಾಣದ ನೀರಿನ ಅಂಶ ಸಿಗುತ್ತದೆ. ಹೀಗಾಗಿ ನಿರ್ಜಲೀಕರಣ ಸಮಸ್ಯೆಯಿಂದ ದೂರವಿರಬಹುದು. ಮಾವಿನ ಹಣ್ಣುಗಳ ಜ್ಯೂಸ್, ಮಿಲ್ಕ್‌ಶೇಕ್‌ಗಳನ್ನು ಮಾಡಿಕೊಂಡು ಸೇವಿಸಿದರೆ ಆರೋಗ್ಯಕ್ಕೂ ಒಳ್ಳೆಯದು.
ಪಪಾಯ ಹಣ್ಣಿನಲ್ಲಿ ವಿಟಮಿನ್ ಸಿ ಅಂಶವಿದೆ. ಇದು ಅಪಧಮನಿಗಳಲ್ಲಿ ಸಂಗ್ರಹವಾಗುವ ಕೊಲೆಸ್ಟ್ರಾಲ್ ಮಟ್ಟವನ್ನು ತಡೆಯಲು ಸಹಾಯ ಮಾಡುತ್ತದೆ. ರೋಗನಿರೋಧಕ ಶಕ್ತಿಯನ್ನೂ ಹೆಚ್ಚಿಸುವ ಗುಣ ಹೊಂದಿರುವ ಪಪಾಯ ಹೆಚ್ಚು ನೀರಿನ ಅಂಶವನ್ನೂ ಕೂಡ ಹೊಂದಿದೆ. ಹೀಗಾಗಿ ದೇಹ ನಿರ್ಜಲೀಕರಣವಾಗುವುದನ್ನು ಇದು ತಪ್ಪಿಸುತ್ತದೆ. ಇದಷ್ಟೇ ಅಲ್ಲದೆ ಪಪ್ಪಾಯವನ್ನು ಮಧುಮೇಹ ಇರುವವರೂ ಸೇವಿಸಬಹುದು ಹಾಗೂ ತೂಕ ಇಳಿಸಿಕೊಳ್ಳಲೂ ಸಹ ಸಹಾಯ ಮಾಡುತ್ತದೆ.
ಇನ್ನು ಕಲ್ಲಂಗಡಿಯಲ್ಲಿ ಹೆಚ್ಚಿನ ನೀರಿನ ಅಂಶವಿರುವುದರಿಂದ ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣುಗಳಿಗೆ ಭಾರೀ ಬೇಡಿಕೆ ಇದೆ. ಇದರ ಸೇವನೆಯಿಂದ ದೇಹದಲ್ಲಿ ನಿರ್ಜಲೀಕರಣ ಸಮಸ್ಯೆ ಕಾಡುವುದಿಲ್ಲ. ಜೊತೆಗೆ ಕಲ್ಲಂಗಡಿ ಬೀಜಗಳು ಕೂಡ ದೇಹಕ್ಕೆ ಸಾಕಷ್ಟು ಪ್ರಮಾಣದಲ್ಲಿ ಆರೋಗ್ಯ ವೃದ್ಧಿಸಲು ಸಹಾಯ ಮಾಡುತ್ತವೆ. ಅಲ್ಲದೆ ಕ್ಯಾನ್ಸರ್ ತಡೆಗಟ್ಟಲು ಕೂಡ ಕಲ್ಲಂಗಡಿ ಹಣ್ಣು ನೆರವಾಗುತ್ತದೆ. ಆದ್ದರಿಂದ ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣನ್ನು ಹೆಚ್ಚು ಸೇವಿಸುವುದರಿಂದ ದೇಹವನ್ನು ಡಿಹೈಡ್ರೇಟ್ ಆಗದಂತೆ ನೋಡಿಕೊಳ್ಳುತ್ತದೆ.
ಕಿತ್ತಳೆ ಹಣ್ಣುಗಳಲ್ಲಿ ವಿಟಮಿನ್ ಸಿ, ಫೈಬರ್ ಅಂಶ ಅಡಗಿಕೊಂಡಿದೆ. ಹಾಗೂ ಸಮೃದ್ಧವಾದ ನೀರಿನ ಅಂಶ ಹೊಂದಿದ್ದು, ದೇಹದಲ್ಲಿ ನೀರಿನ ಅಂಶದ ಕೊರತೆ ಆಗದಂತೆ ನೋಡಿಕೊಳ್ಳತ್ತದೆ. ಕಡಿಮೆ ಕೊಲೆಸ್ಟ್ರಾಲ್ ಹೊಂದಿರುವ ಈ ಹಣ್ಣು ದೇಹದಲ್ಲಿ ನೀರಿನ ಅಂಶ ಕಡಿಮೆಯಾಗದಂತೆ ನೋಡಿಕೊಳ್ಳುವುದರಿಂದ ವರ್ಕೌಟ್ ಮಾಡುವವರಿಗೆ ಕಿತ್ತಳೆ ಉತ್ತಮ ಆಹಾರವಾಗಿದೆ. ಹಾಗಾಗಿ ಕಿತ್ತಳೆ ಹಣ್ಣಿನ ಬಳಕೆ ಮಾಡುವುದು ಉತ್ತಮ.
ಸಾಕಷ್ಟು ಪ್ರೋಟೀನ್ ಅಂಶಗಳನ್ನು ಹೊಂದಿರುವ ಖರ್ಬೂಜ ಹಣ್ಣಿನಲ್ಲಿ ನೀರಿನ ಅಂಶವೂ ಹೆಚ್ಚಾಗಿ ಇರುವುದರಿಂದ ದೇಹವನ್ನು ನಿರ್ಜಲೀಕರಣವಾಗದಂತೆ ತಡೆಯುತ್ತದೆ. ಖರ್ಬೂಜ ಹಣ್ಣಿನ ಜ್ಯೂಸ್, ಮಿಲ್ಕ್ ಶೇಖ್‌ನಂತಹ ಪಾನೀಯಗಳನ್ನು ಕುಡಿದರೆ ದೇಹದ ತೂಕ ಇಳಿಕೆ, ಅಜೀರ್ಣತೆ, ಮಲಬದ್ಧತೆಯಂತಹ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಅದೂ ಅಲ್ಲದೆ ಸಾಮಾನ್ಯವಾಗಿ ಎಲ್ಲಾ ಸಮಯದಲ್ಲಿಯೂ ಕೂಡ ಖರ್ಬೂಜ ಹಣ್ಣು ಮಾರುಕಟ್ಟೆಯಲ್ಲಿ ಸಿಗುತ್ತದೆ.
ಪ್ರಕೃತಿ ಪ್ರಭಾಕರ್, ಕರ್ನಾಟಕ ಟಿವಿ, ಸಿನಿಮಾ ಬ್ಯುರೋ